ಮಡಿಕೇರಿ, ಜು. ೨೯: ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಸಾಕಮ್ಮ ಬೆಟ್ಟಗೇರಿ ಎಸ್ಟೇಟ್ ಲೈನ್ ಮನೆಗಳಿಗೆ ಅಕ್ಕಪಡೆ ಸಿಬ್ಬಂದಿಗಳು ಭೇಟಿ ನೀಡಿ, ನಿವಾಸಿಗಳಿಗೆ ವಿವಿಧ ಕಾನೂನುಗಳು ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಅಕ್ಕಪಡೆಯ ಕರ್ತವ್ಯಗಳು, ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ತಡೆ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆ, ಕನಿಷ್ಟ ವೇತನ ಕಾಯ್ದೆ, ಶಿಕ್ಷಣದ ಮಹತ್ವ ಹಾಗೂ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಕುರಿತು ಮಾಹಿತಿ ನೀಡಲಾಯಿತು.
ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಸಹಾಯವಾಣಿ ಸಂಖ್ಯೆಗಳಾದ ೧೧೨ (ತುರ್ತು ಸೇವೆ), ೧೮೧ (ಮಹಿಳಾ ಸಹಾಯವಾಣಿ), ೧೯೩೦ (ಸೈಬರ್ ವಂಚನೆ ದೂರು) ಹಾಗೂ ೧೦೯೮ (ಮಕ್ಕಳ ಸಹಾಯವಾಣಿ) ಕುರಿತು ನಿವಾಸಿಗಳಿಗೆ ವಿವರಿಸಿ, ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರು ಈ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಯಿತು.