ಕೂಡಿಗೆ,ಆ. ೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಈಗಾಗಲೇ ಕಾಯ್ದಿರಿಸಲಾಗಿದ್ದ ಸರ್ವೆ ನಂಬರ್ ೧೪/೧ ರ, ೪ ಎಕರೆಗಳಷ್ಟು ಪ್ರದೇಶದಲ್ಲಿನ ಜಾಗ ಸರ್ವೆ ಸೇರಿದಂತೆ ಜಾಗ ಭೂ ಪರಿವರ್ತನೆ ನಕಾಶೆ ಹಾಗೂ ಬಹು ನಿವೇಶನ ವಿನ್ಯಾಸ ಸಿದ್ಧತೆಗೊಂಡು ವಸತಿ ರಹಿತ ೮೭ ಕುಟುಂಬದ ಫಲಾನುಭವಿಗಳಿಗೆ ವಸತಿ ಸೌಕರ್ಯ ಒದಗಿಸುವ ಯೋಜನೆ ಈಗಾಗಲೇ ಸಿದ್ಧಗೊಂಡಿದೆ.
ಕೂಡುಮAಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ೪ ಎಕರೆಗಳಷ್ಟು ವಿಸ್ತೀರ್ಣದ ಜಾಗವು ಬಹು ನಿವೇಶನದ ವಿನ್ಯಾಸವನ್ನು ಹೊಂದಿರುವ ಜೊತೆಯಲ್ಲಿ ವಿವಿಧ ಹಂತಗಳಲ್ಲಿ ಖಾಸಗಿ ಲೇಔಟ್‌ನ ಮಾದರಿಯ ಪಾರ್ಕ್ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಯೋಜನೆಗೆ ಸಂಬAಧಿಸಿದ ವಸತಿ ಸೌಕರ್ಯ ಒದಗಿಸುವ ಉದ್ದೇಶ ಬಹು ನಿವೇಶನ ವಿನ್ಯಾಸದ ನಕ್ಷೆಯು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಮುಖೇನ ಅನುಮೋದನೆಗೊಂಡು ಭೂ ದಾಖಲೆಗಳ ನಿಯಮಾನುಸಾರ ಇಲಾಖೆಯ ಸಹಾಯಕ ನಿರ್ದೇಶಕ ಅನುಮೋದನೆಯ ಅನುಸಾರವಾಗಿ ವಸತಿ ರಹಿತರಿಗೆ ನಿವೇಶನ ಕಲ್ಪಿಸುವ ವ್ಯವಸ್ಥೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಗೊAಡಿದೆ.
ಕೂಡುಮAಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಪಟ್ಟಿಯಲ್ಲಿ ಈಗಾಗಲೇ ೪೧೯ ಕುಟುಂಬದವರು ಇದ್ದರೆ. ಇರುವ ೪ ಎಕರೆಗಳಷ್ಟು ಪ್ರದೇಶದಲ್ಲಿ ೮೭ ಮನೆಗಳಿಗೆ ವಸತಿ ಸೌಕರ್ಯ ಕಲ್ಪಿಸುವ ವ್ಯವಸ್ಥೆ ನಕಾಶೆ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರದ ಹೊಸ ಯೋಜನೆಯ ಅನ್ವಯ ವಸತಿ ರಹಿತರಿಗೆ ವಸತಿಗೆ ನಿವೇಶನ ಒದಗಿಸುವ ಯೋಜನೆ ಕಾರ್ಯರೂಪಕ್ಕೆ ಬಂದಾಗ ಈ ಪ್ರದೇಶದಲ್ಲಿ ನೂತನ ವಸತಿಗಳು ನಿರ್ಮಾಣಗೊಳ್ಳಲಿವೆ.