ಐಗೂರು, ಜು. ೨೦: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗುಡಿ ಬೆಟ್ಟದ ತಪ್ಪಲಿನ ಕಿಬರಿ ಪೈಸಾರಿ ಪ್ರದೇಶದಲ್ಲಿ ಬಂಡೆಕಲ್ಲುಗಳು ಉರುಳಿ ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಸುಮಾರು ೧೫ ಕುಟುಂಬಗಳು ಈ ಭಾಗದಲ್ಲಿ ವಾಸಿಸುತ್ತಿದ್ದು, ಪೈಸಾರಿ ರಸ್ತೆಯ ಮೇಲ್ಭಾಗದ ಬೆಟ್ಟದಲ್ಲಿ ಹಲವು ದಶಕಗಳಿಂದ ಭಾರಿ ಗಾತ್ರದ ಬಂಡೆಯೊAದು ಅಪಾಯಕಾರಿ ಸ್ಥಿತಿಯಲ್ಲಿದೆ. ಇದೇ ಬಂಡೆಯ ಸಮೀಪದಲ್ಲಿದ್ದ ಸಾಧಾರಣ ಗಾತ್ರದ ಎರಡು ಬಂಡೆಗಳು ರಸ್ತೆಗೆ ಉರುಳಿ ಬಿದ್ದು ಕೆಲಕಾಲ ಸಂಚಾರ ಸ್ಥಗಿತಗೊಂಡಿತು.
ನಿರಂತರ ಮಳೆಯಿಂದ ಮಣ್ಣು ಸಡಿಲಗೊಂಡು ಮೇಲ್ಭಾಗದ ಬೆಟ್ಟದಲ್ಲಿರುವ ಬಂಡೆಗಳು ಉರುಳಬಹುದು ಎಂದು ಲೋಕೇಶ್ ಮತ್ತು ಬಾಬು ಕಳವಳ ವ್ಯಕ್ತಪಡಿಸಿದ್ದಾರೆ.