ಕಡಂಗ, ಜು. ೨೨: ಕಡಂಗ ಫ್ರೆಂಡ್ಸ್ ಮತ್ತು ಕೆಪಿಎಲ್ ಆಶ್ರಯದಲ್ಲಿ ಆಗಸ್ಟ್ ೧ ಮತ್ತು ೨ರಂದು ಅರಮೇರಿ ೪ನೇ ಮೈಲ್‌ನಲ್ಲಿ ಗ್ರಾಮಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾವಳಿ ಹಾಗೂ ಕೆಪಿಎಲ್ ಕೆಸರುಗದ್ದೆ ಚಾಂಪಿಯನ್ಸ್ ಲೀಗ್ ೨೦೨೬ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಗಿದೆ. ವಾಲಿಬಾಲ್ ಪಂದ್ಯಾವಳಿಯಲ್ಲಿ ೪+೧ ಆಟಗಾರರ ತಂಡಗಳು ಭಾಗವಹಿಸಬಹುದಾಗಿದ್ದು, ತಾ. ೨೫ ನೋಂದಣಿಗೆ ಕೊನೆಯ ದಿನವಾಗಿದೆ. ಕ್ರಿಕೆಟ್ ಟೂರ್ನಿಯಲ್ಲಿ ೧೨ ತಂಡಗಳು ಮತ್ತು ೯೬ ಆಟಗಾರರು ಪಾಲ್ಗೊಳ್ಳಲಿದ್ದು, ಆಟಗಾರರ ಹರಾಜು ನಡೆಯಲಿದೆ.
ಪಂದ್ಯಾವಳಿಯ ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.