ಶನಿವಾರಸಂತೆ, ಜು. ೨೩: ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪದವಿಪೂರ್ವ ಕಾಲೇಜಿನ ಪ್ರಾಢಶಾಲಾ ವಿಭಾಗದಲ್ಲಿ ೨೦೨೬-೨೭ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಶಿಸ್ತುಬದ್ಧವಾಗಿ ಉತ್ಸಾಹದಿಂದ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ಹಾಗೂ ಕುತೂಹಲದಿಂದ ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕ ಪಿ. ನರಸಿಂಹ ಮೂರ್ತಿ ಚುನಾವಣಾಧಿಕಾರಿಯಾಗಿ, ಶಾಲಾ ಚುನಾವಣಾ ಅನುಮೋದಕರಾಗಿ ಎಂ.ಈ. ಶಬಾನಾ, ಶಾಲಾ ಚುನಾವಣಾ ಸೂಚಕರಾಗಿ ಸಿ.ಆರ್. ಗೋಪಾಲ್, ಹೆಚ್.ಎನ್. ಭವಾನಿ, ಸರೋಜಿನಿ, ಹಸೀನಾ ಬಾನು ಕಾರ್ಯ ನಿರ್ವಹಿಸಿದರು. ಚುನಾವಣಾಧಿಕಾರಿ ಪಿ. ನರಸಿಂಹ ಮೂರ್ತಿ ಮಾತನಾಡಿ, ಚುನಾವಣಾ ಪ್ರಕ್ರಿಯೆ, ಮತದಾನದ ಮಹತ್ವ ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಮತಪತ್ರ ಎಣಿಕೆ ನ್ಯಾಯಸಮ್ಮತವಾಗಿ ನಡೆಯಿತು.

ಶಾಲಾ ಸಂಸತ್‌ಗೆ ೧೬ ವಿದ್ಯಾರ್ಥಿಗಳು ಆಯ್ಕೆಯಾದರು. ಮಂತ್ರಿಮAಡಲದ ಸದಸ್ಯರಾಗಿ ಅಹಿಶತು ಸಫನಾ, ಯಶಸ್, ಗೌತಮಿ, ನಯನ, ದೈವಿಕ್, ಪ್ರಥಮ್, ಅರ್ಬಾಜ್, ಅನುಶ್ರೀ, ಸಿಂಚನಾ, ಮಹಮ್ಮದ್ ಶಾಹಿಲ್, ಜೀವಿತ ಮಾರ್ಟಿನ್, ಯಶಸ್, ಸಮೀರ್, ಶ್ರೇಯಸ್, ಸಂಗೀತ, ಗಾನವಿ ಆಯ್ಕೆಯಾಗಿದ್ದು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಂಕಲ್ಪ ಮಾಡಿದರು. ಶಾಲಾ ಸಂಸತ್‌ಗೆ ನಡೆಯುವ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಜತೆಗೆ ಜವಾಬ್ದಾರಿಯ ಗುಣಗಳನ್ನು ಬೆಳೆಸುತ್ತವೆ ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.