ಮಡಿಕೇರಿ, ಜು. ೩೦: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೧ನೇ ವರ್ಷದ ಸಾರ್ವಜನಿಕ ಕಕ್ಕಡ ಪದ್‌ನೆಟ್ಟ್ ಆಚರಣೆಯನ್ನು ಆ. ೨ ರಂದು ಬೆಳಿಗ್ಗೆ ೧೦:೩೦ ನಗರದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಹಿರಿಯ ವರದಿಗಾರ ದೀಪಕ್ ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ-ಆಡಳಿತ, ಈಶಾನ್ಯ ಭಾರತದ ರಾಜ್ಯಗಳ ಮಾದರಿಯಲ್ಲಿ ಭಾರತದ ಸಂವಿಧಾನದಡಿ ಕೊಡವ ಭೂಮಿ, ಜೀವ ನದಿಗಳು, ಜೀವವೈವಿಧ್ಯತೆ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ. ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಪ್ರತಿಪಾದಿಸಲಾದಂತೆ ಕೊಡವರ ಆದಿಮ ಸಂಜಾತತೆಯ ಪಾರಂಪರಿಕ ಗುರುತಿಗೆ ಸಾಂವಿಧಾನಿಕ ವಿಶೇಷ ರಕ್ಷಣೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಈ ಸಂದರ್ಭ ಒತ್ತಾಯಿಸಲಾಗುವುದು ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ತಿಳಿಸಿದ್ದಾರೆ.