(ಇಸ್ಮಾಯಿಲ್ ಕಂಡಕರೆ)
ಅಮೆರಿಕ, ಜು. ೨೦: ಯು.ಎಸ್.ಎ ನ್ಯೂಯಾರ್ಕ್ನ ನ್ಯೂಜರ್ಸಿಯಲ್ಲಿ ನಡೆದ ೨೦೨೬ರ ಫುಟ್ಬಾಲ್ ವಿಶ್ವಕಪ್ನ ಅಂತಿಮ ಪಂದ್ಯದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು ೧-೦ ಗೋಲುಗಳಿಂದ ಮಣಿಸಿ ೨ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಸತತವಾಗಿ ೨ನೇ ಬಾರಿಗೆ ಕಿರೀಟ ಪಡೆಯುವ ಹುಮ್ಮಸಿನಲ್ಲಿದ್ದ ಅರ್ಜೆಂಟೀನಾದ ಕನಸನ್ನು ಭಗ್ನವಾಗಿಸಿದ ಸ್ಪೇನ್, ಪಂದ್ಯದ ಒಟ್ಟು ಸಮಯದ ಶೇ.೬೮ ಭಾಗ ತನ್ನಲ್ಲೇ ಚೆಂಡನ್ನು ಇಟ್ಟುಕೊಂಡು ಉತ್ತಮ ಆಟವನ್ನು ಪ್ರದರ್ಶಿಸಿತು.
ನಿಗದಿತ ೯೦ ನಿಮಿಷದಲ್ಲಿ ೦-೦ ಸಮಬಲವಾಗಿದ್ದ ಕಾರಣ ಹೆಚ್ಚುವರಿ ೩೦ ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಹೆಚ್ಚವರಿ ಸಮಯದ ದ್ವಿತಿಯಾರ್ಧದಲ್ಲಿ ಸ್ಪೇನ್ ಪರ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲಿನಿಂದ ೧೬ ವರ್ಷಗಳ ಬಳಿಕ ಫಿಫಾ ವರ್ಲ್ಡ್ ಕಪ್ ಪ್ರಶಸ್ತಿಯನ್ನು ಸ್ಪೇನ್ ಮುಡಿಗೇರಿಸಿಕೊಂಡಿತು. ೨೦೧೦ರಲ್ಲಿ ನೆದರ್ಲ್ಯಾಂಡ್ ವಿರುದ್ಧ ಹೆಚ್ಚವರಿ ಸಮಯದಲ್ಲಿಯೇ ಗೋಲು ಬಾರಿಸಿ ಸ್ಪೇನ್ ತನ್ನ ಚೊಚ್ಚಲ ಪ್ರಶಸ್ತಿ ಪಡೆದಿತ್ತು.
ಎರಡನೇ ಬಾರಿ ಫಿಫಾ ವರ್ಲ್ಡ್ಕಪ್ ಫೈನಲ್ಗೆ ಲಗ್ಗೆಯಿಟ್ಟಿದ್ದ ಸ್ಪೇನ್ ಹಾಗೂ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಫೈನಲ್ ಕಾಳಗಕ್ಕೆ ಇಳಿದಿದ್ದ ಅರ್ಜೆಂಟೀನಾ ತಂಡಗಳ ನಡುವೆ ನ್ಯೂಯಾರ್ಕ್ನ ನ್ಯೂಜರ್ಸಿಯ ಕ್ರೀಡಾಂಗಣದಲ್ಲಿ ತೀವ್ರ ಹಣಾಹಾಣಿ ನಡೆಯಬಹುದೆಂದು ಇಡೀ ಫುಟ್ಬಾಲ್ ಜಗತ್ತು ನಿರೀಕ್ಷಿಸಿತ್ತು. ಆದರೆ ಫೈನಲ್ ಪಂದ್ಯದ ಸಂಪೂರ್ಣ ನಿಯಂತ್ರಣ ಸ್ಪೇನ್ ತಂಡದ ಆಟಗಾರರಲ್ಲಿತ್ತು.
ಆರಂಭದಿAದಲೂ ಅರ್ಜೆಂಟೀನಾ ತಂಡದ ಆಟಗಾರರಿಗೆ ಯಾವುದೇ ರೀತಿಯಲ್ಲೂ ಬಾಲ್ ಬಿಟ್ಟುಕೊಡದೆ ತನ್ನ ಸಾಂಪ್ರದಾಯಕ ಶೈಲಿಯ ‘ಟಿಕ್ಕಿ-ಟಾಕಾ ಪೊಸೆಶನ್’ ಫುಟ್ಬಾಲ್ ಆಡುವ ಮೂಲಕ ಅರ್ಜೆಂಟೀನಾ ಆಟಗಾರರನ್ನು ಫೈನಲ್ ಪಂದ್ಯದಲ್ಲಿ ಸ್ಪೇನ್ ನಿಬ್ಬೆರಗಾಗಿಸಿತು. ಬಾಲ್ ಪೊಸೆಶನ್ ಇಟ್ಟುಕೊಳ್ಳುವ ಮೂಲಕ ಸ್ಪೇನ್ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾಗಿತು. ಆದರೆ ಗೋಲು ಗಳಿಸುವ ಯತ್ನವನ್ನು ಅರ್ಜೆಂಟೀನಾ ತಂಡದ ಗೋಲ್ಕೀಪರ್ ಎಮಿಲಿಯಾನೋ ಮಾರ್ಟಿನೆಸ್ ಕೊನೆಯ ಹಂತದವರೆಗೆ ವಿಫಲಗೊಳಿಸಿದ್ದರು.
ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರರಿಂದ ಬಾಲ್ ಪಡೆಯಲು ಹೆಣಗಾಡುತ್ತಿದ್ದ ಅರ್ಜೆಂಟೀನಾ ಆಟಗಾರರು ಪದೇ ಪದೇ ಫೌಲ್ ಮಾಡುವತ್ತ ಸಾಗಿದರು. ಸ್ಪೇನ್ ತಂಡದ ಪೊಸೆಶನ್ ಆಟದ ಮುಂದೆ ಸಂಪೂರ್ಣವಾಗಿ ಮಂಕಾಗಿದ್ದ ಅರ್ಜೆಂಟೀನಾ ತಂಡವು ಡಿಫೆನ್ಸಿವ್ ಗೇಮ್ನತ್ತ ಮುಂದಾಗಿತು. ಪಂದ್ಯದ ನಿಗದಿತ ಸಮಯದ ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ತಂಡದ ಮಿಡ್ಫೀಲ್ಡರ್ ಎನ್ಜೋ ಫರ್ನಾಂಡೆಸ್ ರೆಡ್ ಕಾರ್ಡ್ ಪಡೆದುಕೊಂಡಿದ್ದು ಅರ್ಜೆಂಟೀನಾ ತಂಡಕ್ಕೆ ಮತ್ತೊಂದು ಆಘಾತ ತಂದಿತು. ಬಾಲ್ ಸಿಗದೇ ಮೈದಾನದಲ್ಲಿ ಪರದಾಡುತ್ತಿದ್ದ ಅರ್ಜೆಂಟೀನಾ ತಂಡದ ಆಟಗಾರರು ಹತ್ತು ಪ್ಲೇಯರ್ಸ್ನೊಂದಿಗೆ ಆಟ ಆಡಬೇಕಾದ ಅನಿವಾರ್ಯತೆ ಎದುರಾಯಿತು.
ಹೆಚ್ಚುವರಿ ಸಮಯದಲ್ಲಿ ಗೋಲ್
ಫೈನಲ್ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಹತ್ತು ಆಟಗಾರರೊಂದಿಗೆ ಕಣಕ್ಕಿಳಿದಿದ್ದ ಅರ್ಜೆಂಟೀನಾ ತಂಡವು ಹೆಚ್ಚುವರಿ ಸಮಯದಲ್ಲಿ ಮುನ್ನಡೆ ಆಟಗಾರ ಅಲ್ವಾರೆಸ್ ಅವರನ್ನು ಬದಲಾಯಿಸಿ ಡಿಫೆಂಡರ್ ಮಾರ್ಕೊ ಸೆನೆಸಿ ಅವರನ್ನು ಕಣಕ್ಕಿಳಿಸಿ ಮತ್ತಷ್ಟು ಡಿಫೆನ್ಸಿವ್ ಗೇಮ್ನತ್ತ ಸಾಗುವದರ ಮೂಲಕ ಪಂದ್ಯವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಗೆಲ್ಲಬಹುದೆಂಬ ಲೆಕ್ಕಾಚಾರ ಮಾಡಿತ್ತು. ಆದರೆ ಹೆಚ್ಚುವರಿ ಸಮಯದಲ್ಲಿ ಕೂಡ ಸ್ಪೇನ್ ತಂಡದ ಆಟಗಾರರ ಪೊಸೆಶನ್ ಫುಟ್ಬಾಲ್ ಮುಂದೆ ಅರ್ಜೆಂಟೀನಾ ತಂಡದ ಆಟಗಾರರಿಗೆ ಬಾಲ್ ಮುಟ್ಟಲೂ ಕೂಡ ಸಿಗಲಿಲ್ಲ.
ಹೆಚ್ಚುವರಿ ಸಮಯದ ಮೊದಲಾರ್ಧದಲ್ಲಿ ಕೂಡ ಅರ್ಜೆಂಟೀನಾ ಮತ್ತು ಸ್ಪೇನ್ ತಂಡ ಗೋಲು ಬಾರಿಸಲು ವಿಫಲವಾಗಿದ್ದು, ದ್ವಿತಿಯಾರ್ಧದಲ್ಲಿ ೧೦೬ನೇ ನಿಮಿಷದಲ್ಲಿ ಸಬ್ಸಿ÷್ಟಟ್ಯೂಟ್ ಆಟಗಾರ ಟೊರೆಸ್ ಅವರು ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಟೊರೆಸ್ ಅವರಿಗೆ ಗೋಲು ಬಾರಿಸಲು ಹೆಡ್ಡರ್ ಮೂಲಕ ಅಸಿಸ್ಟ್ ನೀಡಿದ್ದು ಕೂಡ ಮತ್ತೊಬ್ಬ ಸಬ್ಸಿ÷್ಟಟ್ಯೂಟ್ ಆಟಗಾರ ವಿಲಿಯಮ್ಸ್ ಜೂನಿಯರ್ ಎಂಬುದು ಫೈನಲ್ ಪಂದ್ಯದ ಮತ್ತೊಂದು ವಿಶೇಷ.
ಸ್ಪೇನ್ ಆಟಗಾರರ ಮುಂದೆ ನಡೆಯದ ಮೆಸ್ಸಿ ಮ್ಯಾಜಿಕ್
ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ನಾಯಕ ಲಿಯೊನಾಲ್ ಮೆಸ್ಸಿ ಅವರ ಮ್ಯಾಜಿಕ್ ನಡೆಯಬಹುದೆಂದು ಕೋಟ್ಯಂತರ ಅಭಿಮಾನಿಗಳು ನೀರಿಕ್ಷಿಸಿದ್ದರು. ಎಂಟು ಗೋಲ್ ಮತ್ತು ನಾಲ್ಕು ಅಸಿಸ್ಟ್ ಮೂಲಕ ಮೆಸ್ಸಿ ಉತ್ತಮ ಲಯದಲ್ಲಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಮೆಸ್ಸಿ ಮ್ಯಾಜಿಕ್ ನಡೆಯದೇ ಅರ್ಜೇಂಟೀನಾ ತಂಡಕ್ಕೆ ಆಘಾತ ಉಂಟಾಯಿತು. ಸ್ಪೇನ್ ತಂಡದ ನಾಯಕ ರೊಡ್ರಿ ಮಿಡ್ ಫೀಲ್ಡ್ನಲ್ಲಿ ಇಡೀ ಪಂದ್ಯವನ್ನು ನಿಯಂತ್ರಿಸಿ ಮೆಸ್ಸಿ ಅವರಿಗೆ ಬಾಲ್ ಸಿಗದ ರೀತಿ ನೋಡಿಕೊಂಡರು.
ಶೇಕಡ ೬೮ ರಷ್ಟು ಬಾಲ್ ಪೊಸೆಶನ್
ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಮೈದಾನದಲ್ಲಿ ಮಾತ್ರವಲ್ಲ, ಅಂಕಿ ಅಂಶಗಳಲ್ಲೂ ಅರ್ಜೆಂಟೀನಾ ತಂಡವನ್ನು ಸಂಪೂರ್ಣವಾಗಿ ಹಿಂದಿಕ್ಕಿತು. ತನ್ನ ಸಾಂಪ್ರದಾಯಿಕ ಟಿಕ್ಕಿ-ಟಾಕಾ ಶೈಲಿಯ ಆಟದಿಂದ ಎದುರಾಳಿಗಳಿಗೆ ಅವಕಾಶವನ್ನೇ ನೀಡಲಿಲ್ಲ.
ಸ್ಪೇನ್ ತಂಡವು ೨೦ ಶಾಟ್ಸ್ ಬಾರಿಸಿದರೆ ಅರ್ಜೆಂಟೀನಾ ತಂಡವು ಕೇವಲ ೩ ಶಾಟ್ಸ್ ಮಾತ್ರ ಹೊಡೆಯಿತು. ಶಾಟ್ ಆನ್ ಟಾರ್ಗೆಟ್ನತ್ತ ಸ್ಪೇನ್ ತಂಡವು ೧೧ ಬಾರಿ ಪ್ರಯತ್ನ ನಡೆಸಿತು. ೧೨೦ ನಿಮಿಷ ಆಡಿದರು ಕೂಡ ಅರ್ಜೆಂಟೀನಾ ಒಂದೇ ಒಂದು ಶಾಟ್ ಆನ್ ಟಾರ್ಗೆಟ್ ಮಾಡಲಿಲ್ಲ, ಇದು ಅರ್ಜೆಂಟೀನಾ ತಂಡದ ಇತಿಹಾಸದಲ್ಲೇ ಮೊದಲು. ಸ್ಪೇನ್ ತಂಡವು ಪಂದ್ಯದಲ್ಲಿ ಶೇಕಡ ೬೮ ರಷ್ಟು ಬಾಲ್ ಹಿಡಿತ ಸಾಧಿಸಿದರೆ, ಅರ್ಜೆಂಟೀನಾ ತಂಡವು ಕೇವಲ ಶೇಕಡ ೩೨ ರಷ್ಟು ಮಾತ್ರ ಬಾಲ್ ಪೊಸೆಶನ್ ಇಟ್ಟುಕೊಂಡಿತ್ತು. ಸ್ಪೇನ್ ತಂಡವು ಒಟ್ಟು ೮೦೩ ಪಾಸಸ್, ಅರ್ಜೆಂಟೀನಾ ೪೪೫ ಪಾಸ್ ಮಾತ್ರ ಮಾಡಿತು. ಸ್ಪೇನ್ ಆಟಗಾರರು ಒಂದೇ ಒಂದು ಯೆಲ್ಲೋ ಮತ್ತು ರೆಡ್ ಕಾರ್ಡ್ ಪಡೆಯದೇ ಎಚ್ಚರಿಕೆಯಿಂದ ಆಡಿದರು. ಆದರೆ ಅರ್ಜೆಂಟೀನಾ ತಂಡದ ಆಟಗಾರರು ಐದು ಯೆಲ್ಲೋ ಕಾರ್ಡ್ ಮತ್ತು ಒಂದು ರೆಡ್ ಕಾರ್ಡ್ ಪಡೆದರು.