ಮಡಿಕೇರಿ, ಜು. ೨೨: ಬಲ್ಲಡಿಚಂಡ ರಚಿತ್ ಅಯ್ಯಪ್ಪ ಅವರು ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯ (ಬ್ಲೂಮಿಂಗ್ಟನ್) ಸ್ನಾತಕೋತ್ತರ ಶಾಲೆ ವತಿಯಿಂದ ನೀಡಲಾಗುವ ೨೦೨೬ರ “ಆisಣiಟಿguisheಜ Ph.ಆ. ಆisseಡಿಣಚಿಣioಟಿ ಂತಿಚಿಡಿಜ” ಗೌರವಕ್ಕೆ ಭಾಜನರಾಗಿದ್ದಾರೆ. ಇದು ಇಂಡಿಯಾನಾ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಅತ್ಯುನ್ನತ ಸಂಶೋಧನಾ ಗೌರವವಾಗಿದೆ. ಈ ಪ್ರಶಸ್ತಿಯೊಂದಿಗೆ ಅವರು ೨೦೨೬ರ “ಅouಟಿಛಿiಟ oಜಿ ಉಡಿಚಿಜuಚಿಣe Sಛಿhooಟs / Pಡಿoಕಿuesಣ ಆisಣiಟಿguisheಜ ಆisseಡಿಣಚಿಣioಟಿ” ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಅವರ ಪ್ರಬಂಧ “ಖಿoತಿಚಿಡಿಜs ಇmಠಿiಡಿiಛಿಚಿಟಟಥಿ ಗಿಚಿಟiಜಚಿಣeಜ ಒoಜeಟs oಜಿ ಅogಟಿo-Soಛಿiಚಿಟ ಃeಟieಜಿ ಆಥಿಟಿಚಿmiಛಿs” ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಭೌತಶಾಸ್ತç, ಜ್ಞಾನ ವಿಜ್ಞಾನ ಹಾಗೂ ನೈಸರ್ಗಿಕ ಭಾಷಾ ಸಂಸ್ಕರಣೆ ಕ್ಷೇತ್ರಗಳ ಪರಿಕಲ್ಪನೆಗಳನ್ನು ಒಗ್ಗೂಡಿಸಿ, ಸಾರ್ವಜನಿಕರ ನಡುವಿನ ಅಭಿಪ್ರಾಯಗಳ ವಿನಿಮಯವು ಹೇಗೆ ಸಾಮಾಜಿಕ ವಿದ್ಯಮಾನಗಳಿಗೆ ಕಾರಣವಾಗುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತದೆ. ಮೈಸೂರು ನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ರಚಿತ್ ಅವರು, ತಮ್ಮ ಪೂರ್ವ-ವಿಶ್ವವಿದ್ಯಾಲಯ ಶಿಕ್ಷಣವನ್ನು ಹೈದರಾಬಾದ್‌ನ ನಾರಾಯಣ ಕಾಲೇಜಿನಲ್ಲಿ ಪೂರ್ಣಗೊಳಿಸಿ, ನಂತರ ಬಿಟ್ಸ್ ಪಿಲಾನಿಯಿಂದ ಯಾಂತ್ರಿಕ ಇಂಜಿನಿಯರಿAಗ್‌ನಲ್ಲಿ (ಬಿ.ಇ ಹಾರ‍್ಸ್) ಹಾಗೂ ಭೌತಶಾಸ್ತç (ಎಂ.ಎಸ್.ಸಿ ಹಾರ‍್ಸ್) ಪಡೆದಿದ್ದಾರೆ. ಪ್ರಸ್ತುತ ಅವರು ಅಮೇರಿಕಾದ ಕ್ಯಾಲಿಫೋರ್ನಿಯಾದ ಇ-ಬೇ ಸಂಸ್ಥೆಯಲ್ಲಿ ‘ಅಪ್ಲೆöÊಡ್’ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಮೂಲತಃ ಬಿಟ್ಟಂಗಾಲದವರಾದ ಇದೀಗ ಮೈಸೂರಿನಲ್ಲಿ ನೆಲೆಸಿರುವ ಕುಶಿ ಎ.ಎಂ ಅವರ ಪುತ್ರ.