ಮಡಿಕೇರಿ, ಜು. ೨೯: ನಗರದ ಹೃದಯಭಾಗದಲ್ಲಿ ಜುಲೈ ೭ ರಂದು ಸಂಭವಿಸಿದ್ದ ಭೂಕುಸಿತದಿಂದ ಅಜ್ಜಮಾಡ ದೇವಯ್ಯ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯ ಬದಿಯ ಪಾದಚಾರಿ ಮಾರ್ಗ ಹಾನಿಗೀಡಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಇದೀಗ ಪರಿಸ್ಥಿತಿಯನ್ನು ಪರಿಶೀಲಿಸಿದ ಸಂಬAಧಿತ ಅಧಿಕಾರಿಗಳು ಸುರಕ್ಷತಾ ಕ್ರಮಗಳೊಂದಿಗೆ ವಾಹನ ಸಂಚಾರಕ್ಕೆ ಭಾಗಶಃ ವಿನಾಯಿತಿ ನೀಡಿದ್ದು, ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸುರುಪುರ, ನಗರಸಭೆ ಇಂಜಿನಿಯರ್ ಹೇಮಂತ್ ಅವರುಗಳು ಸ್ಥಳ ಪರಿಶೀಲಿಸಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಸಲಹೆ ನೀಡಿದ ಮೇರೆಗೆ ಅಜ್ಜಮಾಡ ದೇವಯ್ಯ ವೃತ್ತದಿಂದ ಕೆಳಗಿಳಿಯುವ ರಸ್ತೆಯಲ್ಲಿ ಲಘುವಾಹನ ಹಾಗೂ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ,

ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯರುಗಳಾದ ಕಾಳಚಂಡÀ ಅಪ್ಪಣ್ಣ, ಎಸ್.ಸಿ. ಸತೀಶ್ ಅವರು ಸ್ಥಳಕ್ಕಾಗಮಿಸಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಹರಿಯುವ ನೀರನ್ನು ಸಮರ್ಪಕ ಪೈಪ್‌ಲೈನ್ ಮೂಲಕ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹರಿಸುವ ಕಾಮಗಾರಿ, ೩೦ ಅಡಿ ಎತ್ತರದ ತಡೆಗೋಡೆ ಪೈಕಿ ೪ ಅಡಿಗಳ ಕೆಲಸಗಳು ಬಾಕಿಯಿದ್ದು, ಮತ್ತಷ್ಟು ಸ್ಯಾಂಡ್ ಬ್ಯಾಗ್ ಅಳವಡಿಸಿ ಗಟ್ಟಿಗೊಳಿಸುವ ಕೆಲಸವೂ ನಡೆಯಲಿದೆ. ಅನಂತರ ಮೇಲ್ಭಾಗದಲ್ಲಿ ಮಣ್ಣು ತುಂಬಲಾಗುವುದು. ೬-೭ ದಿನಗಳಲ್ಲಿ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಮಾಹಿತಿಯಿತ್ತರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ರಸ್ತೆ ಬಂದ್ ಆದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಕುಸಿತಗೊಂಡ ರಸ್ತೆಯ ಕಾಮಗಾರಿ ಇದೀಗ ಶೇ ೮೦ ರಷ್ಟು ಪೂರ್ಣಗೊಂಡಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಅಭಿಯಂತರರುಗಳ ಸಲಹೆ ಮೇರೆಗೆ ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಬಸ್ ಸೇರಿದಂತೆ ಲಘುವಾಹನಗಳು ಓಡಾಡಬಹುದು. ವ್ಯವಸ್ಥಿತವಾಗಿ ವಾಹನಗಳ ಓಡಾಟಕ್ಕೆ ಈ ಕುರಿತು ಪೊಲೀಸ್ ಇಲಾಖೆಗೂ ಮನವಿ ಮಾಡಲಾಗುವುದು. ಹಳೇ ಬಸ್ ನಿಲ್ದಾಣದಲ್ಲಿ ಸದ್ಯಕ್ಕೆ ಬಸ್ ನಿಲುಗಡೆಗೆ ಅವಕಾಶ ಮುಂದುವರೆಯಲಿದೆ ಎಂದು ವಿವರಿಸಿದರು.