ಮಡಿಕೇರಿ, ಜು. ೨೬: ಸ್ಕಾಟ್‌ಲೆಂಡ್‌ನ ಗಾಸ್ಕೋದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೊಡಗಿನವರಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಾಕ್ಸಿಂಗ್‌ಪಟು ಚೇನಂಡ ವಿಶು ಕುಟ್ಟಪ್ಪ ಅವರು ಭಾರತ ತಂಡದ ಹೆಡ್‌ಕೋಚ್ ಆಗಿ ತೆರಳಿದ್ದಾರೆ.
ಇವರ ಗರಡಿಯಲ್ಲಿ ಭಾರತೀಯ ಪುರುಷ - ಮಹಿಳಾ ಬಾಕ್ಸಿಂಗ್‌ಪಟುಗಳು ಪ್ರಶಸ್ತಿಯ ಹೋರಾಟದಲ್ಲಿದ್ದಾರೆ.