- ಅನಿಲ್ ಹೆಚ್.ಟಿ.
ಅಂತೂ ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಿದೆ. ಡಿ.ಕೆ. ಶಿವಕುಮಾರ್ ಈ ಮೂಲಕ ೨೦ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಸರತ್ತಿಗೆ ಅಂತ್ಯ ಹಾಡಿದ್ದಾರೆ. ಇದರಿಂದಾಗಿ ನಿರೀಕ್ಷೆಯಂತೆಯೇ ಎಲ್ಲಾ ಶಾಸಕರನ್ನು ಸಮಾಧಾನಪಡಿಸುವ ಮತ್ತೊಂದು ರಾಜಕೀಯ ಕಸರತ್ತಿಗೆ ಶಿವಕುಮಾರ್ ಸಿದ್ಧರಾಗಬೇಕಾಗಿದೆ.
ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆಯಲ್ಲಿಯೇ ಸಚಿವರಾಗಿ ಸ್ಥಾನ ದೊರಕದ ಅನೇಕರು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಹೈಕಮಾಂಡ್ ವಿರುದ್ದ ಘೋಷಣೆಗಳೂ ಕೇಳತೊಡಗಿವೆ. ರಾಜೀನಾಮೆ ಪ್ರಹಸನ ಕೂಡ ಕಾಂಗ್ರೆಸ್ ಪಾಲಿಗೆ ತಲೆನೋವಾಗಿ ಕಂಡುಬAದಿದೆ.
ಇಷ್ಟಕ್ಕೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತನ್ನ ಸಂಪುಟದ ಸಚಿವರಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ಸ್ವಂತ ತೀರ್ಮಾನ ಕೈಗೊಂಡು ೧೯ ಸಚಿವರ ಆಯ್ಕೆ ಮಾಡಿದ್ದಾರೆಯೇ ಎಂದು ಗಮನಿಸಿದರೆ ಖಂಡಿತಾ ಇಲ್ಲ ಎಂಬ ಉತ್ತರ ಕೇಳಿಬರುತ್ತದೆ. ಶಿವಕುಮಾರ್‌ಗೆ ತನ್ನ ಸಂಪುಟದಲ್ಲಿ ಯಾರು ಸಚಿವರಾಗಬೇಕು ಎಂಬ ತೀರ್ಮಾನ ಕೂಡ ಕೈಗೊಳ್ಳಲು ಸ್ವಾತಂತ್ರö್ಯ ಸಿಗದಂತೆ ಕಾಂಗ್ರೆಸ್ ಹೈಕಮಾಂಡ್, ಅಥವಾ ದಿಲ್ಲಿಯಲ್ಲಿ ಪವಡಿಸಿರುವ ರಾಹುಲ್ ಗಾಂಧಿ ಮತ್ತು ತಂಡ, ಕರ್ನಾಟಕದಲ್ಲಿ ಯಾರು ಸಚಿವರಾಗಬೇಕೆಂದು ತೀರ್ಮಾನಿಸಿ ಮತ್ತೊಂದು ಅಧ್ವಾನ ಮಾಡಿದಂತಿದೆ.
ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ಮಾಡಿರುವ ಅಧ್ವಾನಗಳು .. ಒಂದೇ ಎರಡೇ ? ಒಂದು ಕಡೆ ಯುವಕರಿಗೆ ಸಂಪುಟದಲ್ಲಿ ಸ್ಥಾನ ಎಂದು ಎರಡು ತಿಂಗಳಿನಿAದ ಹೇಳುತ್ತಲೇ ಬಂದಿದ್ದ ಹೈಕಮಾಂಡ್ ಕೊನೆಗೂ ಯುವಕರನ್ನು ಮೂಲೆಗುಂಪು ಮಾಡಿ ಉತ್ತರ ಕರ್ನಾಟಕದಲ್ಲಿ ಹಳೇ ಮುಖಗಳಿಗೆ ಮಣೆ ಹಾಕಿದೆ. ಅರ್ಥಾತ್ ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಮೂಲೆಗಂಪು ಮಾಡಿದರೆ ಕಾಂಗ್ರೆಸ್‌ಗೆ ಉಳಿಗಾಲ ಇಲ್ಲ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದ್ದಂತಿದೆ. ಹಾಗಿದ್ದ ಮೇಲೆ ರಾಹುಲ್ ಗಾಂಧಿ ಈ ಬಾರಿ ಯುವಕರಿಗೆ ಆದ್ಯತೆ ನೀಡಲು ಸೂಚಿಸಿದ್ದಾರೆ ಎಂದು ಮುಖಂಡರು ಬೊಗಳೆ ಬಿಟ್ಟಿದ್ದಾದರೂ ಯಾಕೆ?
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ನಿಸ್ಸಂಶ ಯವಾಗಿ ದೇಶದಲ್ಲಿಯೇ ಸಂಚಲನ ಉಂಟು ಮಾಡಿತ್ತು. ಈ ಪೈಕಿ ಮಹಿಳೆಯರಿಗೆ ಮಾಸಿಕ ೨ ಸಾವಿರ ರು. ದೊರಕುವಂತೆ ಮಾಡಿದ ಗೃಹಲಕ್ಷಿö್ಮÃ ಯೋಜನೆ ಕೂಡ ಒಂದು. ಈ ಯೋಜನೆ ಜಾರಿಗೊಳಿಸುವಲ್ಲಿ ಕಳೆದ ಸಲ ಸಚಿವೆಯಾಗಿದ್ದ ಲಕ್ಷಿö್ಮÃ ಹೆಬ್ಬಾಳ್ಕರ್ ಪಾತ್ರ ಅತ್ಯಂತ ಮುಖ್ಯವಾದದ್ದು. ಮಹಿಳೆಯರನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಗೃಹಲಕ್ಷಿö್ಮÃ ಯೋಜನೆ ರಾಜ್ಯದ ಮಹಿಳೆಯರಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾಗಿತ್ತು.
ಆದರೆ ವಿಪರ್ಯಾಸ ನೋಡಿ, ಸಂಪುಟದಲ್ಲಿ ಒಬ್ಬರೇ ಒಬ್ಬ ಮಹಿಳೆಗೂ ಸ್ಥಾನವನ್ನೇ ನೀಡಿಲ್ಲ. ಮಹಿಳೆಯರ ಪ್ರಾಮುಖ್ಯತೆ ವಿಚಾರದಲ್ಲಿ ಕಾಂಗ್ರೆಸ್ ಈವರೆಗೆ ಹೇಳಿದ್ದು ಬರೀ ಬೊಗಳೆಯೇ? ಗುರುತಿಸಿಕೊಂಡಿದ್ದರೋ ಅಂಥ ಪ್ರಬಾವೀ ಮಹಿಳೆಯನ್ನೇ ಕಾಂಗ್ರೆಸ್ ಹೈಕಮಾಂಡ್ ನಿರ್ಲಕ್ಷö್ಯ ಮಾಡಿದೆ.
ಜಾತಿ ಆಧಾರದ ಮೇಲೆ ಸಂಪುಟದಲ್ಲಿ ಶಾಸಕರಿಗೆ ಸ್ಥಾನ ನೀಡಲಾಗಿದೆ ಎಂದು ಘೋಷಿಸಿಕೊಳ್ಳುವವರು, ಬ್ರಾಹ್ಮಣ ಸಮುದಾಯ ಅಂಥ ಒಂದಿದೆ ಎಂದೇ ಮರೆತಂತಿದೆ. ಸಂಪುಟದಲ್ಲಿ ಬ್ರಾಹ್ಮಣರನ್ನೇ ಮೂಲೆಗುಂಪು ಮಾಡಲಾಗಿದೆ. ಕಳೆದ ಬಾರಿ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾಗಿದ್ದರು. ಈ ಬಾರಿ ರಾಹುಲ್ ಗಾಂಧಿಯ ಒಂದು ಕಾಲದ ಪರಮಾಪ್ತ ದಿನೇಶ್ ಗುಂಡೂರಾವ್ ಅವರನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ಎಸ್. ಬಂಗಾರಪ್ಪ ಅವರ ಪುತ್ರ ಮಧುಬಂಗಾರಪ್ಪ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಗ ಡಾ. ಅಜಯ್ ಸಿಂಗ್, ಮಾಜಿ ಸಚಿವ ಶಿವಶಂಕರಪ್ಪ ಮಗ ಎಸ್.ಎಸ್. ಮಲ್ಲಿಕಾರ್ಜುನ್ ಹೀಗೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ , ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ, ಮಾಜಿ ಮಂತ್ರಿಗಳ ಮಕ್ಕಳಿಗೆ ಮಂತ್ರಿ ಸ್ಥಾನ ದೊರಕಿದೆ. ಕಳೆದ ಸಾಲಿನಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ೧೨ ಸಚಿವರನ್ನೇ ಈ ಬಾರಿ ನಿರ್ಲಕ್ಷಿಸಲಾಗಿದೆ. ಇದು ಯಾವ ರೀತಿಯ ಸಂದೇಶ ಸಾರಿದೆ? ಆ ಸಚಿವರು ಸರಿಯಾಗಿ ಕೆಲಸ ಮಾಡಲಿಲ್ಲ ಎಂದೇ? ತನ್ನ ಬೆಂಬಲಿಗರನ್ನು ನಿರ್ಲಕ್ಷö್ಯ ಮಾಡಲಾಗಿದೆ ಎಂಬ ಅಸಮಾಧಾನದಲ್ಲಿ ಸಿದ್ದರಾಮಯ್ಯ ಅವರೇ ಸಚಿವರ ಪ್ರಮಾಣ ವಚನದಿಂದ ದೂರ ಉಳಿದಿದ್ದರು. ಇದು ಕಾಂಗ್ರೆಸ್‌ನ ಒಳಬೇಗುದಿಗೆ ಸ್ಪಷ್ಟ ನಿದರ್ಶನ.
ಕೊಡಗೂ ಸೇರಿದಂತೆ, ರಾಯಚೂರು, ಉತ್ತರ ಕನ್ನಡ, ಯಾದಗಿರಿ,ವಿಜಯನಗರ, ಬೆಂಗಳೂರು ಗ್ರಾಮಾಂತರ, ಉಡುಪಿಯಂಥ ೮ ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನವೇ ಇಲ್ಲ. ಎಲ್ಲಾ ಜಾತಿಗೂ ಪ್ರಾಧ್ಯಾನ್ಯತೆ ನೀಡುತ್ತೇವೆ ಎಂದು ಹೇಳಿಕೊಂಡಿದ್ದ ಹೈಕಮಾಂಡ್‌ಗೆ ಕೊಡವ ಜನಾಂಗಕ್ಕೆ ಸ್ಥಾನ ನೀಡಬೇಕೆಂದೇ ಗೊತ್ತಾಗಲಿಲ್ಲವೇ? ವಿಚಿತ್ರ ಎಂದರೆ, ವಿಧಾನಸಭೆ ಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿಧಾನಪರಿಷತ್‌ನ ಸಭಾಪತಿ, ಉಪಸಭಾಪತಿ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವೇ ಅಭ್ಯರ್ಥಿಗಳನ್ನು ನೇಮಕ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇದು ಅಸಂವಿಧಾನಿಕ ಎಂದು ಕಾನೂನು ತಜ್ಞರೇ ಹೇಳುತ್ತಿದ್ದಾರೆ. ಈ ಪ್ರಮುಖ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದಿಂದ, ಆಡಳಿತ ಪಕ್ಷದಿಂದ ನೇಮಕವಾಗುವಂಥದ್ದಲ್ಲ. ಅಲ್ಲಿ ಕೂರುವ ವ್ಯಕ್ತಿ ರಾಜಕೀಯ ಪಕ್ಷದವನಿರಬಹುದಾದರೂ ಆ ಹುದ್ದೆಗಳು ಸಂವಿಧಾನಿಕ ಹುದ್ದೆಗಳು, ಕಾಂಗ್ರೆಸ್ ಹೈಕಮಾಂಡ್ ಲೆಟರ್ ಹೆಡ್ ನಲ್ಲಿಯೇ ಈ ಹುದ್ದೆಗಳ ಘೋಷಣೆಯಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಕ್ಷದೊಳಗಿನ ಆಂತರಿಕ ಪತ್ರವೊಂದು ಈ ರೀತಿ ಸಾರ್ವಜನಿಕವಾಗಿರುವುದು ಕಾಂಗ್ರೆಸ್ ಹೈಕಮಾಂಡ್‌ನ ಮತ್ತೊಂದು ನಿರ್ಲಕ್ಷö್ಯ ಎಂದೇ ಹೇಳಬೇಕು. ಎರಡು ತಿಂಗಳ ಕಸರತ್ತಿನ ಬಳಿಕವೂ ಕಾಂಗ್ರೆಸ್ ಹೈಕಮಾಂಡ್ ತನ್ನ ಪಕ್ಷದೊಳಗಿನ ಶಾಸಕರಿಗೆ ಸಮಾಧಾನ ತರಬಲ್ಲ. ಕಾರ್ಯಕರ್ತರಿಗೆ ತೃಪ್ತಿಯಾಗಬಲ್ಲಂತೆ ಜಾತಿ, ಧರ್ಮ, ಪ್ರಾಂತ್ಯವಾರು ಸಚಿವರನ್ನು ನೇಮಕ ಮಾಡಲಾಗದೇ ಹೋಯಿತು ಎಂಬುದು ಕಾಂಗ್ರೆಸ್ ಹೈಕಮಾಂಡ್‌ಗೆ ತಳಮಟ್ಟದಲ್ಲಿನ ರಾಜಕೀಯದ ತಿಳುವಳಿಕೆಯೇ ಇಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ. !