ಗೋಣಿಕೊಪ್ಪಲು, ಜು. ೨೯ : ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಪಿ.ಎಸ್. ಶರತ್‌ಕಾಂತ್ ಗೌರವ ಅಧ್ಯಕ್ಷರಾಗಿ ಸಿ.ಕೆ. ಬೋಪಣ್ಣ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಜಿ.ಆರ್. ಕೃಷ್ಣೆಗೌಡ, ಉಪಾಧ್ಯಕ್ಷರಾಗಿ ಯು.ಟಿ. ವೆಂಕಟೇಶ್, ಸಹಕಾರ್ಯದರ್ಶಿಯಾಗಿ ಕೆ.ಬಿ. ರೇಣುಕುಮಾರ್, ಖಜಾಂಚಿಯಾಗಿ ಬಿ.ಎನ್. ಉಮೇಶ್ ರೈ, ಕಾರ್ಯಕಾರಿಣಿ ಸಮಿತಿಯ ನಿರ್ದೇಶಕರುಗಳಾಗಿ ಕೆ.ಕೆ. ವಿಜಯ್‌ಕುಮಾರ್, ಟಿ.ಎಸ್. ಭಾಸ್ಕರ್, ವಿ.ಕೆ.ಅಶೋಕ, ಎ.ಕೆ. ಅನೀಶ್, ಬಿ.ಎಸ್. ಸುರೇಶ್, ಕೆ.ಎಂ. ಅಬ್ದುಲ್ ಕರೀಂ, ಬಿ.ಆರ್. ಕೀರ್ತಿಕುಮಾರ್, ಟಿ.ಜಿ. ಸಂತೋಷ್, ಎ.ಎಂ. ಅಖಿಲ್, ಎನ್.ಕೃಷ್ಣ, ಹೆಚ್.ಸಿ. ಶ್ರೀನಿವಾಸ್, ಹೆಚ್.ಎನ್. ಪೂವಯ್ಯ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಗೋಣಿಕೊಪ್ಪಲುವಿನ ಕಾವೇರಿ ಮಹಿಳಾ ಸಮಾಜದಲ್ಲಿ ಆಯೋಜನೆಗೊಂಡಿದ್ದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಿ.ಕೆ. ಬೋಪಣ್ಣ ಮಾತನಾಡಿ, ವಾಹನ ಚಾಲಕರು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಎಂದರು.ಕಾರ್ಯದರ್ಶಿ ಜಿ.ಆರ್. ಕೃಷ್ಣೇಗೌಡ ಸ್ವಾಗತಿಸಿ, ಸಹಕಾರ್ಯದರ್ಶಿ ಕೆ.ಬಿ. ರೇಣುಕುಮಾರ್ ವಂದಿಸಿದರು.