ವೀರಾಜಪೇಟೆ, ಜು. ೧೭: ಪಟ್ಟಣದ ಮೀನುಪೇಟೆಯಲ್ಲಿರುವ ವಿನಾಯಕ್ ಇಂಗ್ಲೀಷ್ ಸ್ಕೂಲ್‌ನಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥೆ ಜಯಕುಮಾರಿ ಬ್ಯಾಡ್ಜ್ ತೊಡಿಸಿ ಅಧಿಕಾರದ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಜಯಕುಮಾರಿ, ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ಜವಾಬ್ದಾರಿ, ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಬಳಿಕ ನೂತನ ವಿದ್ಯಾರ್ಥಿ ನಾಯಕರು ಪ್ರಮಾಣವಚನ ಸ್ವೀಕರಿಸಿದರು.

ಶಾಲಾ ನಾಯಕನಾಗಿ ಟಿ.ಪಿ. ಪ್ರಣವ್, ಸಹನಾಯಕನಾಗಿ ಬಿ.ಎಸ್. ದಿಗಂತ್ ರೈ. ಶಾಲಾ ಕಾರ್ಯದರ್ಶಿಯಾಗಿ ಪಿ.ಡಿ.ನಮಿತಾ, ಸಾಂಸ್ಕೃತಿಕ ನಾಯಕಿಯಾಗಿ ಎಚ್.ಆರ್. ಅನುಶ್ರೀ, ಸಾಂಸ್ಕೃತಿಕ ಸಹನಾಯಕಿಯಾಗಿ ಕೆ.ವಿ. ಶ್ವೇತ, ಶಿಸ್ತು ನಾಯಕನಾಗಿ ಟಿ. ಪ್ರವೀಶ್, ಶಿಸ್ತು ಸಹನಾಯಕನಾಗಿ ಪಿ. ಯಶ್ವಂತ್, ಕ್ರೀಡಾ ನಾಯಕನಾಗಿ ಕೆ.ಎಂ. ಅಸಿಮ್. ಹಾಗೂ ಕ್ರೀಡಾ ಸಹನಾಯಕನಾಗಿ ಕೆ.ಪಿ. ಶ್ರೀಜಿತ್ ಅಧಿಕಾರ ಸ್ವೀಕರಿಸಿದರು.

ಶಾಲಾ ಶಿಕ್ಷಕಿ ಅರ್ಪಿತ ಎನ್.ಎಸ್. ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ಪ್ರತಿಮಾ ಆಚಾರ್ಯ, ಬಿ.ಎ. ಶೈಲಾ, ಶಿಕ್ಷಕಿಯರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಆಸೀಬ್ ಎಂ.ಯು. ಪ್ರೇರಣಾದಾಯಕ ಭಾಷಣ ಮಾಡಿದರು. ವಿದ್ಯಾರ್ಥಿನಿಯರಾದ ದಿಶಾ ಟಿ.ಎ. ಹಾಗೂ ದೀಪ್ತಿ ಪಿ. ನೃತ್ಯ ಪ್ರದರ್ಶನ ನೀಡಿದರು. ದಿವ್ಯ ಕೆ.ಎಸ್. ಸ್ವಾಗತಿಸಿ, ಶಿಕ್ಷಕಿ ಮುಫೀದ ಎಂ. ಕಾರ್ಯಕ್ರಮ ನಿರೂಪಿಸಿ, ಸೌಮ್ಯ ಎಚ್.ಜೆ. ವಂದಿಸಿದರು.