ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಜು. ೨೭: ಸರ್ಫೇಸಿ ಕಾಯ್ದೆಯ ಕಾನೂನು ಕಟ್ಟಳೆಯ ಪರಿಣಾಮವಾಗಿ ಕೊಡಗು ಜಿಲ್ಲೆಯ ಕಾಫಿ ತೋಟಗಳು-ನೆಲ ಸದ್ದಿಲ್ಲದೆ ಹರಾಜಾಗುತ್ತಿದ್ದು, ಇದು ಕೊಡಗಿನವರ ಹೊರತಾಗಿ ಅನ್ಯರ ಪಾಲಾಗುತ್ತಿರುವ ಆತಂಕಕಾರಿ ಸನ್ನಿವೇಶ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ. ಬ್ಯಾಂಕ್ಗಳಿAದ ಸಾಲ ಪಡೆದು ಸಾಲ ಮರುಪಾವತಿಯಾಗದಿರುವುದು-ವಿಳಂಬದ ಹಿನ್ನೆಲೆಯಲ್ಲಿ ಅಡಮಾನವಿಟ್ಟ ಜಾಗಗಳ ಹರಾಜು ಮೂಲಕ ಬ್ಯಾಂಕ್ಗಳು ತಾವು ನೀಡಿದ ಸಾಲವನ್ನು ಹೊಂದಾಣಿಕೆ ಮಾಡಿಕೊಳ್ಳಲು ಕಾನೂನಿನ ಪ್ರಕಾರವೇ ಸರ್ಫೇಸಿ ಕಾಯಿದೆ ಎಂಬುದು ಜಾರಿಗೆ ಬಂದಿರುವುದು ನಿಜ. ಪ್ರಸ್ತುತ ಈ ಕಾಯ್ದೆಯನ್ನು ಬಳಸಿಕೊಂಡು ಬ್ಯಾಂಕ್ಗಳು ನಡೆಸುತ್ತಿರುವ ಈ ಹರಾಜು ವಿಶಿಷ್ಟ ಸಂಸ್ಕೃತಿ-ಆಚಾರ, ವಿಚಾರ, ವಿಭಿನ್ನವಾದ ಭೌಗೋಳಿಕತೆಯೊಂದಿಗೆ ಪ್ರಾಕೃತಿಕವಾಗಿ ಇತರೆಡೆಗಳಿಗಿಂತ ಬೇರೆಯದ್ದೆ ಆದ ರೀತಿಯಲ್ಲಿರುವ ಕೊಡಗಿನ ನೆಲ-ಮಣ್ಣು ಈ ವಿಶಿಷ್ಟತೆಯನ್ನೇ ಮರೆಯಾಗಿಸುತ್ತಿರುವಂತಹ ಆಘಾತಕಾರಿ ಸನ್ನಿವೇಶಕ್ಕೆ ಎಡೆಯಾಗುತ್ತಿರುವ ಆತಂಕ ಸೃಷ್ಟಿಯಾಗುತ್ತಿದೆ.
ಇದಲ್ಲದೆ ಬ್ಯಾಂಕ್ಗಳು, ಕೆಲವೊಂದು ಅಧಿಕಾರಿಗಳು ಕಾನೂನಿನ ಅವಕಾಶವನ್ನು ಮುಂದಿಟ್ಟುಕೊAಡು ಇದರ ದುರ್ಬಳಕೆ ಮಾಡಿಕೊಳ್ಳುತ್ತಿರುವರೇ.. ಎಂಬ ಗುಮಾನಿಯೂ ರೈತಾಪಿ ವರ್ಗದಲ್ಲಿ ಸೃಷ್ಟಿಯಾಗುತ್ತಿದೆ. ಜತೆಗೆ ರಿಯಲ್ ಎಸ್ಟೇಟ್ ದಂಧೆಯವರೊAದಿಗೆ ಅಧಿಕಾರಿಗಳು, ಇವರೊಂದಿಗೆ ಜಾಗದ ಮೌಲ್ಯ ನಿಗದಿಪಡಿಸುವ ಮಂದಿ ಸೇರಿಕೊಂಡು ಇದೊಂದು ದಂಧೆಯ ಸ್ವರೂಪ ಪಡೆದುಕೊಳ್ಳುತ್ತಿರುವ ಆರೋಪ-ಸಂಶಯಗಳೂ ಕೇಳಿಬರುವಂತಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ನ್ಯಾಯಾಧೀಶರುಗಳೇ ಮಧ್ಯಪ್ರವೇಶಿಸಿ ಪಾಪದ ಬೆಳೆಗಾರರನ್ನು, ಕೊಡಗಿನ ನೆಲವನ್ನು ಉಳಿಸುವತ್ತ ಮುಂದಾಗುವAತೆ ಬೇಡಿಕೆ-ಮನವಿಗಳು ಬೆಳೆಗಾರರ ವಲಯದಲ್ಲಿ ವ್ಯಕ್ತವಾಗುತ್ತಿವೆ.
ಇದಕ್ಕೆ ಪೂರಕವೆಂಬAತೆ ಕೆಲವು ಉದಾಹರಣೆಗಳು ಕೂಡ ಬೆಳೆಗಾರರು-ರೈತ ಸಂಘದ ಪ್ರಮುಖರಿಂದ ಬೆಳಕಿಗೆ ಬರುತ್ತಿವೆ. ಬ್ಯಾಂಕ್ಗಳಿಗೆ ಜಾಗ ಅಡಮಾನವಿಟ್ಟು ಪಡೆದಿರುವ ಸಾಲದ ಮೊತ್ತ ಎಂಟತ್ತು ಪಟ್ಟು ಹೆಚ್ಚಾಗುತ್ತಿದೆ. ಆದರೆ, ಇದೇ ಜಾಗವನ್ನು ಹಲವಾರು ವರ್ಷಗಳ ಹಿಂದೆ ಅಡವಿಟ್ಟಿರುವುದು ನಿಜವಾದರೂ ಈ ಜಾಗದ ಮೌಲ್ಯ ಆ ಸಂದರ್ಭದAತಿಲ್ಲ. ಜಾಗದ ಬೆಲೆ ತೀರಾ ಹೆಚ್ಚಳವೇ ಆಗುತ್ತಿದ್ದರೂ ಸಂಬAಧಿಸಿದ ಜಾಗಕ್ಕೆ ಅತ್ಯಲ್ಪ ಮೊತ್ತದ ಬೆಲೆ ನಿಗದಿ ಮಾಡಿ ಈ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ವಿಚಾರಗಳು ಜಿಲ್ಲೆಯ ಜನರ ಅರಿವಿಗೆ ಬಾರದಂತೆ ನಡೆದು ಹೋಗುತ್ತಿವೆ. ದೊಡ್ಡ ದೊಡ್ಡ ಉದ್ಯಮಿಗಳು, ಕುಳಗಳು ಕೊಡಗಿನ ಜಾಗವನ್ನು ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಈ ಹರಾಜು ಮೂಲಕ ಪಡೆದುಕೊಳ್ಳುತ್ತಿದ್ದು, ಇಲ್ಲಿನ ಮೂಲನಿವಾಸಿಗಳ ಬದಲಾಗಿ ಕೊಡಗು ಅನ್ಯರ ಪಾಲಾಗುತ್ತಿವೆ ಎಂಬುದು ಈಗಿನ ಆತಂಕದ ಪರಿಸ್ಥಿತಿಯಾಗಿದೆ.
ಕೆನರಾ ಬ್ಯಾಂಕ್ - ಯೂನಿಯನ್ ಬ್ಯಾಂಕ್
ಪ್ರಸ್ತುತ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಕೆನರಾ ಬ್ಯಾಂಕ್ ಈ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ನಂತರದಲ್ಲಿ ಯೂನಿಯನ್ ಬ್ಯಾಂಕ್ ಇದ್ದು ಪ್ರಮುಖವಾಗಿ ಈ ಎರಡು ಬ್ಯಾಂಕ್ಗಳ ಮೂಲಕ ಅಡಮಾನವಿಟ್ಟ ಕೊಡಗು ಜಿಲ್ಲೆಯ ನೂರಾರು ತೋಟಗಳು ಹರಾಜಾಗುತ್ತಿವೆ.
ಸರ್ಫೇಸಿ ಕಾಯ್ದೆ ಏನು?
ಈ ಹಿಂದೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪೊಂದನ್ನು ನೀಡಿದೆ. ಇದರಲ್ಲಿ ಕಾಫಿ ಪ್ಲಾಂಟೇಷನ್ ಕೃಷಿ ಭೂಮಿಯಲ್ಲ ಎಂದು ಉಲ್ಲೇಖಿಸಿ ಸೆಕ್ಷನ್ ೩೧ (i) ಆಫ್ ಸರ್ಫೇಸಿ ಆ್ಯಕ್ಟ್ ಮೂಲಕ ಬ್ಯಾಂಕ್ಗಳು ಯಾವಾಗ ಬೇಕಾದರೂ ಈ ಜಾಗವನ್ನು (ಸಾಲಕ್ಕೆ ಅಡಮಾನವಾದ) ಹರಾಜು ಮಾಡಬಹುದು ಎಂಬ ಅವಕಾಶವನ್ನು ಈ ನಿರ್ದಿಷ್ಟ ಪ್ರಕರಣದ ಮೂಲಕ ನೀಡಲಾಗಿದೆ. ಇದನ್ನು ಬಳಸಿಕೊಂಡು ಇದೀಗ ಬ್ಯಾಂಕ್ಗಳು ಹರಾಜು ಪ್ರಕ್ರಿಯೆ ನಡೆಸುತ್ತಿವೆ. ಕೊಡಗು ಸೇರಿದಂತೆ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಇದು ನಡೆಯುತ್ತಿದ್ದು, ಕೊಡಗಿನಲ್ಲಿ ಪ್ರಕರಣಗಳು ಹೆಚ್ಚಿವೆ.
ಹೈಕೋರ್ಟ್, ಡಿಆರ್ಟಿ ಕೋರ್ಟ್ಗಳಲ್ಲಿ ಪ್ರಕರಣಗಳು ಮುಂದುವರಿಯುತ್ತಿದ್ದರೂ ಜಿಲ್ಲಾ ಬ್ಯಾಂಕ್ಗಳಿAದ ಅನುಮತಿ ಪಡೆದು ಕೋರ್ಟ್ ಕಮೀಶನ್ ಮೂಲಕ ಬಲಾತ್ಕಾರ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳುತ್ತಾರೆ. ಜಾಗಕ್ಕೆ ಸಾಲ ಪಡೆದಿದ್ದರೂ ಆ ಜಾಗದಲ್ಲಿರುವ ಮನೆಯನ್ನು ವಶಕ್ಕೆ ಪಡೆಯುವುದು, ಸಾಮಗ್ರಿಗಳನ್ನು ಮುಟ್ಟುಗೋಲು ಹಾಕುವುದು ನಡೆಯುತ್ತಿದ್ದು, ಇದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ರೀತಿಯ ಬಲಾತ್ಕಾರದ ವಿಚಾರಗಳು ಹಲವಷ್ಟು ನಡೆಯುತ್ತಿದೆ. ಇತ್ತೀಚಿಗೆ ಸುರಿಯುತ್ತಿದ್ದ ಭಾರೀ ಮಳೆಯ ನಡುವೆ ಮನೆಯೊಂದನ್ನು ಕೆನರಾ ಬ್ಯಾಂಕ್ನ ಮಂಗಳೂರು ಎ.ಆರ್.ಎಂ. ಬ್ರಾö್ಯಂಚ್ನ ಮೂಲಕ ನಡೆಸಲಾಗಿದೆ ಎಂದು ಅವರು ಉದಾಹರಿಸಿದ್ದಾರೆ.
ಸಮಸ್ಯೆಗಳ ಸುಳಿಯಲ್ಲಿ ಬೆಳೆಗಾರರು
ಮತ್ತೊಂದು ವಿಚಾರವೆಂದರೆ ಯಾವದೇ ಬೆಳೆಗಾರರೂ ಸಾಲ ಮರುಪಾವತಿ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ. ಅಸಲು (ಮೂಲ ಸಾಲ) ಹಾಗೂ ಕನಿಷ್ಟ ಶೇಕಡ ಬಡ್ಡಿ ನೀಡಲು ಸಿದ್ಧರಿದ್ದಾರೆ. ಆದರೆ, ಪ್ರಸ್ತುತ ಬೆಳೆಗಾರರು ಹತ್ತುಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಎಂಟು ಪಟ್ಟು - ಹತ್ತು ಪಟ್ಟುಗಳಷ್ಟು ಮೊತ್ತ ಹಿಂದಿರುಗಿಸುವ ಸಾಮರ್ಥ್ಯ ಹೊಂದಿಲ್ಲ. ವನ್ಯಜೀವಿಗಳ ಕಾಟ, ಕಾರ್ಮಿಕರ ಸಮಸ್ಯೆ, ಮತ್ತಿತರ ಹಲವು ಕಾರಣಗಳಿಂದ ಯಾವುದೇ ಕೃಷಿ ಈಗಿನ ಪರಿಸ್ಥಿತಿಯಲ್ಲಿ ಲಾಭಕರವಾಗಿಲ್ಲ. ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಿದೆ ಎಂಬುದು ಹಲವರ ವಾದ.
ಭವಿಷ್ಯದಲ್ಲಿ ಗಂಭೀರ ಪರಿಣಾಮ
ಹರಾಜಾಗುತ್ತಿರುವ ಕೊಡಗಿನ ನೆಲ ಭವಿಷ್ಯದಲ್ಲಿ ಮೂಲಸ್ವರೂಪವನ್ನು ಕಳೆದುಕೊಳ್ಳುವುದು ಖಚಿತ. ಹರಾಜಿನ ಮೂಲಕ ಜಿಲ್ಲೆಯ ಜಾಗ ಖರೀದಿ ಮಾಡುವವರು ಖಂಡಿತಾ ಕೃಷಿ ಮಾಡಲಾರರು. ಶೇ ೮೦ರಷ್ಟು ಜಾಗ, ಲೇಔಟ್ಗಳಾಗಿ, ರೆಸಾರ್ಟ್ಗಳಾಗಿ, ವಿಲ್ಲಾಗಳಾಗಿ ಪರಿವರ್ತನೆಯಾಗಲಿದೆ. ಇಂದು ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಪರಿಸರ ಸಮತೋಲನ ಜಲಮೂಲ ಸೇರಿ ಕುಡಿಯುವ ನೀರಿಗೂ ತತ್ವಾರಕ್ಕೆ ಕಾರಣವಾಗಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಲಯವೇ ಈಗಿನ ಬೆಳವಣಿಗೆ ಗಮನಿಸಿ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲೆಯ ಜನರ ಪರವಾಗಿ ಮನವಿ ಮಾಡುವುದಾಗಿ ಮನು ಸೋಮಯ್ಯ ಅವರು ‘ಶಕ್ತಿ’ಯೊಂದಿಗೆ ನುಡಿದರು. ಇತ್ತೀಚೆಗೆ ಪ್ರಕರಣವೊಂದರಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಜಸ್ಟೀಸ್ ನಾಗಪ್ರಸನ್ನ ಅವರ ನಡೆ ಶ್ಲಾಘನೀಯ ಇದನ್ನು ರೈತ ಸಂಘ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ತಿದ್ದುಪಡಿ ಮಸೂದೆ ಅನಿವಾರ್ಯ
ಈ ಕಾಯ್ದೆಯ ಸಮಸ್ಯೆ ಸರಿಪಡಿಸಲು ಸಂಬAಧಿಸಿದ ಸಂಸದರು, ಪ್ರಮುಖರನ್ನು ಭೇಟಿಯಾಗಿ ಚರ್ಚೆ-ಮನವಿ ಮಾಡಲಾಗಿದೆ. ಸದ್ಯಕ್ಕೆ ಕೇವಲ ಬಾಯಿಮಾತಿನಲ್ಲಿ ಭರವಸೆ ದೊರೆತಿದೆ. ಆದರೆ, ಸರಕಾರ ಅಧಿಕೃತ ಆದೇಶದೊಂದಿಗೆ ಇದು ಗೆಜೆಟ್ ನೋಟಿಫಿಕೇಷನ್ ಮೂಲಕವಷ್ಟೆ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಸಂಸದರುಗಳು ವಿಶೇಷ ಪ್ರಯತ್ನ ನಡೆಸಬೇಕಿದೆ. ಇದರ ಹೊರತಾಗಿ ಅನ್ಯಮಾರ್ಗವಿಲ್ಲ ಎಂಬುದು ವಾಸ್ತವ.