ಕೂಡಿಗೆ, ಆ. ೪: ಚಿಪ್ಸ್., ಹಲ್ವಾ., ಉಪ್ಪೇರಿ, ಪಾಯಸ., ದೋಸೆ, ಸೂಪ್., ಹೀಗೇ ವಿವಿಧ ಬಗೆಯ ಪೌಷ್ಟಿಕ ಹಾಗೂ ರುಚಿಯಾದ ಖಾದ್ಯಗಳನ್ನು ತಯಾರಿಸಲು ಬಳಸಲಾಗುವ ಸಿಹಿ ಗೆಣಸಿಗೆ ಅದೃಷ್ಟ ಕೂಡಿ ಬಂದಿದೆ., ಮಳೆ ಮತ್ತು ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಬೆಳೆಯಲಾದ ಸಿಹಿ ಗೆಣಸಿನ ಬೆಲೆ ಇದೀಗ ಏರಿಕೆ ಕಂಡಿದ್ದು, ರೈತರ ಮುಖದಲ್ಲಿ ತೃಪ್ತಿದಾಯಕ ನಗು ಕಾಣಿಸುವಂತಾಗಿದೆ. ಕಳೆದ ತಿಂಗಳಲ್ಲಿ ಒಂದು ಕೆ.ಜಿ. ಸಿಹಿ ಗೆಣಸಿನ ಬೆಲೆ ೨೦ರಿಂದ ೨೫ ರೂಪಾಯಿಗಳಷ್ಟು ಇದ್ದದ್ದು ಇದೀಗ ರೂ. ೩೦ ರಿಂದ ೩೨ ರೂ. ಗಳಿಗೆ ಏರಿಕೆಯಾಗಿದೆ.

ಜಿಲ್ಲೆಯ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ರೈತರು ಕಡಿಮೆ ಖರ್ಚಿನಲ್ಲಿ , ಹೆಚ್ಚು ಕಾರ್ಮಿಕರ ಬಳಕೆ ಇಲ್ಲದೆ ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಬೇಸಾಯ ಮಾಡುವುದರಿಂದ ಸ್ವಲ್ಪ ಪ್ರಮಾಣದ ಆದಾಯ ಬರುತ್ತಿತ್ತು, ಜೊತೆಯಲ್ಲಿ ಗೆಣಸು ಬಳ್ಳಿಯನ್ನು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಗೋವುಗಳಿಗೆ ಮೇವಿಗಾಗಿ ಬಳಸುತ್ತಾರೆ. ಈ ಸಾಲಿನ ಕಳೆದ ತಿಂಗಳಿನಿAದ ಸ್ವಲ್ಪ ಮಟ್ಟಿಗೆ ಸಿಹಿ ಗೆಣಸಿನ ಬೆಲೆಯಲ್ಲಿ ಏರಿಕೆ ಕಂಡು ರೈತರು ಖರ್ಚು ಮಾಡಿದ ಹಣವನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಕಳೆದ ೫ ತಿಂಗಳಿAದಲೂ ಸಿಹಿ ಗೆಣಸಿನ ಬೆಲೆ ಒಂದು ಕೆ.ಜಿ.ಗೆ ೨೦ ರಿಂದ ೨೫ರಷ್ಟಿತ್ತು. ಖರೀದಿದಾರ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಖರೀದಿಸಿ ಪಕ್ಕದ ರಾಜ್ಯಗಳಾದ ಕೇರಳ, ಮತ್ತು ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದರು. ಇದೀಗ ದಿಢೀರ್ ಅಗಿ ಕಳೆದ ತಿಂಗಳಿAದ ಬೆಲೆಯಲ್ಲಿ ಏರಿಳಿತಗಳು ಅಗುತ್ತಾ ೧೦ ರೂ. ಗಳಿಂದ ೧೨ ರೂ.ಗಳಷ್ಟು ಇದ್ದಿದ್ದು ಹೊರ ರಾಜ್ಯಗಳಲ್ಲಿ ಸಿಹಿ ಗೆಣಸಿಗೆ ಭಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ೩೦ ರೂ ನಿಂದ ೩೨ ರೂಗಳಿಗೆ ಏರಿಕೆ ಅಗಿದೆ. ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಬೇಸಾಯ ಮಾಡಿ ಮೂರು ತಿಂಗಳು ಕಳೆದಿರುವ ಸಹಿ ಗೆಣಸು ಬೆಳೆಯನ್ನು ಈ ವ್ಯಾಪ್ತಿಯ ರೈತರು ಕೀಳಲು ಆರಂಭಿಸಿದ್ದಾರೆ.

ಈಗಾಗಲೇ ಸಿಹಿ ಗೆಣಸು ಬಳ್ಳಿ ಬೇಸಾಯ ಮಾಡಿ ೫ ತಿಂಗಳು ಕಳೆದಿವೆ. ಬೆಳೆಯು ಉತ್ತಮವಾಗಿ ಬಂದಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ಬೆಲೆ ಇರುವುದರಿಂದ ಕಟಾವು ಮಾಡಲು ಆರಂಭಿಸಿದ್ದಾರೆ.

ಸಿಹಿ ಗೆಣಸು ಐದರಿಂದ ಐದೂವರೆ ತಿಂಗಳಿನ ಬೆಳೆಯಾಗಿದ್ದು, ೫ ತಿಂಗಳು ಕಳೆದರೆ ಭೂಮಿಯಲ್ಲಿ ಗೆಣಸಿಗೆ ಹುಳು ಹಿಡಿಯಲು ಆರಂಭವಾಗಲಿದೆ. ಹಾಗಾಗಿ ಕಟಾವು ಮಾಡುವಲ್ಲಿ ತೊಡಗಿದ್ದಾರೆ.

ಸಿಹಿ ಗೆಣಸು ಬೆಳೆದ ವ್ಯಾಪ್ತಿಯ ಪ್ರಗತಿ ಪರ ರೈತರಾದ ಸ್ವಾಮಿ, ರವಿ, ಅನಿಲ್, ಶಶಿಧರ್, ಜಯಮ್ಮ, ಶಿವಣ್ಣ. ರೈತ ಸಂಘದ ಅಧ್ಯಕ್ಷ ರಾಮು ಚಾಮೇಗೌಡ, ಸೇರಿದಂತೆ ರೈತರು ತಮ್ಮ ಬೇಸಾಯದ ಅನುಭವವನ್ನು ಹಂಚಿಕೊAಡಿದ್ದಾರೆ.

ಕೆ.ಕೆ. ನಾಗರಾಜಶೆಟ್ಟಿ