ಸೋಮವಾರಪೇಟೆ, ಜು. ೨೨: ಸಮೀಪದ ಓ.ಎಲ್.ವಿ. ಶಾಲಾ ಪ್ರದೇಶ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಶಾಲೆಗೆ ತೆರಳುವ ಪುಟ್ಟ ಮಕ್ಕಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಮಂಗಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಾನಗಲ್ಲು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.

ಶಾಲಾ ಆವರಣ ಸೇರಿದಂತೆ ಈ ಭಾಗದ ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಮಕ್ಕಳ ಊಟದ ಬ್ಯಾಗ್‌ಗಳು ಸೇರಿದಂತೆ ಶಾಲಾ ಬ್ಯಾಗ್ ಎಳೆಯುವುದು, ಹೊತ್ತೊಯ್ಯುವುದು, ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಭಯ ಸೃಷ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಇದರಿಂದಾಗಿ ಮಕ್ಕಳು ಪ್ರತಿದಿನ ಭಯದಿಂದಲೇ ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಗಳಿಂದ ಮಕ್ಕಳ ಪೋಷಕರಲ್ಲಿಯೂ ಆತಂಕ ಹೆಚ್ಚಾಗಿದೆ. ಮಂಗಗಳ ಹಾವಳಿಯಿಂದ ಅಪಾಯ ಸಂಭವಿಸುವ ಮುನ್ನ ಸಂಬAಧಿಸಿದ ಇಲಾಖೆ ತುರ್ತು ಕ್ರಮ ಕೈಗೊಂಡು ಮಂಗಗಳನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆAದು ಕರ್ನಾಟಕ ರಕ್ಷಣಾ ವೇದಿಕೆ-ಪ್ರವೀಣ್ ಶೆಟ್ಟಿ ಬಣದ ನಗರಾಧ್ಯಕ್ಷ ಮಂಜುನಾಥ್ ಅವರು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭ ನಗರ ಘಟಕದ ಕಾರ್ಯದರ್ಶಿ ಕೆ.ಪಿ. ರವೀಶ್, ಪದಾಧಿಕಾರಿ ಮಹಮ್ಮದ್ ಶಫಿ, ಸುಲೈಮಾನ್ ಸೇರಿದಂತೆ ಇತರರು ಇದ್ದರು.