ಮಡಿಕೇರಿ, ಜು. ೧೯: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ ವತಿಯಿಂದ ಪ್ರತಿ ವರ್ಷದಂತೆ ೨೦೨೫-೨೬ನೇ ಸಾಲಿನಲ್ಲಿ ೧೦೦ ರಷ್ಟು ಫಲಿತಾಂಶ ಬರಲು ಕಾರಣಕರ್ತರಾದ ಹಾಕತ್ತೂರು ಪ್ರೌಢ ಶಾಲೆಯ ಶಿಕ್ಷಕರಿಗೆ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ತಾಲೂಕು ಕಗ್ಗೋಡು ಗ್ರಾಮದ ದಾನಿಗಳು ಹಾಗೂ ¸ಮಾಜ ಸೇವಕಿ ದಂಬೆಕೋಡಿ ಕವನ್ ಭೀಷ್ಮ ನೆರÀವೇರಿಸಿ ಮಾತನಾಡಿ; ಹಾಕತ್ತೂರು ಪ್ರೌಢ ಶಾಲೆಯಾ ನಿರಂತರವಾಗಿ ೭ ವರ್ಷದಿಂದ ೧೦೦ ರಷ್ಟು ಫಲಿತಾಂಶ ಪಡೆಯುತ್ತಿರುವುದು, ಜೊತೆಗೆ ಮಕ್ಕಳು ಸಹ ಒಳ್ಳೆಯ ಅಂಕವನ್ನು ಪಡೆಯುತ್ತಿರುವುದು ಸಂತೋಷದ ವಿಷಯ. ಈ ಶಾಲೆಯ ವಾತಾವರಣವು ಚೆನ್ನಾಗಿದೆ ಮಕ್ಕಳು ೧೦ನೇ ತರಗತಿಯಲ್ಲಿ ಉತ್ತಮ ಅಂಕವನ್ನು ಪಡೆಯಬೇಕು. ಉತ್ತಮ ಅಂಕ ಪಡೆದರೆ ಮಾತ್ರ ಮುಂದೆ ಓದಲು ಅನುಕೂಲವಾಗುತ್ತದೆ.

ಜೊತೆಗೆ ೯ ನೇ ತರಗತಿ ಮಕ್ಕಳು ಸಹ ಚೆನ್ನಾಗಿ ಓದಬೇಕು. ಶಿಕ್ಷಕರು ಬೋಧನೆ ಮಾಡಿರುವ ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು; ಆಗ ಮಾತ್ರ ಮುಂದೆ ಬರಲು ಸಾಧ್ಯ ಆದುದರಿಂದ ಹೆಚ್ಚು ಅಂಕ ಪಡೆಯಲು ಮತ್ತು ಶೇಕಡ ೧೦೦ ರಷ್ಟು ಫಲಿತಾಂಶ ಬರಲು ಸಾಧ್ಯ, ನಂತರ ಶೇ. ೧೦೦ ರಷ್ಟು ಫಲಿತಾಂಶ ಬರಲು ಕಾರಣಕರ್ತರಾದ ಶಿಕ್ಷಕರಿಗೂ ಹಾಗೂ ಮಕ್ಕಳಿಗೆ ಶುಭಾಶಯ ಹೇಳಿದರು.

ಮುಖ್ಯ ಭಾಷಣಕಾರರಾದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷÀ ಟಿ.ಪಿ ರಮೇಶ್ ಮಾತನಾಡಿ; ಈ ಒಂದು ಕಾರ್ಯಕ್ರಮ ಗುರುಗಳಿಗೂ ಹಾಗೂ ಮಕ್ಕಳಿಗೂ ಇರುವ ಸಂಬAಧ ಅವರ ಪರಿಶ್ರಮವನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ. ಮಕ್ಕಳು ೧೦ನೇ ತರಗತಿಯಲ್ಲಿ ಓದಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆ ಕಡೆ ಹೋದಾಗ, ಓದಿದ ನಂತರ ಕೆಲಸಕ್ಕೆ ಸೇರಿ ಒಂದು ದಿನ ಓದಿದ ಶಾಲೆಗೆ ಹೋಗುವಾಗ ನಿಮ್ಮ ಹಳೆಯ ನೆನಪುಗಳು ಕಾಡುತ್ತವೆ. ನೀವು ಓದಿದ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು.

ಮತ್ತೋರ್ವ ಅತಿಥಿ ಸಹಾಯಕ ಉಪ ನಿರೀಕ್ಷಕ ದಿನೇಶ್ ಕುಮಾರ್ ಮಾತನಾಡಿ,ಮಕ್ಕಳು ಓದುವ ಸಂದರ್ಭದಲ್ಲಿ ಯಾವುದೇ ಮಾದಕ ವಸ್ತುಗಳನ್ನು ಸೇವಿಸಬಾರದು. ಚೆನ್ನಾಗಿ ಓದಿ ಸರಕಾರಿ ಉದ್ಯೋಗ ಪಡೆದು ತಂದೆ ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರನ್ನು ತರಬೇಕು. ತಂದೆ ತಾಯಿಯವರು ಸಹ ಮಕ್ಕಳಿಗೆ (೧೮ ವರ್ಷ) ಮಕ್ಕಳಿಗೆ ವಾಹನ ಓಡಿಸಲು ಅವಕಾಶ ಕೊಡಬಾರದು. ಸ್ಕೂಟರ್ ಮತ್ತು ಬೈಕ್‌ಗಳನ್ನು ಓಡಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಆಗುವ ಸಂಭವ ಇರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ದಿವಾಕರ್ ಮಾತನಾಡಿ, ನಮ್ಮ ಸಂಫಟನೆಯು ವಿಶ್ವರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶವನ್ನು ಅಳವಡಿಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ೧೦-೧೨ ವರ್ಷಗಳಿಂದ ಸರಕಾರಿ ಪ್ರೌಢಶಾಲೆಯಲ್ಲಿ ೧೦೦ ರಷ್ಟು ಫಲಿತಾಂಶ ಪಡೆದ ಶಾಲೆಗಳಿಗೆ ತೆರಳಿ ಅಲ್ಲಿಯ ಶಿಕ್ಷಕರಿಗೆ ಹಾಗೂ ಆ ಶಾಲೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ, ಮಾಡಿಕೊಂಡು ಬರುತ್ತಿದ್ದೇವೆ ಎಂದರು.

ದೇಶದಲ್ಲಿ ಸರಕಾರಿ ಶಾಲೆಗಳು ಸುಮಾರು ೪೦೦೦ ದಿಂದ ೫೦೦೦ರಷ್ಟು ಮುಚ್ಚಿಹೋಗಿವೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರ ಮಂತ್ರಿಗಳ ಮಕ್ಕಳು, ಶಾಸಕರ ಮಕ್ಕಳು ಹಾಗೂ ಉನ್ನತ ಅಧಿಕಾರಿಗಳ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಹೇಳಿದರು.