ವೀರಾಜಪೇಟೆ, ಜು. ೨೬: ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟಿçÃಯ ಸೇವಾ ಯೋಜನೆ (ಎನ್ಎಸ್ಎಸ್) ಸ್ವಯಂ ಸೇವಕರಿಂದ ಸುಮಾರು ೫೦ ಹಣ್ಣಿನ ಗಿಡಗಳನ್ನು ನೆಡುವ ವೃಕ್ಷಾರೋಪಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ವೀರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು, ಜೈಭಾರತ್ ಆರ್ಮಿ ಕೋಚಿಂಗ್ ಸೆಂಟರ್, ಅರಣ್ಯ ಇಲಾಖೆ ವಿಭಾಗೀಯ ಕಚೇರಿ ಹಾಗೂ ಶ್ರೀ ಆದಿ ಬೈತೂರಪ್ಪ ಭಕ್ತ ಜನ ಸಂಘದ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜೈಭಾರತ್ ಆರ್ಮಿ ಕೋಚಿಂಗ್ ಸೆಂಟರ್ ತರಬೇತುದಾರ ಕುಟ್ಟಂಡ ಲವ ಪೊನ್ನಪ್ಪ, ಆದಿ ಬೈತೂರಪ್ಪ ಭಕ್ತ ಜನ ಸಂಘದ ಅಧ್ಯಕ್ಷ ಅಮ್ಮಣಕುಟ್ಟಂಡ ಎ. ಕಿರಣ್ ಸುಬ್ರಮಣಿ, ಸಂಚಾಲಕ ಚೇಂದAಡ ಶಿವಕುಮಾರ್, ಅರಣ್ಯಾಧಿಕಾರಿ ರಾಘವ, ಫಾರೆಸ್ಟ್ ರೇಂಜ್ ಅಧಿಕಾರಿ ಶಿವರಾಮ್ ಉಪಸ್ಥಿತರಿದ್ದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಅನುಷಾ ತಿಮ್ಮಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ. ಪದ್ಮ ಹಾಗೂ ಡಾ. ವೀಣಾ ಕೆ.ಜಿ, ಉಪನ್ಯಾಸಕರಾದ ದೇಚಮ್ಮ ಎಂ.ಬಿ. ಬೋಪಣ್ಣ ಕೆ.ಪಿ., ದಿವ್ಯ, ಜೈಭಾರತ್ ಕೋಚಿಂಗ್ ಸೆಂಟರ್ನ ವಿದ್ಯಾರ್ಥಿಗಳು ಮತ್ತು ಎನ್ಎಸ್ಎಸ್ ಸ್ವಯಂಸೇವಕರು ಪಾಲ್ಗೊಂಡಿದ್ದರು.