ಮಡಿಕೇರಿ, ಜು. ೩೧: ಬೆಂಗಳೂರಿನ ಕೋರಮಂಗಲದ ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚಿನ್ಮಯ ಕಪ್-೨೦೨೬ ಅಂತರಶಾಲಾ ರಾಜ್ಯಮಟ್ಟದ ರಿಂಕ್ ಹಾಕಿ (೫-ಎ-ಸೈಡ್) ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ ೧೪ ವರ್ಷದೊಳಗಿನ ಬಾಲಕರ ತಂಡವು - ಚಾಂಪಿಯನ್ ಪಟ್ಟ, ೧೭ ವರ್ಷದೊಳಗಿನ ಬಾಲಕಿಯರ ತಂಡವು ಸತತವಾಗಿ ಎರಡನೇ ಬಾರಿಯೂ ಚಾಂಪಿಯನ್ ಪಟ್ಟವನ್ನೂ ಹಾಗೂ ೧೭ ವರ್ಷದೊಳಗಿನ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಪAದ್ಯಾವಳಿಯ ಅತ್ಯುತ್ತಮ ಪ್ರದರ್ಶನಕ್ಕಾಗಿ ೧೭ ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ತೇಜಲ್ ಬೋಪಣ್ಣ ಮತ್ತು ೧೪ ವರ್ಷದೊಳಗಿನ ವಿಭಾಗದ ಎಂ.ಎಸ್. ಚಿಣ್ಣಪ್ಪ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದರು.

೧೭ ವರ್ಷದೊಳಗಿನ ವಿಭಾಗದಲ್ಲಿ ವರ್ಣ ಬೋಜಮ್ಮ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಈ ಸಾಧನೆಗೆ ತರಬೇತುದಾರರಾದ ದೀನಾ ಹಾಗೂ ಪಾರ್ವತಿ ಅವರು ತರಬೇತಿ ನೀಡಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಸುಮಿತ್ರಾ ಕೆ ಎಸ್ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.