ಐಗೂರು, ಆ.೪: ನೇಪಾಳದ ಕಟ್ಮಂಡುವಿನ ಮೈತ್ರಿ ಸ್ಪೋರ್ಟ್ಸ್ ಹಬ್ನಲ್ಲಿ ನಡೆದ ೩ನೇ ವರ್ಲ್ಡ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಕೊಡಗಿನ ಕ್ರೀಡಾಪಟುಗಳನ್ನು ಹೊಂದಿದ್ದ ಭಾರತ ತಂಡ ಅತ್ಯುತ್ತಮ ಸಾಧನೆಗೈದಿದೆ.
ಪಂದ್ಯಾವಳಿಯಲ್ಲಿ ಭಾರತ ತಂಡದ ಪರವಾಗಿ ಕರ್ನಾಟಕ ರಾಜ್ಯದಿಂದ ೨೧ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾಗವಹಿಸಿದ ಕರ್ನಾಟಕ ತಂಡದ ಕ್ರೀಡಾಪಟುಗಳು ೧೦ ಚಿನ್ನದ ಪದಕ, ೮ ಬೆಳ್ಳಿ ಪದಕ ಹಾಗೂ ೩ ಕಂಚಿನ ಪದಕ ಸೇರಿ ಒಟ್ಟು ೨೧ ಪದಕಗಳನ್ನು ಪಡೆದುಕೊಂಡರು. ತಂಡದಲ್ಲಿ ಭಾಗವಹಿಸಿ ಸ್ಪರ್ಧಿಸಿದ ಕೊಡಗು ಜಿಲ್ಲೆಯ ೯ ಕ್ರೀಡಾಪಟುಗಳು ೯ ಪದಕಗಳನ್ನು ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಕೌಶಿಕ್ ಕುಮಾರ್ ಯು.ಸಿ, ಮಹಮ್ಮದ್ ಯಾಸೀನ್, ಮಹಮ್ಮದ್ ಹಫೀಸ್, ಚಿನ್ನದ ಪದಕ ಪಡೆದಿದ್ದಾರೆ. ಅಜಯ್ ಎನ್.ಎಸ್, ಮನ್ವಿತ್ ಮೋಹನ್ ಎಂ, ಸ್ರಿಯಾನ್ ಗೌಡ ಡಿ.ಹೆಚ್, ಮಿತೇಶ್ ಜೆ ಹಾಗೂ ರಿತನ್ ಡಿ.ಎಸ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಸಾತ್ವಿಕ ಬಿ.ಎಸ್ ಕಂಚಿನ ಪದಕವನ್ನು ಪಡೆದಿದ್ದಾರೆ.
ಇವರಿಗೆ ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುದರ್ಶನ್ ಅವರು ತರಬೇತಿ ನೀಡಿದ್ದಾರೆ.