ವೀರಾಜಪೇಟೆ, ಜು. ೨೯: ೨೦೩೧ರಲ್ಲಿ ಪುಟ್ಟಿಚಂಡ ಕುಟುಂಬದ ಆತಿಥ್ಯದಲ್ಲಿ ಕೊಡವ ಹಾಕಿ ನಮ್ಮೆ ನಡೆಸಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ಪುಟ್ಟಿಚಂಡ ಕುಟುಂಬದ ವತಿಯಿಂದ ಕೊಡವ ಹಾಕಿ ಅಕಾಡೆಮಿಗೆ ರೂ. ೧ ಲಕ್ಷ ದೇಣಿಗೆ ನೀಡಲಾಯಿತು.

ದೇಣಿಗೆ ಮೊತ್ತವನ್ನು ಪುಟ್ಟಿಚಂಡ ಕುಟುಂಬದ ಪ್ರಮುಖರು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಪುಟ್ಟಿಚಂಡ ವಕ್ಕ ಪಟ್ಟೆದಾರ ಪಿ.ಕೆ. ಮುತ್ತಪ್ಪ, ಮಹಾವೀರ ಚಕ್ರ ಪುರಸ್ಕೃತ ಪಿ.ಎಸ್. ಗಣಪತಿ, ಪುಟ್ಟಿಚಂಡ ಹಾಕಿ ಅಧ್ಯಕ್ಷ ಪಿ.ಕೆ. ನರೇಂದ್ರ (ನರು), ಪಿ.ಯು. ಕಾಳಪ್ಪ, ಕಾರ್ಯದರ್ಶಿ ಪಿ.ಸಿ. ಮಾದಪ್ಪ, ಗೌರವ ಕಾರ್ಯದರ್ಶಿ ಪಿ.ಜೆ. ಪೂಣಚ್ಚ, ಖಜಾಂಚಿ ಪಿ.ಕೆ. ಗಣಪತಿ, ನಿರ್ದೇಶಕರಾದ ಡಯನಾ ಸೋಮಯ್ಯ ಹಾಗೂ ಡಾನ್ ದೇವಯ್ಯ, ಕೊಡವ ಹಾಕಿ ಅಕಾಡೆಮಿ ಕಾರ್ಯದರ್ಶಿ ಕುಲ್ಲೆಟಿರ ಬೇಬ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.