ಮಡಿಕೇರಿ, ಆ. ೨: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ತನ್ನ ನೈಜ ಅಬ್ಬರ ತೋರುತ್ತಿದೆ. ಪುಷ್ಯ ಮಳೆಯ ಆರ್ಭಟಕ್ಕೆ ಜಿಲ್ಲೆ ಜರ್ಜರಿತಗೊಂಡAತಾಗಿದ್ದು, ಮಳೆಯ ರಭಸ ಮತ್ತೂ ಮುಂದುವರಿಯುತ್ತಿದೆ. ವರುಣನ ಅಬ್ಬರಕ್ಕೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡAತಾಗಿದೆ.
ಕಾವೇರಿ - ಲಕ್ಷö್ಮಣತೀರ್ಥ ಸೇರಿದಂತೆ ಇನ್ನಿತರ ನದಿ ತೊರೆಗಳು ಈತನಕದ ಮಳೆಗೆ ತುಂಬಿ ಹರಿಯಲಾರಂಭಿಸಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ಈ ಬಾರಿಯ ಮುಂಗಾರಿಗೆ ಮೊದಲ ಬಾರಿಗೆ ಅಲ್ಲಲ್ಲಿ ಪ್ರವಾಹಭೀತಿ ಎದುರಾಗುವ ಸಾಧ್ಯತೆಯಿದೆ. ಭಾಗಮಂಡಲ ವಿಭಾಗದಲ್ಲಿ ಭಾರೀ ಮಳೆಯಾಗಿದ್ದು, ಕಾವೇರಿಯ ರಭಸ ಹೆಚ್ಚಿದೆ. ನಾಪೋಕ್ಲು, ಬಲಮುರಿ, ಬೇತ್ರಿ, ಸಿದ್ದಾಪುರ, ಕರಡಿಗೋಡು, ಕುಶಾಲನಗರ, ಕಣಿವೆ ಮೂಲಕ ಕಾವೇರಿ ಹರಿಯುವ ಮಾರ್ಗದುದ್ದಕ್ಕೂ ನೀರಿನ ಪ್ರಮಾಣ ತೀರಾ ಹೆಚ್ಚಳವಾಗಿದ್ದು, ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಲೇ ಇದೆ. ಮಳೆಯಾರ್ಭಟಕ್ಕೆ ಜಿಲ್ಲೆಯ ಹಲವೆಡೆಗಳಲ್ಲಿ ಕೆಲವೊಂದು ಅನಾಹುತಗಳೂ ಸೃಷ್ಟಿಯಾಗುತ್ತಿವೆ.
ಭಾನುವಾರದಂದು, ಶನಿವಾರ ಸುರಿದ ಮಳೆಯ ತೀವ್ರತೆ ಇಲ್ಲದಿದ್ದರೂ ಮಳೆಯ ಛಾಯೆ ಮುಂದುವರಿದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಕೇರಳದ ಒತ್ತಿನಲ್ಲಿ ಬರುವ ಗಡಿಭಾಗ ಬಿರುನಾಣಿಯಂತಹ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಿ ಸುಮಾರು ೧೦ ಇಂಚುಗಳಷ್ಟು ಭಾರೀ ಮಳೆ ಸುರಿದಿರುವುದಾಗಿ ವರದಿಯಾಗಿದೆ. ಭಾಗಮಂಡಲ - ತಲಕಾವೇರಿ ವ್ಯಾಪ್ತಿಯಲ್ಲೂ ೮ ರಿಂದ ೧೦ ಇಂಚುಗಳಷ್ಟು ಧಾರಾಕಾರ ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫.೮೧ ಇಂಚು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೫೩ ಇಂಚು ಮಳೆಯಾಗಿದ್ದರೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸರಾಸರಿ ಮಳೆಯ ಪ್ರಮಾಣ ೫.೮೧ ಇಂಚುಗಳಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ೨.೨೬, ಪೊನ್ನಂಪೇಟೆ ೧.೭೮, ಸೋಮವಾರಪೇಟೆ ೨.೧೧ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೭೨ ಇಂಚು ಸರಾಸರಿ ಮಳೆ ೨೪ ಗಂಟೆಗಳಲ್ಲಿ ಸುರಿದಿದೆ.
ಭಾಗಮಂಡಲ ಹೋಬಳಿಗೆ ೮.೪೫ ಇಂಚು
ಜಿಲ್ಲೆಯ ಭಾಗಮಂಡಲ ಹೋಬಳಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೮.೪೫ ಇಂಚು ಮಳೆ ದಾಖಲಾಗಿದೆ. ಮಡಿಕೇರಿ ಹೋಬಳಿ ೪.೧೨, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಾಪೋಕ್ಲು ೨.೯೨, ಸಂಪಾಜೆ ೭.೭೬ ಇಂಚು ಮಳೆಯಾಗಿದೆ. ವೀರಾಜಪೇಟೆ ೨.೭೬, ಅಮ್ಮತ್ತಿ ೧.೮೦, ಪೊನ್ನಂಪೇಟೆ ೧, ಹುದಿಕೇರಿ ೧.೮೨, ಶ್ರೀಮಂಗಲ ೩.೫೬, ಬಾಳೆಲೆ ಹೋಬಳಿಯಲ್ಲಿ ೦.೭೬ ಇಂಚು ಮಳೆ ಬಿದ್ದಿದೆ. ಸೋಮವಾರಪೇಟೆ ೧.೨೯, ಶನಿವಾರಸಂತೆ ೨.೨೮, ಶಾಂತಳ್ಳಿ ೩.೪೮, ಕೊಡ್ಲಿಪೇಟೆ ೧.೩೬, ಸುಂಟಿಕೊಪ್ಪ ೧, ಕುಶಾಲನಗರ ಹೋಬಳಿಯಲ್ಲಿ ೦.೫೬ ಇಂಚು ಮಳೆ ದಾಖಲಾಗಿದೆ. ಮಳೆಯ ಅಬ್ಬರಕ್ಕೆ ಜಿಲ್ಲೆಯ ಹಲವೆಡೆ ಅನಾಹುತಗಳೂ ಸೃಷ್ಟಿಯಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪುಷ್ಯ ಮಳೆ ಭಾನುವಾರ ಮುಕ್ತಾಯಗೊಂಡಿದ್ದು, ಸೋಮವಾರದಿಂದ (ಇಂದಿನಿAದ) ಆಶ್ಲೇಷ ಮಳೆ ಪ್ರಾರಂಭವಾಗಲಿದೆ.
ವಾಡಿಕೆಯAತೆ ಮುಂಗಾರು ಆರಂಭಗೊಳ್ಳುವ ಜೂನ್‌ನಿಂದ ಈ ತನಕ ದುರ್ಬಲಗೊಂಡAತಿದ್ದ ಮುಂಗಾರು ಇದೀಗ ನಾಲ್ಕೆöÊದು ದಿನಗಳಿಂದ ತನ್ನ ರಭಸ ತೋರಲಾರಂಭಿಸಿದ್ದು, ಮಳೆಗಾಲದ ನೈಜತೆಯನ್ನು ಜಿಲ್ಲೆಯ ಜನ ಎದುರಿಸುತ್ತಿದ್ದಾರೆ.
ತಲಕಾವೇರಿ: ತಲಕಾವೇರಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಇಂದು ನೀರಿನ ಮಟ್ಟ ಏರಿಕೆಯಾಗಿದ್ದು, ಮಾತೆ ಕಾವೇರಿ ಭಗಂಡೇಶ್ವರ ದೇವಾಲಯ ಮುಂಭಾಗದ ಎರಡು ಮೆಟ್ಟಿಲುಗಳನ್ನು ಸ್ಪರ್ಶಿಸಿರುವ ಹಿನ್ನೆಲೆಯಲ್ಲಿ ಮಾತೆ ಕಾವೇರಿಗೆ ಪ್ರಧಾನ ಅರ್ಚಕರಾದ ಹರೀಶ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ತಲಕಾವೇರಿ ೧೩ ಇಂಚು ಮಳೆ
ಕಳೆದ ೨೪ ಗಂಟೆಗಳಲ್ಲಿ ತಲಕಾವೇರಿಗೆ ೧೩.೧೨ ಇಂಚು ಮಳೆ ಸುರಿದಿದೆ.