ಮಡಿಕೇರಿ, ಆ. ೫: ಪಿರಿಯಾಪಟ್ಟಣದಲ್ಲಿ ನಡೆದ ಪ್ರಥಮ ವರ್ಷದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಗೆ ಪ್ರಥಮ ಬಹುಮಾನ ಲಭಿಸಿದೆ.

ಪಿರಿಯಾಪಟ್ಟಣದ ದೇವರಾಜ ಅರಸು ಭವನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ವೀರಾಜಪೇಟೆ, ಗೋಣಿಕೊಪ್ಪ, ಕುಶಾಲನಗರ ಸೇರಿದಂತೆ ವಿವಿಧೆಡೆಗಳ ನೃತ್ಯ ಪಟುಗಳು ಭಾಗವಹಿಸಿದ್ದರು.

ಸೀನಿಯರ್ಸ್ ಸೋಲೋ, ಸೀನಿಯರ್ ಗ್ರೂಪ್, ಜೂನಿಯರ್ ಸೋಲೋ, ಜೂನಿಯರ್ ಗ್ರೂಪ್, ಸಬ್ ಜೂನಿಯರ್ ಸೋಲೋ, ಸಬ್ ಜೂನಿಯರ್ ಗ್ರೂಪ್ ವಿಭಾಗಗಳಲ್ಲಿ ನೃತ್ಯ ಪ್ರದರ್ಶನ ನಡೆಯಿತು.

ಈ ಪೈಕಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಗೆ ಸೀನಿಯರ್ ವಿಭಾಗದಲ್ಲಿ ಪ್ರದರ್ಶಿಸಿದ ನೃತ್ಯಕ್ಕೆ ಪ್ರಥಮ ಬಹುಮಾನ ಲಭ್ಯವಾಗಿದೆ.

ಸ್ಪರ್ಧೆಯ ತೀರ್ಪುಗಾರರಾಗಿ ಪ್ರದೀಪ್ ಹಾಗೂ ಜಗ್ಗಿ ಮಾಸ್ಟರ್ ಆಗಮಿಸಿದ್ದರು. ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ತರಬೇತುದಾರರಾದ ಮಹೇಶ್ ನೇತೃತ್ವದಲ್ಲಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.

ಭಾಗವಹಿಸಿದ ವಿದ್ಯಾರ್ಥಿಗಳು : ಶಶಾಂಕ್ ಪೊನ್ನಪ್ಪ, ವಿವೇಕ್, ದಿಲನ್, ತನಿಷ್, ಕಿಶನ್, ವರುಣವಿ, ತ್ರಿಷಾ, ಕನ್ನಿಕೆ, ಓಶಿನ್, ದೀಪಿಕ್ಷ, ಯಶ್ವಿತಾ, ಪಂಚಮಿ, ಕನ್ನಿಕಾ, ಆರಾಧ್ಯ, ಹರ್ಷಿತ, ಯಶಿಕ, ಶಿವಾನಿ, ಕುನ್ಶಿ.