ಚೆಯ್ಯAಡಾಣೆ, ಜು. ೨೨: ಸಮಸ್ತ ಸೆಂಟಿನರಿಯ ಅಂಗವಾಗಿ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು.

ಶಿಬಿರದಲ್ಲಿ ಎಸ್‌ವೈಎಸ್‌ನ ೫೦ ರಷ್ಟು ಮಂದಿ ರಕ್ತದಾನಿಗಳು ಪಾಲ್ಗೊಂಡು ರಕ್ತದಾನ ಮಾಡಿದರು. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಅತ್ಯಂತ ಶ್ರೇಷ್ಠ ದಾನವಾದ ರಕ್ತದಾನ ಶಿಬಿರ ಹಮ್ಮಿಕೊಂಡಿರುವ ಎಸ್‌ವೈಎಸ್‌ನ ಹೆಜ್ಜೆ ಅತ್ಯಂತ ಶ್ಲಾಘನೀಯವೆಂದರು.

ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕೊಳಕೇರಿ ಮಾತನಾಡಿ, ಎಸ್‌ವೈಎಸ್ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರಗಳು, ಸ್ವಾತಂತ್ರ‍್ಯೋತ್ಸವದ ಅಂಗವಾಗಿ ನಡೆಸಲ್ಪಡುವ ಫ್ರೆಶ್ ಇಂಡಿಯ ಸೇರಿದಂತೆ ಇನ್ನಿತರ ಜನೋಪಯೋಗಿ ಕಾರ್ಯಗಳಲ್ಲಿ ಸಾರ್ವಜ

ನಿಕರ ಬೆಂಬಲ ಅನಿವಾರ್ಯ ಎಂದರು. ಈ ಸಂದರ್ಭ ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಳ್ಳರಿ, ಕೋಶಾಧಿಕಾರಿ ಶರೀಫ್ ಮಾಸ್ಟರ್, ಸಾಂತ್ವನ ವಿಭಾಗದ ಅಧ್ಯಕ್ಷ ಝುಬೈರ್ ಕೂಡಿಗೆ, ಕಾರ್ಯದರ್ಶಿ ಬಶೀರ್ ಕೊಟ್ಟಮುಡಿ, ಮಡಿಕೇರಿ ಝೋನ್ ಅಧ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್, ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು, ಎಸ್‌ವೈಎಸ್ ಸಾಂತ್ವನ ಹಾಗೂ ಇಸಾಬ ವಿಭಾಗದ ಪದಾಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.