ಮಡಿಕೇರಿ, ಜು. ೨೩: ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಸೇರಿದಂತೆ ಮಡಿಕೇರಿ, ಕೂಡಿಗೆ ಹಾಗೂ ಪೊನ್ನಂಪೇಟೆಯ ಕ್ರೀಡಾ ವಸತಿ ನಿಲಯಗಳಿಗೆ ಏಕಕಾಲದಲ್ಲಿ ದಿಢೀರ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿತು.
ಕ್ರೀಡಾ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅವ್ಯವಸ್ಥೆಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಶೋಧನಾ ವಾರಂಟ್ ಜಾರಿ ಮಾಡಿ ಪರಿಶೀಲನೆಗೆ ಸೂಚನೆ ನೀಡಿದ್ದರು. ಅದರಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ಪರಿಶೀಲನಾ ಕಾರ್ಯ ಕೈಗೊಂಡಿತು.
ಬೆಳಿಗ್ಗೆ ಸುಮಾರು ೧೧ ಗಂಟೆಗೆ ಆರಂಭವಾದ ಪರಿಶೀಲನೆ ಸಂಜೆವರೆಗೂ ಮುಂದುವರಿಯಿತು. ಅಧಿಕಾರಿಗಳು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆೆ ಕಚೇರಿಯಲ್ಲಿನ ಆಡಳಿತಾತ್ಮಕ ದಾಖಲೆಗಳು, ಗಣಕಯಂತ್ರದಲ್ಲಿನ ಮಾಹಿತಿ ಹಾಗೂ ವಿವಿಧ ಕಡತಗಳನ್ನು ಪರಿಶೀಲಿಸಿದರು.
ಮಡಿಕೇರಿ, ಕೂಡಿಗೆ ಮತ್ತು ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಗಳಿಗೆ ಭೇಟಿ ನೀಡಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿರುವ ಮೂಲಸೌಲಭ್ಯಗಳು, ಊಟದ ವ್ಯವಸ್ಥೆ, ಕ್ರೀಡಾ ಪರಿಕರಗಳ ವಿತರಣೆ, ವಸತಿ ವ್ಯವಸ್ಥೆ ಹಾಗೂ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿವೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಂಬAಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯಿAದ ಅಗತ್ಯ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಲಾಯಿತು.
ಕೂಡಿಗೆ
ಕೂಡಿಗೆಯಲ್ಲಿರುವ ರಾಜ್ಯದ ಏಕೈಕ ಕ್ರೀಡಾ ಪ್ರೌಢಶಾಲೆಗೆ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಸುಮಾರು ನಾಲ್ಕು ಗಂಟೆಗಳ ಕಾಲ ಸಮಗ್ರ ಪರಿಶೀಲನೆ ನಡೆಸಿತು.
ಕ್ರೀಡಾ ಶಾಲೆ ಹಾಗೂ ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗಳ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರ ನಿರ್ದೇಶನದ ಮೇರೆಗೆ ಈ ಪರಿಶೀಲನೆ ನಡೆಸಲಾಯಿತು.
ಶಾಲೆಗೆ ಆಗಮಿಸಿದ ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ ಅವರು ಮೊದಲಿಗೆ ವಿದ್ಯಾರ್ಥಿಗಳ ಪ್ರವೇಶ ದಾಖಲೆಗಳು, ಶಾಲೆಯ ಹಣಕಾಸು ವಹಿವಾಟು, ಆಡಳಿತಾತ್ಮಕ ದಾಖಲೆಗಳು ಹಾಗೂ ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲಿಸಿದರು. ಅಲ್ಲದೆ, ಶಿಕ್ಷಕರ ನೇಮಕಾತಿ, ಕರ್ತವ್ಯ ನಿರ್ವಹಣೆ ಹಾಗೂ ಶಾಲೆಯ ಆಡಳಿತ ವ್ಯವಸ್ಥೆಗೆ ಸಂಬAಧಿಸಿದ ಮಾಹಿತಿಯನ್ನೂ ಪಡೆದುಕೊಂಡರು.
ಬಳಿಕ ವಿವಿಧ ತರಗತಿಗಳಿಗೆ ಭೇಟಿ ನೀಡಿ ಉಸ್ತುವಾರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಶಾಲೆಯ ಭೋಜನಾಲಯಕ್ಕೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಆಹಾರ ಪಟ್ಟಿಯನ್ನು ಪರಿಶೀಲಿಸಿದ ಅವರು, ಮಧ್ಯಾಹ್ನದ ಊಟವನ್ನು ಸ್ವತಃ ಸೇವಿಸಿ ಗುಣಮಟ್ಟವನ್ನು ಪರಿಶೀಲಿಸಿದರು.
ನಂತರ ಕ್ರೀಡಾ ತರಬೇತಿ ನಡೆಯುವ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ತರಬೇತುದಾರರಿಂದ ತರಬೇತಿ ವ್ಯವಸ್ಥೆ, ಕ್ರೀಡಾ ಪರಿಕರಗಳು ಹಾಗೂ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಶಾಲೆಯ ಆಡಳಿತ, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆಗೆ ಸಂಬAಧಿಸಿದAತೆ ಸಿಬ್ಬಂದಿಯಿAದಲೂ ವಿವರಗಳನ್ನು ಪಡೆದು ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಿದರು.
ಮಡಿಕೇರಿ
ಮಡಿಕೇರಿ ನಗರದ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಕಚೇರಿಯಲ್ಲಿನ ಆಡಳಿತಾತ್ಮಕ ಕಾರ್ಯಗಳು ಹಾಗೂ ದಾಖಲೆಗಳ ಪರಿಶೀಲನೆ ನಡೆಸಿತು.
ತಂಡವು ಗಣಕಯಂತ್ರದಲ್ಲಿನ ಮಾಹಿತಿ ಸೇರಿದಂತೆ ವಿವಿಧ ಕಡತಗಳನ್ನು ಪರಿಶೀಲಿಸಿತು. ಅಲ್ಲದೆ, ಕ್ರೀಡಾ ಇಲಾಖೆಯ ವತಿಯಿಂದ ನಿರ್ವಹಣೆಯಾಗುತ್ತಿರುವ ಕ್ರೀಡಾ ವಸತಿ ನಿಲಯಕ್ಕೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಅವಲೋಕಿಸಿತು.
ಪರಿಶೀಲನೆ ವೇಳೆ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವಿಸ್ಮಯಿ ಹಾಗೂ ಸಿಬ್ಬಂದಿಯಿAದ ಇಲಾಖೆಯ ಕಾರ್ಯನಿರ್ವಹಣೆ, ದಾಖಲೆಗಳ ನಿರ್ವಹಣೆ ಮತ್ತು ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಪೊನ್ನAಪೇಟೆ
ಕ್ರೀಡಾ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಯ ಬಗ್ಗೆ ದೂರಿನ ಹಿನ್ನೆಲೆಯಲ್ಲಿ, ಮೈಸೂರು ಲೋಕಾಯುಕ್ತ ಪೊಲೀಸರು ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರು ಲೋಕಾಯುಕ್ತ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್. ಕೆ. ಎನ್ ನೇತೃತ್ವದ ತಂಡವು ವಸತಿ ನಿಲಯದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿತು. ನಂತರ ಅಡುಗೆ ಮನೆ, ಮಲಗುವ ಹಾಲ್, ಶೌಚಾಲಯ, ಊಟದ ಹಾಲ್ ಸೇರಿದಂತೆ ಇಡೀ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಪರಿಶೀಲನೆಯ ವೇಳೆ ಹಲವು ಲೋಪಗಳು ಕಂಡುಬAದವು. ವಸತಿ ನಿಲಯದ ಎಲ್ಲಾ ಕಡೆ ಅಶುಚಿತ್ವ ಕಂಡುಬAತು. ಮಲಗುವ ಹಾಲ್‌ನಲ್ಲಿದ್ದ ಫ್ಯಾನ್‌ಗಳು ರಿಪೇರಿಗೆ ಒಳಗಾಗಿದ್ದವು. ವಿದ್ಯಾರ್ಥಿಗಳಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಇರಲಿಲ್ಲ. ಹಾಲ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಸಮರ್ಪಕವಾಗಿರಲಿಲ್ಲ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳನ್ನು ವಿತರಿಸಿಲ್ಲ. ವಿದ್ಯಾರ್ಥಿಗಳಿಗೆ ಸೋಪು, ಟೂತ್‌ಪೇಸ್ಟ್ನಂತಹ ಅಗತ್ಯ ವಸ್ತುಗಳನ್ನು ಕೂಡ ನೀಡಿಲ್ಲ ಎಂಬ ಬಗ್ಗೆ ಮಾಹಿತಿ ಪಡೆಯಲಾಯಿತು. ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್‌ಗಳನ್ನು ನೀಡಿ ವರ್ಷಗಳೇ ಕಳೆದಿವೆ ಎಂಬ ಮಾಹಿತಿ ಲಭ್ಯವಾಯಿತು. ವಸತಿ ನಿಲಯದ ಆವರಣದಲ್ಲೂ ಸ್ವಚ್ಛತೆ ಇರಲಿಲ್ಲ.
ವಿದ್ಯಾರ್ಥಿಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ನೀಡದಿರುವ ಬಗ್ಗೆ ಇನ್ಸ್ಪೆಕ್ಟರ್ ಗಿರೀಶ್ ಅವರು ಮಾಹಿತಿ ಪಡೆದರು. ಈ ಸಂಬAಧ ವಸತಿ ನಿಲಯದಲ್ಲಿರುವ ಎಲ್ಲಾ ಅವ್ಯವಸ್ಥೆಗಳ ಕುರಿತು ಮಡಿಕೇರಿಯ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಈ ವೇಳೆ ಲೋಕಾಯುಕ್ತ ಸಿಬ್ಬಂದಿ ವೀಣಾ ಮತ್ತು ಗೋಪಿ, ವಸತಿ ನಿಲಯದ ಮೇಲ್ವಿಚಾರಕ ದಿನೇಶ್ ಹಾಗೂ ಸಿಬ್ಬಂದಿ ಇದ್ದರು.