ಮಡಿಕೇರಿ, ಆ. ೫: ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ತೀನಿ ನಮ್ಮೆ ಪೈಪೋಟಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ತಾ. ೧೦ ರಂದು ನಡೆಯಲಿದೆ.

ಬೇಂಗ್‌ನಾಡ್ ಕೊಡವ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡಿರ ನಳಿನಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬೇಂಗ್‌ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೇಂಗ್‌ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಕೆ. ಕುಂಞಪ್ಪ ಪಾಲ್ಗೊಳ್ಳಲಿದ್ದಾರೆ. ಸಿನಿಮಾ ಕ್ಷೇತ್ರದ ಸಾಧಕರಾದ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ, ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.

‘ಕಕ್ಕಡತ್‌ರ ಬದ್‌ಕ್ - ಅಂದ್ ಇಂದ್’ ವಿಷಯದ ಕುರಿತು ಅಪ್ಪಾರಂಡ ರತಿ ಬಿದ್ದಪ್ಪ ಅವರು ವಿಚಾರ ಮಂಡನೆ ಮಾಡಲಿದ್ದಾರೆ ನಾಡ್ ಕೋಳಿ ಕರಿ, ಕಕ್ಕಳೆ ಞಂಡ್ ಕರಿ, ಬೈಂಬಳೆ ಪಲ್ಯ, ಚುಟ್ಟ ಕೈಪುಳಿ ಪಜ್ಜಿ, ಚೋರಂಗೆ ಪಾರ, ತಾತೆತೊಪ್ ಬರ್ತದ್, ಬಡವ ಕಜ್ಜಾಯ, ಮದ್ದ್ಪುಟ್, ಮದ್ದ್ ಪಾಯಸ ಮತ್ತು ಕೇಂಬುಕರಿ ಸ್ಪರ್ಧೆ ನಡೆಯಲಿದೆ. ಇದು ಮಹಿಳೆಯರಿಗೆ ಸೀಮಿತವಾದ ಸ್ಪರ್ಧೆಯಾಗಿದ್ದು, ಒಬ್ಬರು ಎರಡು ಸ್ಪರ್ಧೆಯಲ್ಲಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.