ಮಡಿಕೇರಿ, ಜು.೩೦: ನಗರದ ಕಾವೇರಿ ಕಾರು ಚಾಲಕ ಮತ್ತು ಮಾಲೀಕರ ಸಂಘಕ್ಕೆ(ಹೊಟೇಲ್ ಚಾಯ್ಸ್ ಬಳಿ) ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಬಿ.ಆರ್ ಪೊನ್ನಪ್ಪ(ದಿನೇಶ್), ಉಪಾಧ್ಯಕ್ಷರಾಗಿ ರಫೀಕ್ (ಮದೇನಾಡು), ಪ್ರಧಾನ ಕಾರ್ಯದರ್ಶಿಯಾಗಿ ಕುಯ್ಯಮುಡಿ ರಾಜೇಶ್, ಸಹ ಕಾರ್ಯದರ್ಶಿಯಾಗಿ ಉನೈಜ್ ಎಂ.ಎ, ಖಜಾಂಚಿಯಾಗಿ ಯಂಕನ ಪ್ರಶಾಂತ್ ಆಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ಲೋಕೇಶ್ ಎ.ಸಿ, ಹಿರಿಯ ಸಲಹೆಗಾರರಾಗಿ ಸುಂದರ ಬಂಗೇರ, ಖಾದರ್ ಸತೀಶ್ ಬಿ.ಜೆ ನೇಮಕಗೊಂಡರು.
ಸಮಿತಿ ಸದಸ್ಯರುಗಳಾಗಿ ಮಂಜುನಾಥ್ ಕೆ.ಕೆ, ಆನಂದ್ ಹೆಚ್.ಎಸ್, ಆನಂದ್ ಬಿ.ಜಿ, ಜಫ್ರುಲ್ಲ, ಮುಸ್ತಫಾ, ಪ್ರದೀಪ್ ಹಾಗೂ ದರ್ಶನ್ ಬೊಳ್ಳೆರ ಆಯ್ಕೆಗೊಂಡರು.