ಗೋಣಿಕೊಪ್ಪಲು, ಜು. ೩೦: ಜೆಸಿ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ರಾಷ್ಟಿçÃಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಕ್ರೀಡಾಪಟು ಬಿ.ಪಿ. ಪಂಚಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ ೧೯ ವರ್ಷದೊಳಗಿನ ರಾಷ್ಟಿçÃಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಬಿ.ಪಿ. ಪಂಚಮಿ ಅವರಿಗೆ ಅಭಿನಂದನೆ ಸಲ್ಲಿಸಿದ ಜೆಸಿ ಪೊನ್ನಂಪೇಟೆ ನಿಸರ್ಗ ಘಟಕವು ೬೩,೦೦೦ ನಗದು ಪ್ರೋತ್ಸಾಹಧನ ನೀಡಿ, ಅವರ ಮುಂದಿನ ಕ್ರೀಡಾ ಸಾಧನೆಗೆ ಉತ್ತೇಜನ ನೀಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆಸಿಯ ಪ್ರಮುಖರಾದ ಟಾಟೂ ಮೊಣ್ಣಪ್ಪ, ಕೊಡಗು ಜಿಲ್ಲೆಯ ಕ್ರೀಡಾಪಟುಗಳು ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಯ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುAದೆಯೂ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ದೇಶಕ್ಕೆ ಚಿನ್ನದ ಪದಕ ತಂದು ರಾಷ್ಟçದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎ.ಪಿ. ದಿನು ದೇವಯ್ಯ, ಪೆಮ್ಮಂಡ ಮಂಜು ಬೋಪಣ್ಣ, ನೀತ್ ಅಯ್ಯಪ್ಪ, ತನು ತಿಮ್ಮಯ್ಯ, ಸುಜಿತ್ ಸೋಮಯ್ಯ, ಗುಮ್ಮಟ್ಟಿರ ಚಂಗಪ್ಪ, ಚೋನಿರ ಸೋಮಣ್ಣ, ತಿತೀಮಾಡ ಲಿಖಿತ್, ಚೋನಿರ ಮುದ್ದಪ್ಪ ಸೇರಿದಂತೆ ಜೆಸಿ ಪದಾಧಿಕಾರಿಗಳು ಹಾಗೂ ಪಂಚಮಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.