ಚಾಮರಾಜನಗರ, ಜು. ೨೭: ಕಾಡುಹಂದಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಘರ್ಷಣೆ ನಡೆದು ಅರಣ್ಯ ಅಧಿಕಾರಿಗಳು ಗುಂಡು ಹಾರಿಸಿ ಓರ್ವ ಬೇಟೆಗಾರನನ್ನು ಬಂಧಿಸಿದ ಘಟನೆ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದಿದೆ.

ಬಂಧಿತನನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅನ್ವಿತ್ ಎಂದು ಗುರುತಿಸಲಾಗಿದ್ದು, ಇವನ ಜೊತೆಗಾರರಾದ ದರ್ಶನ್, ಮಂಜ ಹಾಗೂ ಕಿರಣ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ನಾಲ್ವರ ತಂಡವು ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಬೇಟೆಗೆ ಬಂದಿದ್ದು ಎಂದು ತಿಳಿಸಿದ ಡಿಸಿಎಫ್ ಭಾಸ್ಕರ್, ಈ ಹಿಂದೆಯೂ ಇವರು ಈ ಪ್ರದೇಶದಲ್ಲಿ ಬೇಟೆಯಾಡುತಿದ್ದ ಗುಮಾನಿಯಿದ್ದು, ಈ ಕುರಿತು ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

ಆದರೆ ಬೇಟೆ ಸಂದರ್ಭ ಗುಂಡಿನ ಶಬ್ದ ಕೇಳಿ ಬಂದ ಹಿನ್ನೆಲೆ ಸ್ಥಳೀಯ ಅರಣ್ಯಾಧಿಕಾರಿಗಳು ಜಾಗೃತರಾಗಿದ್ದರು. ಹೀಗಾಗಿ ಚೆಕ್‌ಪೋಸ್ಟ್ನಲ್ಲಿ ಕಾವಲು ಬಿಗಿ ಮಾಡಲಾಗಿತ್ತು. ನಿರೀಕ್ಷೆಯಂತೆಯೇ ಸೋಮವಾರ ಬೆಳಗ್ಗಿನ ಜಾವ ೩ ರಿಂದ ೪ ಗಂಟೆ ಸಮಯದಲ್ಲಿ (ಕೆಎ-೦೨ ಝಡ್ ೭೨೨೫) ನೋಂದಣಿಯ ಆಲ್ಟೋ ಕಾರಿನಲ್ಲಿ ಬೇಟೆಯಾಡಿದ ಹಂದಿಗಳ ಜೊತೆ ಕೊಡಗಿನೆಡೆಗೆ ತೆರಳಲು ಪ್ರಯತ್ನಿಸಿದಾಗ ಆರೋಪಿಗಳನ್ನು ಅರಣ್ಯ ಸಿಬ್ಬಂದಿ ಅಡ್ಡಗಟ್ಟಿದ್ದಾರೆ. ಈ ವೇಳೆ, ಆರೋಪಿಗಳು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆಯಲು ಹೋದಾಗ ನಡೆದ ಘರ್ಷಣೆ ಸಂಬAಧ ಅನ್ವಿತ್ ಬಲಗಾಲಿಗೆ ಸ್ಲೆöÊಡ್ ಆ್ಯಕ್ಷನ್ ಗನ್‌ನಿಂದ ಗುಂಡು ತಗುಲಿದೆ. ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ದಾಳಿ ವೇಳೆ ಸ್ಥಳದಲ್ಲಿ ಎರಡು ಮೃತ ಕಾಡು ಹಂದಿಗಳು, ಒಂದು ಮಚ್ಚು, ಎರಡು ಟಾರ್ಚ್, ಒಂದು ಟಾರ್ಪಲ್, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಲ್ಟೋ ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಅನ್ವಿತ್‌ಗೆ ಹನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟದ ವಲಯ ಅರಣ್ಯಾಧಿಕಾರಿ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. - ಕೋವರ್‌ಕೊಲ್ಲಿ ಇಂದ್ರೇಶ್