ಶನಿವಾರಸಂತೆ, ಜು. ೨೫: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ಸಂಜೆ ಶನಿವಾರಸಂತೆ ಯೂತ್ ಫಾರ್ ನೇಶನ್ ವತಿಯಿಂದ ಸಿಜೆಪಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದನ್ನು ಖಂಡಿಸಿ ಹಾಗೂ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಶ್ರೀ ನಂದೀಶ್ವರ ಕಲ್ಯಾಣ ಮಂಟಪದಿAದ ಮುಖ್ಯರಸ್ತೆಯಲ್ಲಿ “ನಮ್ಮ ನಾಯಕ ಮೋದಿಜಿ’’ ಎಂಬ ಬ್ಯಾನರ್ ಹಾಗೂ ಕೇಸರಿ ಧ್ವಜವನ್ನು ‘ನಾವೆಲ್ಲಾ ಹಿಂದೂ …ಎಂದೆAದೂ ಒಂದು’ ಎಂಬ ಘೋಷಣೆಗಳನ್ನು ಕೂಗುತ್ತಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಮಾವೇಶಗೊಂಡರು.
ಮುಖAಡ ಎಸ್.ಎನ್. ರಘು ಮಾತನಾಡಿ, ಇದು ಸಂಘಟಿತ ಹೋರಾಟವಾಗಿದ್ದು, ದೇಶದ ಮೇಲಿನ ದಬ್ಬಾಳಿಕೆಯನ್ನು ಖಂಡಿಸುವ ಹೋರಾಟ ಎಂದರು.
ಮುಖAಡ ಬಿ.ಎಸ್. ಅನಂತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮೋದಿಜಿ ಮುಂದೆ ಬಂದಿದ್ದಾರೆ. ಪ್ರಕರಣದ ಹಿಂದೆ ಕಾಂಗ್ರೆಸ್ಸಿನವರ ಕೈವಾಡವಿದೆ ಎಂದರು.
ಯುವ ಮುಖಂಡ ತನ್ಮಯ್ ಮಾತನಾಡಿ, ಭಾರತ ದೇಶದ ಮೇಲಿನ ಪ್ರೇಮಾಭಿಮಾನದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡರಾದ ರಕ್ಷಿತ್ ಗೌಡ ಹಾಗೂ ಭಗವಾನ್ ಗೌಡ ಮಾತನಾಡಿದರು. ಪ್ರತಿಭಟನೆ ಆಯೋಜಕರಾದ ತನ್ಮಯ್, ಅಶ್ವಥ್, ಮುಖಂಡರಾದ ಸೋಮೇಶ್, ಶರತ್, ರಘು, ಅನಂತ್, ರಕ್ಷಿತ್, ನಿತಿನ್, ಭಗವಾನ್, ಮೋಕ್ಷಿತ್, ನಿಶಾಂತ್ ಕೋಟೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮೆರವಣಿಗೆ ಮತ್ತು ಪ್ರತಿಭಟನೆಯಲ್ಲಿ ೧೦೦ ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.