ನವದೆಹಲಿ, ಜು.೨೦: ನೀಟ್ ಪರೀಕ್ಷೆ ಅಕ್ರಮವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನವದೆಹಲಿಯಲ್ಲಿ ಇಂದು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ತೆರಳಿದಾಗ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದಲ್ಲಿ ಪೊಲೀಸ್ ಬಂದೋಬಸ್ತ್ ತೀವ್ರಗೊಂಡಿದ್ದು, ಸಂಸತ್ ಗೇಟ್‌ಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಸಂಸದೆ ಡಿಂಪಲ್ ಯಾದವ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನವದೆಹಲಿಯ ಜಂತರ್ ಮಂತರ್‌ನಲ್ಲಿ ಯುವಜನರ ಆಕ್ರೋಶ ಸ್ಫೋಟಗೊಂಡಿತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಲಾಗಿದೆ. ಪರಿಣಾಮ ದೆಹಲಿಯ ಬೀದಿಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆ ಸೋನಂ ವಾಂಗ್ ಚುಕ್ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಸಿಜೆಪಿ ಸಂಸತ್ ಚಲೋ ಕರೆ ಕೊಟ್ಟ್ಟಿತ್ತು.

ಈ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಜಮಾವಣೆಗೊಂಡಿದ್ದರು. ಜಂತರ್ ಮಂತರ್‌ನಿAದ ನೇರವಾಗಿ ಅವರೆಲ್ಲಾ ಸಂಸತ್‌ನತ್ತ ಮುತ್ತಿಗೆಗೆ ಹೊರಟಾಗ ಪೊಲೀಸರು ಲಾಠಿಪ್ರಹಾರ ನಡೆಸಿ ಅಶ್ರುವಾಯು ಬಳಸಿದರು. ಭದ್ರತಾ ಹಿನ್ನೆಲೆಯಲ್ಲಿ ಸಂಸತ್ ಭವನದ ಎಲ್ಲಾ ಗೇಟ್‌ಗಳನ್ನು ಮುಚ್ಚಲಾಯಿತು.

ಮತ್ತೊಂದು ಕಡೆಯಲ್ಲಿ ಸಿಜೆಪಿ ನಿಯೋಗದೊಂದಿಗೆ ಸಚಿವ ಜೆಪಿ ನಡ್ಡಾ ಮಾತುಕತೆ ನಡೆಸಿದ್ದಾರೆ. ಸಿಜೆಪಿ ನಾಯಕ ಅಶುತೋಷ್ ರಾಂಕಾ ಮತ್ತು ಪಕ್ಷದ ವಕ್ತಾರರು ನಿಯೋಗದಲ್ಲಿದ್ದರು. ಬೇಡಿಕೆಗಳ ಕುರಿತು ಬಿಜೆಪಿ ಪಕ್ಷದ ನಾಯಕತ್ವದೊಂದಿಗೆ ಸಮಾಲೋಚಿಸಲು ನಡ್ಡಾ ಸಮಯ ಕೋರಿರುವುದಾಗಿ ಅವರು ಹೇಳಿದರು.

ಈ ವೇಳೆ ಸಿಜೆಪಿ ನಾಯಕರು ಸರ್ಕಾರದ ಮುಂದೆ ಪ್ರಮುಖವಾದ ಬೇಡಿಕೆಗಳನ್ನು ಇಟ್ಟಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು. ಶಿಕ್ಷಣ ಮತ್ತು ಉದ್ಯೋಗ ನೀತಿಯಲ್ಲಿ ಬದಲಾವಣೆ ಆಗಬೇಕು. ನ್ಯಾಯಾಂಗ ಮತ್ತು ಚುನಾವಣಾ ನೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ. ಸಂಸತ್ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ ೫೫ ರಷ್ಟು ಮೀಸಲಾತಿ ನೀಡಬೇಕು. ಉಪÀವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ ಚುಕ್ ಅವರನ್ನು ಆಸ್ಪತ್ರೆಯಿಂದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಿಡುಗಡೆ ಮಾಡಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಸಿಜೆಪಿ ಪ್ರತಿಭಟನೆಯಲ್ಲಿ ಎಸ್ಪಿ, ಆಪ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗಿಯಾಗಿದ್ದರು.

ಕಾಕ್ರೋಚ್ ಪಾರ್ಟಿ ಜೊತೆ ಸರ್ಕಾರ ಮಾತುಕತೆಯ ಹಿನ್ನೆಲೆಯಲ್ಲಿ ಅಭಿಜಿತ್ ದೀಪ್ಕೆ ಎರಡು ದಿನಗಳ ಬಳಿಕ ಉಪವಾಸ ನಿಲ್ಲಿಸಿದ್ದಾರೆ. ಅಲ್ಲದೆ, ಅವರ ಜೊತೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದ ವಿದ್ಯಾರ್ಥಿಗಳು ತಮ್ಮ ಉಪÀವಾಸವನ್ನು ಅಂತ್ಯಗೊಳಿಸಿದ್ದಾರೆ.

ಭಾರೀ ಭದ್ರತಾ ನಿಯೋಜನೆಯ ನಡುವೆ ಕಾಕ್ರೋಚ್ ಜನತಾ ಪಕ್ಷವು ಸೋಮವಾರ ದೆಹಲಿಯ ಜಂತರ್ ಮಂತರ್ನಲ್ಲಿ ತನ್ನ ‘ಚಲೋ ಸಂಸದ್’ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿತು. ಕಾರ್ಯಕರ್ತ ಸೋನಮ್ ವಾಂಗ್ಚುಕ್ ಸಫ್ದರ್ಜಂಗ್ ಆಸ್ಪತ್ರೆಯಲ್ಲಿರುವ ನಡುವೆ, ಆಜಾದ್ ಸಮಾಜ ಪಕ್ಷದ (ಕಾನ್ಶಿರಾಮ್) ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಕರ್ನಾಟಕದ ನಟರಾದ ಪ್ರಕಾಶ್ ರಾಜ್ ಮತ್ತು ಹಿಂದಿ ನಟಿ ಶಬಾನಾ ಅಜ್ಮಿ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದರು.

ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆಯನ್ನು ಪ್ರಾರಂಭಿಸುತ್ತಿದ್ದAತೆ, ಕೆಲವರು ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಸಲಾಗಿದೆ, ಇದರಿಂದ ಹಲವು ಪೊಲೀಸರು ಗಾಯಗೊಂಡರು. ನವದೆಹಲಿಯಾದ್ಯಂತ ಸೋಮವಾರ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಂಡಿ ಹೌಸ್, ಪಟೇಲ್ ಚೌಕ್, ಜನಪಥ್, ಜಂತರ್ ಮಂತರ್, ಪಾರ್ಲಿಮೆಂಟ್ ಸ್ಟ್ರೀಟ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಅಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳು ಮತ್ತು ನಿಷೇಧಾಜ್ಞೆಗಳು ಜಾರಿಯಲ್ಲಿದ್ದರೂ ಪ್ರತಿಭಟನಾ ಗುಂಪುಗಳು ಸೇರಲು ಪ್ರಯತ್ನಿಸಿದವು ಎಂದು ಅವರು ಹೇಳಿದರು.

ಈ ನಡುವೆ ಇಂದು ಪ್ರಾರಂಭಗೊAಡ ಸಂಸತ್‌ನ ಮುಂಗಾರು ಅಧಿವೇಶನ ಸಮರ್ಪಕವಾಗಿ ನಡೆಯದೆ ಹಲವು ಬಾರಿ ಮುಂದೂಡಲ್ಪಟ್ಟಿತು. ವಿರೋಧ ಪಕ್ಷವಾದ ಇಂಡಿಯಾ ಕೂಟದ ಸದಸ್ಯರು ನೀಟ್ ಹಗರಣ ಮತ್ತು ಅಯೋಧ್ಯೆಯಲ್ಲಿನ ಹುಂಡಿ ಕಳವು ಹಗರಣಗಳ ಚರ್ಚೆಗೆ ಆಗ್ರಹಿಸಿದಾಗ ಅವಕಾಶ ನೀಡದ ಹಿನ್ನೆಲೆ ಗದ್ದಲವೆಬ್ಬಿಸಿದುದರಿಂದ ಅಧಿವೇಶನ ಮುಂದೂಡಲ್ಪಟ್ಟಿತು.