ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಮೆರಿಕಾದ ನ್ಯೂಯಾರ್ಕ್ನ ನ್ಯೂ ಜೆರ್ಸಿ ಸ್ಟೇಡಿಯಂ ಸಜ್ಜುಗೊಂಡಿದೆ.ಒAದು ತಿಂಗಳ ಫುಟ್ಬಾಲ್ ಹಬ್ಬಕ್ಕೆ ಜುಲೈ ೧೯ರ ಮಧ್ಯರಾತ್ರಿ (ಸೋಮವಾರ ಮುಂಜಾನೆ ೧೨.೩೦) ತೆರೆ ಬೀಳಲಿದೆ.

ಭಾಗವಹಿಸಿಸದ್ದ ೪೮ ತಂಡಗಳಲ್ಲಿ ಇದೀಗ ಎರಡು ತಂಡಗಳು ವರ್ಲ್ಡ್ ಕಪ್ ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ.

ಹಾಲಿ ಚಾಂಪಿಯನ್ ಲಿಯೋನಲ್ ಮೆಸ್ಸಿ ಅವರ ಅರ್ಜೆಂಟೀನಾ ಹಾಗೂ ಇಡೀ ವಿಶ್ವಕ್ಕೆ 'ಟಿಕ್ಕಿ-ಟಾಕಾ' ಶೈಲಿಯ ಫುಟ್ಬಾಲ್ ಪರಿಚಯಿಸಿರುವ ಸ್ಪೇನ್ ತಂಡಗಳು ೨೦೨೬ರ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ದಕ್ಷಿಣ ಅಮೆರಿಕಾದ ಫುಟ್ಬಾಲ್ ಚಾಂಪಿಯನ್ನರು(ಅಜೇAಟೀನಾ) ಮತ್ತು ಯುರೋ ಕಪ್ ಫುಟ್ಬಾಲ್ ಚಾಂಪಿಯನ್ನರ(ಸ್ಪೇನ್) ನಡುವೆ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ನಡೆಯುತ್ತಿರುವುದು ಮತ್ತೊಂದು ವಿಶೇಷ.

ಈ ಅಂತಿಮ ಪಂದ್ಯಕ್ಕೆ ೨ ದಶಕಗಳ ಇತಿಹಾಸವಿದೆ ಎಂಬುದು ಇಲ್ಲಿ ವಿಶೇಷ. ೨೦೦೭ರಲ್ಲಿ ಬಾರ್ಸಿಲೋನ ತಂಡದ ಪರವಾಗಿ ಆಡುತ್ತಿದ್ದ ಅರ್ಜೇಂಟೀನಾದ ದಿಗ್ಗಜ ಮೆಸ್ಸಿ ಅವರಿಗೆ ಕೇವಲ ೨೦ ವರ್ಷ ಪ್ರಾಯ ಅಷ್ಟೇ. ಆ ಸಂದರ್ಭದಲ್ಲಿ ಚಾರಿಟಿ ಕ್ಯಾಲೆಂಡರ್ ಫೋಟೋ ಶೂಟ್ ಆಯೋಜಿಸಲಾಗಿತ್ತು. ಈ ಫೋಟೋ ಶೂಟ್‌ನಲ್ಲಿ ಪಾಲ್ಗೊಳ್ಳುವ ಮಗುವನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು. ಸ್ಪೇನ್‌ನಲ್ಲಿ ನಡೆದ ಲಾಟರಿಯಲ್ಲಿ ಅಲ್ಲಿನ ಸ್ಥಳೀಯ ಕುಟುಂಬಕ್ಕೆ ತಮ್ಮ ಮಗುವಿಗೆ ಮೆಸ್ಸಿಯೊಂದಿಗೆ ಫೋಟೋ ಶೂಟ್ ಮಾಡಿಸುವ ಅವಕಾಶ ಲಭಿಸಿತ್ತು. ಆ ಮಗುವೇ ಈಗಿನ ಸ್ಪೇನ್ ತಂಡದ ಖ್ಯಾತ ಆಟಗಾರ ಲಮೀನ್ ಯಮಾಲ್. ಅಂದು ಬಾತ್‌ಟಬ್‌ನಲ್ಲಿ ಪುಟ್ಟ ಮಗುವಿಗೆ ಮೆಸ್ಸಿ ಸ್ನಾನ ಮಾಡಿಸಿ ತನ್ನ ತೋಳುಗಳಲ್ಲಿ ಎತ್ತಿ ಆಡಿಸಿದ್ದರು. ಆ ಮಗು ಫೀಫಾ ವರ್ಲ್ಡ್ ಕಪ್‌ನಲ್ಲಿ ಮೆಸ್ಸಿಗೇ ಎದುರಾಳಿಯಾಗಿ ನಿಲ್ಲಲಿದೆ ಎಂಬುದು ಅಚ್ಚರಿ.

ಸ್ಪೇನ್ ಕೋಚ್ ಲೂಯಿಸ್ ಡಿ-ಲಾ ಫಾಂಟೆ ಮತ್ತು ಅರ್ಜೆಂಟೀನಾ ತಂಡದ ಕೋಚ್ ಸ್ಕಲೋನಿ ಇಬ್ಬರು ಗುರು-ಶಿಷ್ಯಂದಿರು. ಸ್ಕೋಲನಿ ಯುಎಫಾ ಪ್ರೋ ಕೋಚಿಂಗ್ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಈಗಿನ ಸ್ಪೇನ್ ಕೋಚ್ ಫಾಂಟೆ ಅಂದು ಮೆಂಟರ್ ಆಗಿದ್ದರು. ಇದೀಗ ಇಬ್ಬರು ಮುಖಾಮುಖಿ ಆಗಲಿದ್ದಾರೆ.

ಲೀಗ್ ಮಾದರಿಯ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಅಲ್ಜೀರಿಯ ವಿರುದ್ಧ ೩-೦, ಆಸ್ಟಿçಯಾ ವಿರುದ್ಧ ೨-೦ ಹಾಗೂ ಜೋರ್ಡನ್ ವಿರುದ್ಧ ೩-೧ ಗೋಲುಗಳ ಅಂತರದಿAದ ಗೆದ್ದು ಗ್ರೂಪ್ ಚಾಂಪಿಯನ್ನರಾಗಿ ರೌಂಡ್ ೩೨ರ ಘಟ್ಟಕ್ಕೆ ಅರ್ಹತೆ ಪಡೆಯಿತು. ಆದರೆ ನೌಕೌಟ್‌ನಿಂದ ಸೆಮಿಫೈನಲ್ ವರೆಗೆ ಅರ್ಜೆಂಟೀನಾ ತಂಡದ ಹಾದಿ ಕಠಿಣವಾಗಿತ್ತು. ಇಡೀ ಫುಟ್ಬಾಲ್ ಜಗತ್ತು ನಿಬ್ಬೆರೆಗಾಗುವ ಆಟವನ್ನು ಅರ್ಜೆಂಟೀನಾ ಪ್ರದರ್ಶಿಸಿದೆ. ಕಳೆದ ಬಾರಿಯ ಕತಾರ್ ವರ್ಲ್ಡ್ ಕಪ್ ಆಟಕ್ಕಿಂತ ಈ ಬಾರಿ ಅರ್ಜೆಂಟೀನಾ ತಂಡದ ಪ್ರದರ್ಶನವು ಭಿನ್ನವಾಗಿದೆ.

ಕಳೆದ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲ್ಯಾಂಡ್ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿಯ ನಾಕೌಟ್ ಪಂದ್ಯದಲ್ಲಿ ಯಾವುದೇ ಪಂದ್ಯವನ್ನು ಪೆನಾಲ್ಟಿ ಶೂಟೌಟ್ ನತ್ತ ಅರ್ಜೆಂಟೀನಾ ತಂಡ ಕೊಂಡೊಯ್ಯಲಿಲ್ಲ. ಕೇವಲ ಐದೂವರೆವರೆ ಲಕ್ಷ ಜನಸಂಖ್ಯೆ ಇರುವ ಆಫ್ರಿಕಾ ಖಂಡದ ಕೇಪ್ ವರ್ಡೆ ವಿರುದ್ಧ ರೌಂಡ್ ೩೨ರ ಘಟ್ಟದಲ್ಲಿ ಅರ್ಜೆಂಟೀನಾ ೩-೨ ಗೋಲುಗಳ ಅಂತರದಿAದ ಕೊನೆಯ ಹೆಚ್ಚುವರಿ ಸಮಯದಲ್ಲಿ ಗೆಲುವು ಸಾಧಿಸಿತ್ತು. ಇದಕ್ಕಿಂತ ರೋಚಕವಾದ ಪಂದ್ಯ ಈಜಿಪ್ಟ್ ತಂಡದ ವಿರುದ್ಧ ನಡೆದಿತ್ತು. ಮೊದಲು ಎರಡು ಗೋಲು ಬಾರಿಸಿ ಮುನ್ನಡೆ ಸಾಧಿಸಿದ್ದ ಈಜಿಪ್ಟ್ ತಂಡಕ್ಕೆ ಕೊನೆಯ ಹತ್ತು ನಿಮಿಷದಲ್ಲಿ ಅರ್ಜೆಂಟೀನಾ ತಂಡವು ದೊಡ್ಡ ಆಘಾತ ನೀಡಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಕೊನೆಯ ೩೦ ನಿಮಿಷ ಆಕ್ರಮಣಕಾರಿ ಆಟಕ್ಕೆ ಮುಂದಾಗುವ ಲೊಯೋನಲ್ ಮೆಸ್ಸಿ ಪಡೆ ಇಡೀ ಆಟದ ದಿಕ್ಕನ್ನೇ ಬದಲಾಯಿಸಿದೆ. ೧೬ರ ಘಟ್ಟದಲ್ಲಿ ಈಜಿಪ್ಟ್ ತಂಡದ ವಿರುದ್ಧ ಸೋತು ಹೊರಬೀಳುವ ಎಲ್ಲಾ ಸಾಧ್ಯತೆಗಳು ಕೊನೆಯ ಕ್ಷಣದವರೆಗೆ ಇತ್ತು. ಆದರೆ ಕೊನೆಯ ೧೫ ನಿಮಿಷಗಳಲ್ಲಿ ೩ ಗೋಲುಗಳನ್ನು ಬಾರಿಸುವುದರ ಮೂಲಕ ಮತ್ತೊಮ್ಮೆ 'ಕಮ್ ಬ್ಯಾಕ್ ಟೀನಾ' ಖ್ಯಾತಿ ಗಳಿಸಿತು. ಸ್ವಿಜರ್ಲ್ಯಾಂಡ್ ವಿರುದ್ಧ ಕ್ವಾರ್ಟರ್ ಪಂದ್ಯದಲ್ಲಿ ಒಂದು ಗೋಲುಗಳನ್ನು ಬಾರಿಸಿ ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ ತಂಡವು ದ್ವಿತೀಯಾರ್ಧದಲ್ಲಿ ಹಿನ್ನಡೆ ಸಾಧಿಸಿತ್ತು. ನಂತರ ಹೆಚ್ಚುವರಿ ಸಮಯದಲ್ಲಿ ೨ ಗೋಲುಗಳನ್ನು ಬಾರಿಸಿವುದರ ಮೂಲಕ ೩-೧ ಗೋಲುಗಳ ಅಂತರದಿAದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆAಡ್ ತಂಡದ ವಿರುದ್ಧ ಅರ್ಜೆಂಟೀನಾ ತಂಡ ಸೋಲಲಿದೆ ಎಂದು ಬಹುತೇಕ ಫುಟ್ಬಾಲ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಈ ವಿಶ್ವಕಪ್‌ನ ಅರ್ಜೆಂಟೀನಾ ತಂಡದ ಬೆಸ್ಟ್ ಗೇಮ್ ಗಳಲ್ಲಿ ಸೆಮಿಫೈನಲ್ ಒಂದಾಗಿತ್ತು. ಅರ್ಜೆಂಟೀನಾ ತಂಡಕ್ಕೆ ಹೋಲಿಸಿದರೆ ಇಂಗ್ಲೆAಡ್ ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠವಾಗಿತ್ತು. ದ್ವಿತಿಯಾರ್ಧ ಮೊದಲು ಗೋಲು ಬಾರಿಸಿ ಮುನ್ನಡೆ ಸಾಧಿಸಿದ್ದ ಇಂಗ್ಲೀಷರು ೬೫ ನಿಮಿಷದ ಸಂಪೂರ್ಣ ಡಿಫೆನ್ಸಿವ್ ಆಟದತ್ತ ಸಾಗಿದರು. ೭೫ ನಿಮಿಷದ ನಂತರ ಸತತವಾಗಿ ಅರ್ಜೆಂಟೀನಾ ತಂಡವು ಆಕ್ರಮಣಕಾರಿ ಆಟದತ್ತ ಸಾಗಿತು. ಮೆಸ್ಸಿ ಇಡೀ ತಂಡದ ನಿಯಂತ್ರಣವನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದ್ದರು. ಕೇವಲ ಒಂಭತ್ತು ನಿಮಿಷದಲ್ಲಿ ಅರ್ಜೆಂಟೀನಾ ತಂಡವು ೨ ಗೋಲುಗಳನ್ನು ಬಾರಿಸುವುದರ ಮೂಲಕ ಇಂಗ್ಲೆAಡ್ ತಂಡಕ್ಕೆ ಆಘಾತ ನೀಡಿ ಫೈನಲ್ ಪ್ರವೇಶಿಸಿತು.

ಯುರೋ ಚಾಂಪಿಯನ್ನರ ಕಾಲ್ಚಳಕ

ಸ್ಪೇನ್ ದೇಶ ೧೬ ವರ್ಷಗಳ ನಂತರ ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿದೆ. ಏಕೈಕ ವಿಶ್ವಕಪ್ ಪ್ರಶಸ್ತಿ ಜಯಿಸಿರುವ ಸ್ಪೇನ್ ತಂಡ ಈ ಬಾರಿಯ ವರ್ಲ್ಡ್ಕಪ್ ನಲ್ಲಿ ಫೇವರೇಟ್ ತಂಡಗಳಲ್ಲಿ ಒಂದಾಗಿದ್ತೆ. ಆದರೆ ಇದೇ ಮೊದಲ ಬಾರಿಗೆ ವರ್ಲ್ಡ್ಕಪ್‌ನಲ್ಲಿ ಸ್ಥಾನ ಪಡೆದಿದ್ದ ಕೇಪ್ ವರ್ಡೇ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ ಸಮಬಲ ಸಾಧಿಸಿತ್ತು. ಆ ಸಂದರ್ಭದಲ್ಲಿ ಫುಟ್ಬಾಲ್ ವಿಶ್ಲೇಷಕರು, ಸ್ಪೇನ್ ತಂಡ ಎಂದಿನAತೆ ಈ ಬಾರಿ ಕೂಡ ನೌಕೌಟ್ ಹಂತದಲ್ಲಿ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದರು. ಜಗತ್ತಿನ ಪ್ರಸಿದ್ಧ ಕ್ಲಬ್‌ಗಳಲ್ಲಿ ಆಡುತ್ತಿರುವ ಆಟಗಾರರು ಸ್ಪೇನ್ ತಂಡದಲ್ಲಿ ಇದ್ದಾರೆ. ಪ್ರತಿಷ್ಠಿತ ಬಾರ್ಸಿಲೋನಾ ಕ್ಲಬ್‌ನಲ್ಲಿ ಆಡುತ್ತಿರುವ ಎಂಟು ಆಟಗಾರರು ಸ್ಪೇನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಲೀಗ್‌ನ ದ್ವಿತೀಯ ಪಂದ್ಯದಲ್ಲಿ ಕಳೆದ ಬಾರಿ ಕತಾರ್ ವರ್ಲ್ಡ್ಕಪ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ್ದ ಸೌದಿ ಅರೇಬಿಯಾ ವಿರುದ್ಧ ೪-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಸ್ಪೇನ್ ತಂಡ ಲಯಕ್ಕೆ ಮರಳಿತು. ನಂತರ ಕೊನೆಯ ಲೀಗ್ ಪಂದ್ಯದಲ್ಲಿ ಉರುಗ್ವೆ ವಿರುದ್ಧ ೧-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಗ್ರೂಪ್ ಚಾಂಪಿಯನ್ ಆಗುವುದರ ಮೂಲಕ ರೌಂಡ್ ೩೨ರ ಘಟ್ಟಕ್ಕೆ ಲಗ್ಗೆಯಿಟ್ಟಿತು.

ರೌಂಡ್ ೩೨ನಲ್ಲಿ ಆಷ್ಟಿçಯಾ ವಿರುದ್ಧ ೩-೦ ಗೆಲುವು, ರೌಂಡ್ ೧೬ ರಲ್ಲಿ ಪೋರ್ಚುಗಲ್ ವಿರುದ್ಧ ೧-೦ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ೨-೧ ಗೋಲುಗಳ ಅಂತರದಿAದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ಫ್ರಾನ್ಸ್ನ ಖ್ಯಾತ ಆಟಗಾರ ಎಂಬಾಪೆಯ ವೇಗದ ಓಟಕ್ಕೆ ಬ್ರೇಕ್ ಹಾಕಿದ ಸ್ಪೇನ್, ಈ ಬಾರಿಯ ವರ್ಲ್ಡ್ಕಪ್‌ನಲ್ಲಿ ಎಂಬಾಪೆ ನಾಯಕತ್ವದ ಫ್ರಾನ್ಸ್ ಪಡೆ ಮತ್ತೊಮ್ಮೆ ಫೈನಲ್ ಪ್ರವೇಶಿಸಬಹುದೆಂಬ ನಿರೀಕ್ಷೆಗಳನ್ನು ಅಲ್ಲಗಳೆಯಿತು. ೨-೦ ಅಂತರದಲ್ಲಿ ಗೆದ್ದು ೧೬ ವರ್ಷಗಳ ನಂತರ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಅತ್ಯುತ್ತಮ ಮಿಡ್ ಫೀಲ್ಡರ್ ಹಾಗೂ ಡಿಫೆಂಡರ್ ಪಡೆಯನ್ನೇ ಹೊಂದಿರುವ ಸ್ಪೇನ್ ತಂಡದ ಕೋಟೆಯನ್ನು ಭೇದಿಸುವುದು ಕಷ್ಟಸಾಧ್ಯ.ಹೆಚ್ಚು ಸಮಯ ತಮ್ಮ ಕಾಲಿನಲ್ಲೇ ಚೆಂಡನ್ನು ನಿಯಂತ್ರಿಸುವುದರ ಮೂಲಕ ಇಡೀ ಆಟದ ನಿಯಂತ್ರಣವನ್ನು ಪಂದ್ಯದುದ್ದಕ್ಕೂ ಮುಂದುವರಿಸುವ ಸ್ಪೇನ್ ತಂಡದ ವಿರುದ್ಧ ಮೇಲುಗೈ ಸಾಧಿಸುವುದು ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡಕ್ಕೆ ಸುಲಭವೇನು ಅಲ್ಲ.

ಅತೀ ಹೆಚ್ಚು ಗೋಲು ಬಾರಿಸಿದ ತಂಡ ಮತ್ತು ಅತೀ ಕಡಿಮೆ ಗೋಲು ಬಿಟ್ಟುಕೊಟ್ಟ ತಂಡದÀ ನಡುವೆ ಫೈನಲ್!

ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಫೀಫಾ ವರ್ಲ್ಡ್ಕಪ್ ಫೈನಲ್ ಪಂದ್ಯವು ಹಲವು ವಿಶೇಷತೆ ಮತ್ತು ಇತಿಹಾಸಕ್ಕೆ ಸಾಕ್ಷಿಯಾಗಲಿದೆ. ಈ ಬಾರಿಯ ವರ್ಲ್ಡ್ಕಪ್‌ನಲ್ಲಿ ಅತೀ ಹೆಚ್ಚು (೧೯) ಗೋಲು ಬಾರಿಸಿರುವ ಅರ್ಜೆಂಟೀನಾ ಮತ್ತು ಕೇವಲ ಒಂದೇ ಒಂದು ಗೋಲು ಬಿಟ್ಟುಕೊಟ್ಟಿರುವ ಸ್ಪೇನ್ ತಂಡಗಳ ನಡುವೆ ಫೈನಲ್ ನಡೆಯುತ್ತಿರುವುದು ವರ್ಲ್ಡ್ಕಪ್‌ನ ಹೊಸ ಇತಿಹಾಸವಾಗಿದೆ. ಸ್ಪೇನ್ ತಂಡವು ಇದುವರೆಗೆ ೧೩ ಗೋಲುಗಳನ್ನು ಬಾರಿಸಿದರೆ ಅರ್ಜೆಂಟೀನಾ ತಂಡವು ೭ ಗೋಲುಗಳನ್ನು ಬಿಟ್ಟುಕೊಟ್ಟಿದೆ.

ಅತ್ಯುತ್ತಮ ಡಿಫೆಂಡರ್ ಪಡೆ ಸ್ಪೇನ್ ಮತ್ತು ಕೊನೆಯ ಕ್ಷಣದಲ್ಲಿ ವೇಗದ ಆಕ್ರಮಣಕಾರಿ ಆಟವನ್ನು ಆಡುತ್ತಿರುವ ಅರ್ಜೆಂಟೀನಾ ತಂಡಗಳ ನಡುವೆ ಫೈನಲ್ ಮತ್ತಷ್ಟು ರೋಚಕತೆ ಪಡೆಯಲಿದೆ.

೭ನೇ ಬಾರಿ ಅರ್ಜೆಂಟೀನಾ ಫೈನಲ್‌ಗೆ

ಅರ್ಜೆಂಟೀನಾ ೭ನೇ ಬಾರಿ ಫೈನಲ್‌ಗೇರಿದೆ. ಇದು ಫಿಫಾ ವಿಶ್ವಕಪ್‌ನಲ್ಲಿ ೨ನೇ ಜಂಟಿ ಗರಿಷ್ಠ. ಬ್ರೆಜಿಲ್ ಕೂಡಾ ೭ ಬಾರಿ ಫೈನಲ್ ಪ್ರವೇಶಿಸಿದೆ. ಜರ್ಮನಿ ೮ ಬಾರಿ ಫೈನಲ್ ಆಡಿದ್ದು, ಅಗ್ರಸ್ಥಾನದಲ್ಲಿದೆ. ಬ್ರೆಜಿಲ್ ೫, ಜರ್ಮನಿ ೪, ಅರ್ಜೆಂಟೀನಾ ೩ ಬಾರಿ ಟ್ರೋಫಿ ಗೆದ್ದಿದೆ. ಇಟಲಿ ೬ ಬಾರಿ ಫೈನಲ್ ಆಡಿ ೪ ಬಾರಿ ಚಾಂಪಿಯನ್ ಆಗಿದೆ.

ಫಿಫಾ ವಿಶ್ವಕಪ್‌ನಲ್ಲಿ ಕಳೆದ ೬೪ ವರ್ಷಗಳಲ್ಲಿ ಸತತ ೨ ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸುವ ಅವಕಾಶ ಅರ್ಜೆಂಟೀನಾ ಮುಂದಿದೆ. ಇಟಲಿ ತಂಡ ೧೯೩೪-೧೯೩೮ರಲ್ಲಿ ಮೊದಲ ಬಾರಿ ಈ ಸಾಧನೆಯನ್ನು ಬ್ರೆಜಿಲ್ ೧೯೫೮-೧೯೬೨ ಕೊನೆಯದಾಗಿ ಸತತ ೨ ವಿಶ್ವಕಪ್ ಗೆದ್ದಿತ್ತು.

ಮೆಸ್ಸಿಯನ್ನು ಕಟ್ಟಿ ಹಾಕುವುದೇ ಸವಾಲು!

೩೯ವರ್ಷದ ಲಿಯೋನಲ್ ಮೆಸ್ಸಿ ೮ ಗೋಲು ಮತ್ತು ನಾಲ್ಕು ಅಸಿಸ್ಟ್ ಮೂಲಕ ಈ ವಿಶ್ವಕಪ್‌ನಲ್ಲಿ ಕೂಡ ತನ್ನ ಪ್ರಾಬಲ್ಯವನ್ನು ಮೆರೆದಿದ್ದಾರೆ.ಮೆಸ್ಸಿ ಜನಿಸಿದ್ದು ಅರ್ಜೆಂಟೀನಾದಲ್ಲಾದರೂ ತನ್ನ ಇಡೀ ಫುಟ್ಬಾಲ್ ಬದುಕನ್ನು ಕಳೆದಿದ್ದು ಸ್ಪೇನ್‌ನಲ್ಲಿ. ಸ್ಪೇನ್ ಆಟಗಾರರ ಆಟದ ಶೈಲಿ ಎಲ್ಲವೂ ಮೆಸ್ಸಿ ಬಲ್ಲರು. ಮೆಸ್ಸಿ ಅವರನ್ನು ಫೈನಲ್‌ನಲ್ಲಿ ನಿಯಂತ್ರಿಸುವುದು ಸ್ಪೇನ್ ತಂಡಕ್ಕೆ ಸುಲಭದ ಕೆಲಸವೇನಲ್ಲ.

ಅತ್ಯುತ್ತಮ ಡಿಫೆಂಡರ್ ಪಡೆಯನ್ನು ಹೊಂದಿರುವ ಸ್ಪೇನ್ ತಂಡದ ಕೋಟೆಯನ್ನು ಭೇದಿಸುವುದು ಮೆಸ್ಸಿಗೂ ಕೂಡ ಕಷ್ಟಸಾಧ್ಯ. ಆದರೆ ನೌಕೌಟ್ ಪಂದ್ಯದಲ್ಲಿ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುವ ಮೆಸ್ಸಿಯ ಆಟ ಕೆಲವೊಮ್ಮೆ ಯಾರ ಊಹೆಗೂ ನಿಲುಕದ ಗೇಮ್.ಅದಲ್ಲದೇ ಗೋಲು ಬಾರಿಸದಿದ್ದರೂ ಕೂಡ ಗೋಲು ಬಾರಿಸಲು ಆಟಗಾರರಿಗೆ ಅಸಿಸ್ಟ್ ನೀಡುವ ಮೆಸ್ಸಿ, ಸ್ಪೇನ್ ತಂಡದಕ್ಕೆ ಎಲ್ಲರಿಗಿಂತಲೂ ದೊಡ್ಡ ಅಪಾಯ.