ಸುಂಟಿಕೊಪ್ಪ, ಜು. ೩೦: ಪ್ರತಿಯೋರ್ವ ವ್ಯಕ್ತಿಯು ಬ್ಯಾಂಕಿನ ಮೂಲಕ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಮುಂದಿರಿಸಿಕೊAಡು ಸರಕಾರವು, ಯಾವುದೇ ರೀತಿಯ ಮುಂಗಡ ಠೇವಣಿಯನ್ನು ಇರಿಸಿಕೊಳ್ಳದೆ ಬ್ಯಾಂಕ್ ಖಾತೆಯನ್ನು ತೆರೆಯುವ ಅವಕಾಶ ನೀಡಿದೆ ಎಂದು ಐಡಿಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಾಬುರಾವ್ ಮಾಹಿತಿ ನೀಡಿದರು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್ಬೈಲ್ ಒಕ್ಕೂಟದ ತ್ರೆöÊಮಾಸಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಬೇಕೆAದರೆ ಸಾಕಷ್ಟು ನಿಯಮಗಳಿದ್ದವು, ಠೇವಣಿಯನ್ನು ಇರಿಸಬೇಕಾಗಿತ್ತು. ಸಾಮಾನ್ಯ ಜನತೆ ಬ್ಯಾಂಕ್ ಖಾತೆಯನ್ನು ತೆರೆಯುಲು ಇನ್ನಿಲ್ಲದ ಹರಸಾಹಸ ಪಡುವಂತಿತ್ತು. ಆದರೆ ಇದೀಗ ಪ್ರತಿಯೊಬ್ಬರು ಬ್ಯಾಂಕ್ ಖಾತೆಯನ್ನು ಹೊಂದಬೇಕು ಎಂಬ ಉದ್ದೇಶದಿಂದ ಇದಕ್ಕೆ ಬೇಕಾದ ಕಾನೂನು ನಿಯಮಗಳನ್ನು ಸಡಿಲಗೊಳಿಸಲಾಗಿದೆ, ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ವಹಿಸಿದ್ದರು. ಸಭೆಯ ವೇದಿಕೆಯಲ್ಲಿದ್ದ ಶ್ರೀ.ಕ್ಷೇ.ಧ.ಗ್ರಾ.ಯೋ. ಸುಂಟಿಕೊಪ್ಪ ವಲಯ ಮೇಲ್ವಿಚಾರಕರಾದ ಸಂತೋಷ್, ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕರಾದ ಮುತ್ತುರಾಜ್ ಅವರು ಮಾತನಾಡಿದರು. ಪುಷ್ಪಲತಾ ಸ್ವಾಗತಿಸಿ, ಸೇವಾಪತ್ರಿನಿಧಿ ಯಶೋಧ ವಂದಿಸಿದರು.