ಮಡಿಕೇರಿ, ಜು.೨೪: ೨೦೨೬ನೇ ಸಾಲಿನ ಸಿ.ಐ.ಎಸ್.ಸಿ.ಇ ಕರ್ನಾಟಕ-ಗೋವಾ ಪ್ರಾದೇಶಿಕ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ೬ ಚಿನ್ನ, ೫ ಬೆಳ್ಳಿ ಹಾಗೂ ೧ ಕಂಚಿನ ಪದಕ ಪಡೆಯುವುದರೊಂದಿಗೆ ಒಟ್ಟು ೧೨ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪದಕ ಪಡೆದ ೧೨ ಮಂದಿ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ. ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ಎ.ಎಸ್.ಎಫ್ ಶೂಟಿಂಗ್ ರೇಂಜ್‌ನಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು ರಾಜ್ಯದ ವಿವಿಧೆಡೆಗಳಿಂದ ೬೬ ಶಾಲೆಗಳು ಭಾಗವಹಿಸಿದ್ದವು. ಒಟ್ಟು ೨೦೧ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಓಪನ್ ಸೈಟ್ ರೈಫಲ್, ಪೀಪ್ ಸೈಟ್ ರೈಫಲ್ ಹಾಗೂ ಪಿಸ್ಟೂಲ್ ವಿಭಾಗಗಳಲ್ಲಿ ೧೦ ಮೀಟರ್ ಸ್ಪರ್ಧೆ ನಡೆದಿದ್ದು ೧೪, ೧೭ ಹಾಗೂ ೧೯ ವಯೋಮಾನದ ೩ ವಿಭಾಗಗಳಲ್ಲಿ ಶೂಟಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು.