ಮಡಿಕೇರಿ, ಜು. ೩೦: ಮೆಕ್ಸಿಕೋ ದೇಶದಲ್ಲಿ ನಡೆಯುತ್ತಿರುವ ಲಾಸ್ ಕಾಬೋಸ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಕೊಡಗಿನವರಾದ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಜೊತೆ-ಆಟಗಾರ ಈಕ್ವಿಡಾರ್ ದೇಶದ ಜಿ ಎಸ್ಕೊಬಾರ್ ಅವರೊಂದಿಗೂಡಿ ಟೆನ್ನಿಸ್ನ ಪ್ರತಿಷ್ಠಿತ ಗ್ರಾö್ಯಂಡ್ ಸ್ಲಾö್ಯಮ್ ಕಿರೀಟವನ್ನು ೪ ಬಾರಿ ಪಡೆದಿರುವ ರಾಜಿವ್ ರಾಮ್(ಯು.ಎಸ್.ಎ) ಹಾಗೂ ಸಾಲಿಸ್ಬುರಿ(ಯು.ಕೆ) ಜೋಡಿಯನ್ನು ೬-೩, ೬-೪ ಎರಡು ನೇರ ಸೆಟ್ಗಳಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ತಾ.೩೧ ರಂದು(ಇAದು) ಮೆಕ್ಸಿಕೋದ ಆಲ್ವಾರೇಜ್ - ಮಗಾದಾನ್ ಜೋಡಿ ಅವರೊಂದಿಗೆ ಕ್ವಾರ್ಟರ್ ಫೈನಲ್ ಆಡಲಿದ್ದಾರೆ. ಇತ್ತೀಚೆಗಷ್ಟೆ ಪೂಣಚ್ಚ ಅವರು ಫ್ರಾನ್ಸ್ನಲ್ಲಿ ನಡೆದ ಎ.ಟಿ.ಪಿ ಚ್ಯಾಲೆಂಜರ್-೧೦೦ ಡಬಲ್ಸ್ನಲ್ಲಿ ಕಿರೀಟ ಪಡೆದಿದ್ದರು.
ವಿ. ಬಿ. ಎ ಪದವೀಧರರಾಗಿರುವ ನಿಕ್ಕಿ ಅವರು ಮೂಲತಃ ಕಕ್ಕಬ್ಬೆಯವರಾದ ಇದೀಗ ಆಂಧ್ರದ ಅನಂತಪುರದಲ್ಲಿ ನೆಲೆಸಿರುವ ಕಲಿಯಂಡ ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ.