ಮಡಿಕೇರಿ, ಜು. ೩೧: ಕೊಡಗು ಜಿಲ್ಲೆಯಲ್ಲಿ ದುರ್ಬಲಗೊಂಡAತಿದ್ದ ಮುಂಗಾರು ಮಳೆ ಇದೀಗ ಕಳೆದೆರಡು ದಿನಗಳಿಂದ ಚೇತರಿಕೆ ಕಂಡಿದೆ. ಪ್ರಸ್ತುತ ಪುಷ್ಯ ಮಳೆ ನಕ್ಷತ್ರ ನಡೆಯುತ್ತಿದ್ದು, ಆಗಸ್ಟ್ ೩ ರಿಂದ ಆಶ್ಲೇಷ ಮಳೆ ಆರಂಭಗೊಳ್ಳಲಿದೆ.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಳೆದ ಮಂಗಳವಾರದಿAದ ಮಳೆ ಒಂದಷ್ಟು ರಭಸಗೊಂಡAತಿದೆ. ಕಾವೇರಿ ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿ, ಅದರಲ್ಲೂ ಕೆಲವಾರು ಗ್ರಾಮೀಣ ಭಾಗಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ನೀರಿನ ಮಟ್ಟ ಹೆಚ್ಚಳವಾಗಿದೆ.
ಕಾವೇರಿ, ಲಕ್ಷö್ಮಣತೀರ್ಥ ನದಿಗಳು ಒಂದಷ್ಟು ಮೈದುಂಬಿ ಹರಿಯುತ್ತಿದ್ದು, ಮಳೆಯ ಕೊರತೆಯಿಂದ ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳಲ್ಲೂ ಆತಂಕಕ್ಕೆ ಕಾರಣವಾಗಿದ್ದ ರೈತಾಪಿ ವಲಯದಲ್ಲಿ ಆಶಾಭಾವನೆ ಮೂಡಿಸಿದೆ.ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೬೯ ಇಂಚು ಮಳೆಯಾಗಿದೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಇದೀಗ ಜನವರಿಯಿಂದ ಈತನಕ ಒಟ್ಟು ೩೭.೪೫ ಇಂಚು ಮಳೆಯಾದಂತಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೮೪, ವೀರಾಜಪೇಟೆ ೨.೧೯, ಪೊನ್ನಂಪೇಟೆ ೧.೭೦, ಸೋಮವಾರಪೇಟೆ ೨.೨೬, ಕುಶಾಲನಗರ ತಾಲೂಕಿನಲ್ಲಿ ೦.೪೫ ಇಂಚು ಮಳೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ. ಶಾಂತಳ್ಳಿ ಹೋಬಳಿಯಲ್ಲಿ ೪.೭೨, ಭಾಗಮಂಡಲ ೩, ಮಡಿಕೇರಿ ೧.೪೮, ನಾಪೋಕ್ಲು ೧.೭೩, ಸಂಪಾಜೆ ೧.೨೪, ವೀರಾಜಪೇಟೆ ೨.೨೧, ಅಮ್ಮತ್ತಿ ೨.೧೮, ಹುದಿಕೇರಿ ೧.೪೮, ಶ್ರೀಮಂಗಲ ೨.೩೨, ಪೊನ್ನಂಪೇಟೆ ೨.೨೦, ಬಾಳೆಲೆ ೦.೮೦ ಇಂಚು ಮಳೆಯಾಗಿದೆ. ಸೋಮವಾರಪೇಟೆ ಹೋಬಳಿಯಲ್ಲಿ ೨.೨೪, ಶನಿವಾರಸಂತೆ ೧.೧೨, ಕೊಡ್ಲಿಪೇಟೆ ೧, ಸುಂಟಿಕೊಪ್ಪ ೦.೬೮ ಹಾಗೂ ಕುಶಾಲನಗರ ಹೋಬಳಿಯಲ್ಲಿ ೦.೨೨ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ಸುರಿದಿದೆ.
ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳೂ, ನಾಪೋಕ್ಲು, ಗಾಳಿಬೀಡು, ಶಾಂತಳ್ಳಿ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ೩.೫೦ ಇಂಚಿನಿAದ ೪ ಇಂಚುಗಳಷ್ಟು ಸರಾಸರಿ ಮಳೆ ದಾಖಲಾಗಿದೆ.