ಕೂಡಿಗೆ, ಜು. ೨೨ : ಕುಶಾಲನಗರ ತಾಲೂಕು ನೃತ್ಯ ಶಿಕ್ಷಕರ ಮತ್ತು ನೃತ್ಯಗಾರರ ಸಭೆಯನ್ನು ಕುಶಾಲನಗರ ದುರ್ಗಾ ವೀರಭೂಮಿ ರೆಸಾರ್ಟ್ ಸಭಾಂಗಣದಲ್ಲಿ ತಾಲೂಕು ನೃತ್ಯ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಸಭೆಯಲ್ಲಿ ಕುಶಾಲನಗರ ತಾಲೂಕಿನ ೧೨ ನೃತ್ಯ ಶಾಲೆಯ ಮಾಲೀಕರು ಹಾಗೂ ತರಬೇತುದಾರರು ಹಾಜರಿದ್ದರು. ಸಂಘದ ಅಧ್ಯಕ್ಷರಾಗಿ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಯೋಜಕ ಪ್ರದೀಪ್, ಉಪಾಧ್ಯಕ್ಷರಾಗಿ ಟೀಮ್ ಡ್ರೀಮ್ ಸ್ಟಾರ್ ನೃತ್ಯ ಸಂಯೋಜಕ ಶರಣ್, ಕಾರ್ಯದರ್ಶಿಯಾಗಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕ ಅಖ್ತರ್, ಸಂಚಾಲಕರಾಗಿ ತಾಂಡವA ಡ್ಯಾನ್ಸ್ ಸ್ಟುಡಿಯೋ ಚಂದನ್, ಖಜಾಂಚಿಯಾಗಿ ಕುಂದನ ನೃತ್ಯಾಲಯ ವಿನುತಾ, ಸಂಘದ ಸದಸ್ಯರಾಗಿ ಡಿ.ಸಿ ಡ್ಯಾನ್ಸ್ ಸ್ಟುಡಿಯೋ ನಿಸಾರ್, ನಟರಾಜ ಸಂಗೀತ ಕಲಾ ಕೇಂದ್ರದ ಸ್ಥಾಪಕರಾದ ವಿದ್ವಾನ್ ಶಂಕರಯ್ಯ, ನಾದಾಂತ ನಾಟ್ಯ ಮಯೂರಿ ನೃತ್ಯ ಸಂಯೋಜಕಿ ಮಂಜು ಭಾರ್ಗವಿ ಆಯ್ಕೆಯಾದರು. ಯೂನಿಕ್ ಶಾರದಾ ಕಲಾ ಕೇಂದ್ರದ ನೃತ್ಯ ಸಂಯೋಜಕರು, ನಾಟ್ಯನಿಕೇತನ ನೃತ್ಯ ಸಂಯೋಜಕರು, ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಸಂಯೋಜಕರು ಮತ್ತು ನರ್ತನಾಲಯ ನೃತ್ಯ ಸಂಯೋಜಕರು ಹಾಜರಿದ್ದರು.