ಮಡಿಕೇರಿ, ಜು. ೨೪: ಲಂಚ ಸ್ವೀಕಾರದಿಂದ ಲೋಕಾಯುಕ್ತ ಬಲೆಗೆ ಬಿದ್ದು ಅಮಾನತುಗೊಂಡಿದ್ದ ಸಿಬ್ಬಂದಿಯಿAದಲೇ ಲಂಚ ಪಡೆಯಲು ಮುಂದಾಗಿದ್ದ ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಇಬ್ಬರು ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಡಿಕೇರಿಯ ಲೋಕೋಪಯೋಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೂಪ್ ಡಿ ನೌಕರ ಶರತ್ ಎಂಬಾತ ಫೆಬ್ರವರಿ ತಿಂಗಳಿನಲ್ಲಿ ಲಂಚ ಸ್ವೀಕಾರ ಸಂದರ್ಭ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈ ವೇಳೆ ಆತನನ್ನು ಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡರೂ ಶೇ ೫೦ ವೇತನ ಹಾಗೂ ನಿಗದಿತ ಸಮಯದ ನಂತರ ಅಮಾನತು ಹಿಂಪಡೆಯಲು ಅವಕಾಶವಿದ್ದು, ಈ ಸಂಬAಧ ಕ್ರಮಕೈಗೊಳ್ಳಲು ಇಲಾಖೆಯ ವ್ಯವಸ್ಥಾಪಕ ವೈದ್ಯನಾಥ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ಇವರುಗಳು ವಿಳಂಬ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾಡಿದ್ದಲ್ಲದೆ ರೂ. ೧೦ ಸಾವಿರ ಲಂಚಕ್ಕೆ ಬೇಡಿಕೆಯೊಡ್ಡಿದ್ದು, ಕೊನೆಗೆ ರೂ. ೮ ಸಾವಿರ ನೀಡಲು ಮಾತುಕತೆಯಾಗಿತ್ತು. ಶರತ್ ಈಗಾಗಲೇ ವ್ಯವಸ್ಥಾಪಕ ವೈದ್ಯನಾಥ್‌ಗೆ ರೂ. ೩ ಸಾವಿರ, ದ್ವಿತೀಯ ದರ್ಜೆ ಸಹಾಯಕ ಸೋಮಣ್ಣಗೆ ರೂ. ೨ ಸಾವಿರ ಹಣವನ್ನು ನೀಡಿದ್ದರು.

ಬಳಿಕ ಲೋಕಾಯುಕ್ತ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದು, ಶರತ್ ಲಂಚ ನೀಡುವ ಸಂದರ್ಭ ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ವೈದ್ಯನಾಥ್ ಅವರನ್ನು ಬಂಧಿಸಿದೆ. ಅಲ್ಲದೆ ಈ ಸಂದರ್ಭ ಮೈಸೂರಿನಲ್ಲಿ ಸೋಮಣ್ಣನನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.