ಶನಿವಾರಸAತೆ, ಜು. ೨೧: ರೋಟರಿ ಕ್ಲಬ್ ಅಂತರರಾಷ್ಟಿçÃಯ ಸೇವಾ ಸಂಘಟನೆಯಾಗಿದ್ದು, ಇದೊಂದು ತಂಡದ ಕೆಲಸವಾಗಿ ಸದಾ ಯಶಸ್ಸುಗಳಿಸುತ್ತದೆ ಎಂದು ಮಾಜಿ ಜಿಲ್ಲಾ ಗವರ್ನರ್ ಹಾಗೂ ಪದಗ್ರಹಣ ಅಧಿಕಾರಿ ವಿಕ್ರಮದತ್ತ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಚಿನ್ನಳ್ಳಿ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆದ ರೋಟರಿ ಕ್ಲಬ್ ಶನಿವಾರಸಂತೆಯ ೨೦೨೬-೨೭ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ಪದಗ್ರಹಣ ಅಧಿಕಾರಿಯಾಗಿ ನೂತನ ಅಧ್ಯಕ್ಷ ಎ.ಸಿ. ಅಶೋಕ್ ಹಾಗೂ ಕಾರ್ಯದರ್ಶಿ ಸುಪ್ರೀತ್‌ಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸಮಯವನ್ನು ವ್ಯವಸ್ಥಿತವಾಗಿಟ್ಟುಕೊಳ್ಳಬೇಕು. ಸ್ವಾರ್ಥಕ್ಕಿಂತ ಸೇವೆಗೆ ಮೊದಲ ಆದ್ಯತೆ ನೀಡಿ ಕ್ರಿಯಾ ಯೋಜನೆ ಮೂಲಕ ಕೆಲಸ ಮಾಡಬೇಕು ಎಂದರು. ಮುಖ್ಯ ಅತಿಥಿ ಮಾಜಿ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ಜೀವನದ ಒಂದು ಭಾಗವಾಗಿ ರೋಟರಿ ಕ್ಲಬ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಶ್ಲಾಘನೀಯ. ನಮ್ಮ ಹಬ್ಬ ನಮ್ಮ ಸೇವೆ ಎಂಬAತೆ ಹಬ್ಬಗಳ ಮೂಲಕ ಸೇವೆ ಮಾಡುವುದು ಮಾನವೀಯತೆ. ಇಂದಿನ ಮಕ್ಕಳಿಗೆ ಅಜ್ಜ-ಅಜ್ಜಿ, ಅಪ್ಪ-ಅಮ್ಮನ ಮೌಲ್ಯ ತಿಳಿಸುವ ಕಾರ್ಯಕ್ರಮವನ್ನು ನಡೆಸುವುದು ರೋಟರಿಯ ಧ್ಯೇಯವಾಗಬೇಕು ಎಂದರು.
ಸಹಾಯಕ ಗವರ್ನರ್ ಹೆಚ್.ಎಸ್. ವಸಂತಕುಮಾರ್ ಮಾತನಾಡಿ, ರೋಟರಿ ಕ್ಲಬ್‌ನಲ್ಲಿ “ನಮ್ಮ ಹಬ್ಬ-ನಮ್ಮ ಸೇವೆ’’ ಹೊಸ ಯೋಜನೆಯಾಗಿದೆ.ಹಬ್ಬಗಳು ಸಮಾಜದಲ್ಲಿ ಸಂಸ್ಕೃತಿಯ ಮೌಲ್ಯವನ್ನು ಸಾರುತ್ತವೆ. ಪರಸ್ಪರ ಸಹಕಾರದಿಂದ ಸಂಘ ಬಲಿಷ್ಠವಾಗುತ್ತದೆ ಎಂದರು. ವಲಯ ಸೇನಾನಿ ಪಿ.ಎಸ್. ಮಧುಸೂದನ್ ಮಾತನಾಡಿದರು. ೨೪-೨೦೨೫ನೇ ಸಾಲಿನ ಅಧ್ಯಕ್ಷ ಯಶವಂತ್ ವಾರ್ಷಿಕ ಸಾಧನೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮಾಹಿತಿ ನೀಡಿ, ಪ್ಲಾಟಿನಂ ಅವಾರ್ಡ್ ಪಡೆದ ಬಗ್ಗೆ ತಿಳಿಸಿದರು. ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಎ.ಸಿ. ಅಶೋಕ್ ಮಾತನಾಡಿ, ರೋಟರಿ ಸೇವೆ ಅತ್ಯುತ್ತಮ ಜವಾಬ್ದಾರಿ. ಪರಿಸರ ಸಂರಕ್ಷಣೆ ಮೂಲಕ ಜಾಗೃತಿ ಮೂಡಿಸಲಾಗುವುದು. ಶನಿವಾರಸಂತೆ ರೋಟರಿ ಕ್ಲಬ್‌ಗೆ ಕಟ್ಟಡ ನಿರ್ಮಿಸುವ ಚಿಂತನೆ ಇದ್ದು, ಸ್ಥಳ ಗುರುತಿಸಿದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಶ್ವೇತಾ ವಸಂತ್, ಸಿಂಪಲ್ ಅಶೋಕ್, ಹಿತಾ ವರ್ಷನ್, ಲೈಲಾ ಯಶವಂತ್ ಅತಿಥಿ ಗಣ್ಯರನ್ನು ಪರಿಚಯಿಸಿದರು. ಮಾಜಿ ಕಾರ್ಯದರ್ಶಿ ಚಂದನ್ ವಾರ್ಷಿಕ ವರದಿ ಮಂಡಿಸಿದರು. ಎ.ಹೆಚ್. ಚಂದ್ರಕಾAತ್ ಹಾಗೂ ಟಿ.ಆರ್. ಪುರುಷೋತ್ತಮ್ ಮಾತನಾಡಿದರು. ಕೆ.ಪಿ. ಜಯಕುಮಾರ್ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಶನಿವಾರಸಂತೆ ರೋಟರಿ ಕ್ಲಬ್‌ಗೆ ೧೨ ಹೊಸ ಸದಸ್ಯರ ಸೇರ್ಪಡೆ ಮಾಡಲಾಯಿತು. ಈ ಹಿನ್ನೆಲೆ ಜಿಲ್ಲಾ ರೋಟರಿ ಸದಸ್ಯತ್ವ ವಿಸ್ತರಣಾ ಸಮಿತಿ ಅಧಿಕಾರಿ ಎಚ್.ಟಿ. ಅನಿಲ್, ಶನಿವಾರಸಂತೆ ರೋಟರಿ ನೂತನ ಅಧ್ಯಕ್ಷ ಅಶೋಕ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಮಾತನಾಡಿ, ರೋಟರಿ ವಲಯ ೬ ರಲ್ಲಿ ಕೇವಲ ೨೦ ದಿನದಲ್ಲಿ ೬೭ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ. ರೋಟರಿ ಸಂಸ್ಥೆ ಜನಮನ್ನಣೆ ಉಳಿಸಿಕೊಂಡು ಬರುತ್ತಿರುವುದಕ್ಕೆ ಈ ಹೊಸ ಸದಸ್ಯರ ಸೇರ್ಪಡೆ ಸಾಕ್ಷಿ ಎಂದರು. ರೋಟರಿ ಜಿಲ್ಲೆ ೩೧೮೧ ರಲ್ಲಿ ಈ ರೋಟರಿ ವರ್ಷದಲ್ಲಿ ೧೫ ಹೊಸ ಕ್ಲಬ್‌ಗಳ ಜೊತೆ ೯೨ ಕ್ಲಬ್‌ಗಳಿಂದ ೬೦೦ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಗುರಿ ಇದೆ ಎಂದೂ ಅನಿಲ್ ಹೇಳಿದರು.
ಸೋಮವಾರಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಸುಂದರ್ ಮತ್ತು ತಂಡದವರು, ಜಿಲ್ಲಾ ರೋಟರಿ ಸದಸ್ಯತ್ವ ವಿಸ್ತರಣಾ ಸಮಿತಿ ಅಧಿಕಾರಿ ಎಚ್.ಟಿ. ಅನಿಲ್, ಶನಿವಾರಸಂತೆ ರೋಟರಿ ಕ್ಲಬ್‌ನವರು ಮತ್ತು ಕುಟುಂಬದವರು ಹಾಗೂ ದೇವ್ಸ್ ರೆಸಾರ್ಟ್ನ ಮಾಲೀಕ ಎಸ್.ವಿ. ಜಗದೀಶ್ ಹಾಜರಿದ್ದರು. ಮಾಜಿ ಅಧ್ಯಕ್ಷ ಯಶವಂತ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಎಸ್.ಬಿ. ಸುಪ್ರೀತ್ ವಂದಿಸಿದರು.