ಚAದಿರ., ಸೋಮ, ಚಂದ್ರ, ಶಶಿ, ಇಂದು, ತಾರಾನಾಥ, ನಿಶಾಚರ, ತಿಂಗಳು, ಬೆಳದಿಂಗಳು., ಎಂದು ಕರೆಸಿಕೊಳ್ಳುವ., ಬಾನೆತ್ತರದಲ್ಲಿ ಬೆಳಗುತ್ತಾ ಲೋಕಕ್ಕೆ ತಂಪಾದ ಬೆಳಕು ನೀಡುವ ಚಂದ್ರನನ್ನು ಯಾರಿಗೆ ಇಷ್ಟವಿಲ್ಲ ಹೇಳಿ..? ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಚಂದ್ರನಲ್ಲಿ ಹಲವು ವಿಶೇಷತೆಗಳಿವೆ. ಚಂದಮಾಮನ ಕತೆಗಳು ಮಕ್ಕಳಿಗೆ ಬಲು ಇಷ್ಟ., ಊಟ ಮಾಡದೇ ಹಠಮಾಡುವ ಪುಟ್ಟ ಮಕ್ಕಳಿಗೆ ಅಮ್ಮಂದಿರು ಚಂದಮಾಮನನ್ನು ತೋರಿಸುತ್ತಾ ಊಟ ಮಾಡಿಸುವ ಕಾಲ ಒಂದಿತ್ತು., ಇದೀಗ ಆ ಜಾಗವನ್ನು ಮೊಬೈಲ್ ಆಕ್ರಮಿಸಿಕೊಂಡಿದೆ. ಪ್ರೇಮಿಗಳಿಗಂತೂ ಬೆಳದಿಂಗಳ ತಂಪಾದ ರಾತ್ರಿಯಲ್ಲಿ ಮರದ ಕೆಳಗಡೆ ವಿಹರಿಸುವದೆಂದರೆ ಸ್ವರ್ಗಕ್ಕೆ ಮೂರೇ ಕಾಲು ಎಂಬ ಭಾವನೆ., ಬೆಳದಿಂಗಳ ರಾತ್ರಿಯಲಿ ‘ಮೂನ್ ಲೈಟ್ ಡಿನ್ನರ್’ ಹೆಸರಿನಲ್ಲಿ ಪಾರ್ಟಿ ಮಾಡುವುದೂ ಇದೆ., ಇನ್ನೂ ಬೆಳದಿಂಗಳಲ್ಲಿ ಸಮುದ್ರದ ಅಲೆಗಳೂ ಪುಟಿದೇಳುತ್ತವೆ..! ಇವಿಷ್ಟು ಚಂದ್ರನೊAದಿಗೆ ಭೂಮಿಯಲ್ಲಿನ ಮಾನವನ ಸಂಬAಧಗಳAತೆ ಕಂಡರೆ, ಚಂದ್ರ ಭೂಮಿಯ ಏಕೈಕ ಬಹುದೊಡ್ಡ ನೈಸರ್ಗಿಕ ಉಪಗ್ರಹವಾಗಿದೆ. ಈ ಉಪಗ್ರಹದ ಬಗ್ಗೆ ಅರಿಯಲು., ಅದರ ಮಹತ್ವವನ್ನು ತಿಳಿಯಪಡಿಸುವ ಸಲುವಾಗಿ ಒಂದು ದಿನವನ್ನು ನಿಗದಿಪಡಿಸಲಾಗಿದೆ.

ಚಂದಮಾಮ ಓಡಿ ಬಾ., ನೈದಿಲೆ ಅರಳಿದೆ ನೋಡು ಬಾ.., ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ., ಚಂದ್ರ ಮೇಲೆ ಬಂದ., ಚಂದಮಾಮ ಬಾ., ಚಕ್ಕುಲಿ ಮಾಮ ಬಾರೋ.., ಚಂದಿರ ಚಂದಿರ ನಿದ್ರೆ ಯಾಕೋ ರ‍್ತಿಲ್ಲ., ಚಂದಿರನೇಕೆ ಓಡುವನಮ್ಮ., ಹೀಗೇ ಚಂದಿರನ ಬಗ್ಗೆ ಅದೆಷ್ಟೋ ಹಾಡುಗಳಿವೆ., ಶಿಶು ಗೀತೆಗಳಿವೆ., ಕವನ ಕಟ್ಟುವವರಿಗೆ ಚಂದಿರ ಚಂದದ ವಸ್ತು, ಹಾಗೆಯೇ ಪ್ರೇಮಿಗಳಿಗೆ ಚಂದಿರ ಅಚ್ಚುಮೆಚ್ಚು., ರಾತ್ರಿಯಲ್ಲೂ ಭೂಮಿಗೆ ಬೆಳಕು ನೀಡುವ ಚಂದಿರನ ತಂಪು ಎಲ್ಲರಿಗೂ ಇಂಪು..!

ಇAದು ವಿಶ್ವ ಚಂದ್ರನ ದಿನ

ಪ್ರತಿ ವರ್ಷ ಜುಲೈ ೨೦ ಅನ್ನು ಚಂದ್ರನ ದಿನವನ್ನಾಗಿ ಆಚರಿಸಲಾಗುತ್ತದೆ. ೧೯೬೯ ರಲ್ಲಿ ಈ ದಿನದಂದು ನೀಲ್ ಆರ್ಮ್ಸ್ಟಾçಂಗ್ ಚಂದ್ರನ ಮೇಲೆ ಕಾಲಿಟ್ಟರು. ಮಾನವರು ಸಾಧಿಸಿದ ಮೈಲಿಗಲ್ಲನ್ನು ಸ್ಮರಿಸಲು ಬಾಹ್ಯಾಕಾಶ ಸಮುದಾಯ ಈ ದಿನವನ್ನು ಆಚರಿಸುತ್ತಿದೆ. ಚಂದ್ರನ ಮೇಲೆ ಮನುಷ್ಯ ಮೊದಲು ಪದಾರ್ಪಣೆ ಮಾಡಿದ ನೆನಪಿಗಾಗಿ ಚಂದ್ರನ ದಿನವನ್ನು ಆಚರಿಸಲಾಗುತ್ತದೆ. ಜುಲೈ ೨೦, ೧೯೬೯ ರಂದು, ಅಪೊಲೊ ೧೧ ಮೊದಲ ಮಾನವರನ್ನು ಚಂದ್ರನಲ್ಲಿಗೆ ಕೊಂಡೊಯ್ದಿತು. ಈ ದಿನದಂದು ನೀಲ್ ಆರ್ಮ್ಸ್ಟಾçಂಗ್ ಚಂದ್ರನ ಮೇಲ್ಮೆöÊಯಲ್ಲಿ ಎರಡೂವರೆ ಗಂಟೆಗಳ ಕಾಲ ಕಳೆದರು. ಚಂದ್ರನ ಮೇಲೆ ಮನುಷ್ಯನನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾದ ದಿನವೂ ಈ ದಿನವಾಗಿದೆ. ಮತ್ತೊಬ್ಬ ಗಗನಯಾತ್ರಿ ಎಡ್ವಿನ್ ಬಜ್ ಆಲ್ಡಿçನ್‌ನೀಲ್ ಆರ್ಮ್ಸ್ಟಾçಂಗ್ ಅವರನ್ನು ಅನುಸರಿಸಿ ಚಂದ್ರನ ಮೇಲ್ಮೆöÊ ಮೇಲೆ ಹೆಜ್ಜೆ ಹಾಕಿದರು. ಸಂಶೋಧನಾ ಉದ್ದೇಶಗಳಿಗಾಗಿ ಭೂಮಿಗೆ ಮರಳಿ ತರಲು ಈ ಜೋಡಿ ೪೭.೫ ಪೌಂಡ್‌ಗಳಷ್ಟು ಚಂದ್ರನ ವಸ್ತುಗಳನ್ನು ಸಂಗ್ರಹಿಸಿದರು. ಮೂರನೇ ಗಗನಯಾತ್ರಿ ಮೈಕೆಲ್ ಕಾಲಿನ್ಸ್ ಅವರು ಪೈಲಟ್ ಆಗಿರುವುದರಿಂದ ಇಬ್ಬರೂ ಹಿಂತಿರುಗುವವರೆಗೂ ಕಮಾಂಡ್ ಮಾಡ್ಯೂಲ್‌ನಲ್ಲಿ ಕಾಯುತ್ತಿದ್ದರು. ತದ ನಂತರದಲ್ಲಿ ೧೦ ಮಂದಿ ಚಂದ್ರನ ಮೇಲೆ ಕಾಲಿಟ್ಟಿದ್ದಾರೆ.

೧೯೭೧ ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಯ ವಾರ್ಷಿಕೋತ್ಸವವನ್ನು ಗೌರವಿಸಲು ಜುಲೈ ೨೦ ರಂದು ಚಂದ್ರನ ದಿನವನ್ನು ಘೋಷಿಸಿದರು. ೨೦೧೯ ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನವನ ಮೊದಲ ಚಂದ್ರನ ಇಳಿಯುವಿಕೆಯ ೫೦ನೇ ವಾರ್ಷಿಕೋತ್ಸವವನ್ನು ಗೌರವಿಸಲು ಜುಲೈ ೨೦ ರಂದು ಚಂದ್ರನ ದಿನವನ್ನು ಘೋಷಿಸಿದರು. ಹನ್ನೆರಡು ರಾಜ್ಯಗಳು ಚಂದ್ರನ ದಿನವನ್ನು ಗುರುತಿಸುವ ಮಸೂದೆಗಳನ್ನು ಪ್ರಾಯೋಜಿಸಿವೆ. ಹೆಚ್ಚುವರಿಯಾಗಿ ಇದು ಸುಸ್ಥಿರ ಚಂದ್ರನ ಪರಿಶೋಧನೆ ಮತ್ತು ಬಳಕೆಯ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಭಾರತ ದೇಶದಿಂದ ೧೯೮೪ರಲ್ಲಿ ರಾಕೇಶ್ ಶರ್ಮಾ ಹಾಗೂ ಈಚೆಗಷ್ಟೇ ಶುಭಾಂಶು ಶುಕ್ಲ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಆದರೆ ಯಾರೂ ಚಂದ್ರನ ಮೇಲೆ ಕಾಲಿಟ್ಟಿಲ್ಲ.

ಏನೇ ಇರಲಿ., ದೂರದಿಂದ ದುಂಡನೆ ಕಾಣುವ ಚಂದದ ಚಂದ್ರನನ್ನು ನೋಡುತ್ತಾ., ಆನಂದಿಸುತ್ತಾ ಚಂದಿರನ ದಿನವನ್ನು ಸಂಭ್ರಮದಿAದ ಆಚರಿಸೋಣ..!

- ಕುಡೆಕಲ್ ಸಂತೋಷ್