ಮಡಿಕೇರಿ, ಆ. ೧: ವನಮಹೋತ್ಸವ ಆಚರಣೆಯ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಶಾ ಔಟ್‌ರೀಚ್ ಜಂಟಿ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಹಸಿರು ಶಾಲೆ ಯೋಜನೆಗೆ ಚಾಲನೆ ನೀಡಲಾಗಿದೆ.

ಈಶಾ ಔಟ್‌ರೀಚ್‌ನ ಸಂಯೋಜಕರಾದ ಸ್ವಾಮಿ ಲವನ ಅವರು ಮಣ್ಣಿನ ಆರೋಗ್ಯ, ಪೋಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳೊಂದಿಗೆ ಆಸಕ್ತಿದಾಯಕ ಸಂಗತಿಯೊAದನ್ನು ಹಂಚಿಕೊAಡ ಅವರು, ಒಂದು ಚಮಚೆ ಆರೋಗ್ಯಕರ ಮಣ್ಣಿನಲ್ಲಿ ೮ ಶತಕೋಟಿಗೂ ಹೆಚ್ಚು ಸೂಕ್ಷ್ಮ ಜೀವಿಗಳಿರುತ್ತವೆ ಎಂದು ವಿವರಿಸಿದರು.

ಮಣ್ಣನ್ನು ರಕ್ಷಿಸುವ ಮತ್ತು ಅದನ್ನು ಫಲವತ್ತಾಗಿಸುವ ಅಗತ್ಯದ ಮಹತ್ತ್ವವನ್ನು ತಿಳಿಸಿದರು. ಮರಿಸಸಿಗಳನ್ನು ಹೆಮ್ಮರಗಳನ್ನಾಗಿ ಪೋಷಿಸಲು ಸಾಲು ಮರದತಿಮ್ಮಕ್ಕ ಅವರ ಜೀವನವು ಪ್ರತಿಯೊಬ್ಬರಿಗೂ ಹೇಗೆ ಪ್ರೇರಣೆಯಾಗಿದೆ ಎಂಬುದನ್ನು ಅವರು ಹಂಚಿಕೊAಡರು.

‘ಹಸಿರುಶಾಲೆ’ ಯೋಜನೆಯು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ೧,೮೦೦ ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಮೂಲಕ ೩೫,೦೦೦ ಕ್ಕೂ ಹೆಚ್ಚು ಸಸಿಗಳನ್ನು ನೆಡಲು ಅನುವು ಮಾಡಿಕೊಡಲಿದ್ದು, ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸುತ್ತಮುತ್ತಲಿನ ಜನರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಈಶ ಔಟ್‌ರೀಚ್ ಎಂಬುದು ಈಶ ಸಂಸ್ಥೆಯ ಸಾಮಾಜಿಕ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗವಾಗಿದೆ.

ಇದು ಶಿಕ್ಷಣ, ಪರಿಸರ, ಆರೋಗ್ಯ, ಕ್ರೀಡೆ ಮತ್ತು ಸುಸ್ಥಿರ ಅಭಿವೃದ್ಧಿಯ ಉಪಕ್ರಮಗಳ ಮೂಲಕ ಗ್ರಾಮೀಣ ಜನರ ಆರೋಗ್ಯ, ಯೋಗಕ್ಷೇಮ ಮತ್ತು ಜೀವನೋಪಾಯವನ್ನು ಸುಧಾರಿಸಲು ಶ್ರಮಿಸುತ್ತಿದೆ.

‘ಹಸಿರುಶಾಲೆ’ ಯೋಜನೆಯು ಅದರ ಪ್ರಮುಖ ಪರಿಸರ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.