ಕೂಡಿಗೆ, ಜು. ೧೯: ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್‌ನ ಕುಶಾಲನಗರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕುಶಾಲನಗರ ತಾಲೂಕು ಕಾರ್ಯಾಧ್ಯಕ್ಷರಾಗಿ ಕೂಡ್ಲೂರು ನವ ಗ್ರಾಮದ ಮಂಜು, ತಾಲೂಕು ಅಧ್ಯಕ್ಷರಾಗಿ ಕೂಡಿಗೆಯ ಕೆ.ಎಂ. ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೂಡುಮಂಗಳೂರಿನ ಧರ್ಮೇಶ್ ವಿ.ಎಸ್. ಮತ್ತು ಖಜಾಂಚಿಯಾಗಿ ರಾಜನಬಿಳಗುಲಿ ಗ್ರಾಮದ ಪ್ರಕಾಶಾಚಾರಿ ಅವರನ್ನು ನೇಮಕಗೊಳಿಸಲಾಗಿದೆ.

ಕೊಡಗು ಜಿಲ್ಲಾ ಐ.ಎನ್.ಟಿ.ಯು.ಸಿ ಅಧ್ಯಕ್ಷ ಬಿ.ಡಿ. ಅಣ್ಣಯ್ಯ ಅವರ ಸಲಹೆ ಮೇರೆಗೆ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೆಡರೇಶನ್ ರಾಜ್ಯಾಧ್ಯಕ್ಷ ಹೆಚ್.ಸಿ. ಶಾಮಣ್ಣ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಯಲ್ಲಪ್ಪ ಅವರು ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿರುವುದಾಗಿ ತಾಲೂಕು ಕಾರ್ಯಾಧ್ಯಕ್ಷ ಮಂಜು ತಿಳಿಸಿದರು.

ಈಗಾಗಲೇ ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು, ಪ್ರಾರಂಭಿಕ ಹಂತವಾಗಿ ಸುಮಾರು ೪೦ಕ್ಕೂ ಅಧಿಕ ಮಂದಿಯನ್ನು ಫೆಡರೇಷನ್‌ಗೆ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದು ತಾಲೂಕು ಅಧ್ಯಕ್ಷ ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಖಜಾಂಚಿ ಪ್ರಕಾಶಾಚಾರಿ ತಿಳಿಸಿದ್ದಾರೆ.