ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಜು. ೧೭: ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಒಟ್ಟು ೫೭೯ ಮದ್ಯದ ಸನ್ನದುಗಳನ್ನು (ಐiಛಿeಟಿses) ಮುಂದಿನ ೫ ವರ್ಷಗಳ ಅವಧಿಗೆ (೨೦೨೬-೨೭ ರಿಂದ ೨೦೩೦-೩೧ರವರೆಗೆ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈಗಾಗಲೇ ಸನ್ನದುಗಳನ್ನು ಪಡೆದುಕೊಂಡಿದ್ದು ಅವುಗಳನ್ನು ಕಾರಣಾಂತರಗಳಿAದ ರದ್ದುಗೊಳಿಸಿದ್ದಲ್ಲಿ ಅಥವಾ ನವೀಕರಿಸಿರದಿದ್ದಲ್ಲಿ ಅಂತಹ ಸನ್ನದುಗಳನ್ನು ಹರಾಜು ಹಾಕಲಾಗುತ್ತಿದ್ದು ಇದು ರಾಜ್ಯದ ಮೊಟ್ಟಮೊದಲ ಅತ್ಯಂತ ದೊಡ್ಡ ಇ-ಹರಾಜು ಪ್ರಕ್ರಿಯೆ ಆಗಿದೆ.
ಈ ಸಂಬAಧ ಬಿಡ್ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ತಾ. ೨೪ ರಿಂದ ೩೧ ರವರೆಗೆ ವಿವಿಧ ಹಂತಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಬೃಹತ್ ಇ-ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೪೮೩ ಸಿಎಲ್ (೨-ಎ) ಮತ್ತು ೯೬ ಸಿಎಲ್ (೯-ಎ) ಸನ್ನದುಗಳು ಹರಾಜಿಗೆ ಮುಕ್ತವಾಗಿವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ ೧೧೯ ಸಿಎಲ್ (೨-ಎ) ಮತ್ತು ೬೭ ಸಿಎಲ್ (೯-ಎ) ಸನ್ನದುಗಳು ಲಭ್ಯವಿರುವುದು ವಿಶೇಷವಾಗಿದೆ.
ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಅಳವಡಿಸಲಾಗಿದ್ದು, ಪರಿಶಿಷ್ಟ ಜಾತಿ-ಎ ವರ್ಗದವರಿಗೆ ಶೇ. ೫.೨೫ ರಷ್ಟು, ಪರಿಶಿಷ್ಟ ಜಾತಿ-ಬಿ ವರ್ಗದವರಿಗೆ ಶೇ. ೫.೨೫ ರಷ್ಟು, ಪರಿಶಿಷ್ಟ ಜಾತಿ-ಸಿ ವರ್ಗದವರಿಗೆ ಶೇ. ೪.೫೦ ರಷ್ಟು ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. ೩ ರಷ್ಟು ಮೀಸಲಾತಿಯನ್ನು ಸರ್ಕಾರ ಕಲ್ಪಿಸಿದೆ.
ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ : ಈ ಇ-ಹರಾಜಿನಲ್ಲಿ ಭಾಗವಹಿಸಲು ಯಾವುದೇ ವ್ಯಕ್ತಿ ಅಥವಾ ಏಕವ್ಯಕ್ತಿ ಮಾಲೀಕತ್ವ ಸಂಸ್ಥೆಗಳು ಅರ್ಹರಾಗಿರುತ್ತಾರೆ. ಇದರೊಂದಿಗೆ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಡಂಬಡಿಕೆ (ಐಐP) ಅಥವಾ ಕಂಪನಿಗಳು ಕೂಡ ಅರ್ಜಿ ಸಲ್ಲಿಸಬಹುದು.
ಬಿಡ್ ಮಾಡಲು ಇಚ್ಛಿಸುವವರು ರೂ. ೧,೦೦೦/- ನೋಂದಣಿ ಶುಲ್ಕ ಮತ್ತು ಅನ್ವಯವಾಗುವ ಜಿ.ಎಸ್.ಟಿ (ಉSಖಿ) ಪಾವತಿಸಿ ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಸನ್ನದಿನ ಅರ್ಜಿಗೆ ರೂ. ೫೦,೦೦೦/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಇದು ಯಾವುದೇ ಕಾರಣಕ್ಕೂ ಮರುಪಾವತಿ ಆಗುವುದಿಲ್ಲ
ಬಿಡ್ದಾರರಿಗೆ ಒಂದಕ್ಕಿAತ ಹೆಚ್ಚು ಸನ್ನದುಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲೆಯ ಹರಾಜಿನ ದಿನಕ್ಕೆ ಕನಿಷ್ಟ ಎರಡು ಕೆಲಸದ ದಿನಗಳ ಮೊದಲೇ ಒSಖಿಅ ಪೋರ್ಟಲ್ನಲ್ಲಿ ನೋಂದಣಿ ಮಾಡಿ ಕೊಳ್ಳುವುದು ಕಡ್ಡಾಯ ವಾಗಿದೆ. ಅಬಕಾರಿ ಇಲಾಖೆಯು ಇ-ಹರಾಜಿನ ಸುಗಮ ನಿರ್ವಹಣೆಗಾಗಿ ಪ್ರತಿದಿನ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨ ರವರೆಗೆ ಮೊದಲ ಸ್ಲಾಟ್ (Sಟoಣ-೧) ಹಾಗೂ ಮಧ್ಯಾಹ್ನ ೩ ರಿಂದ ಸಂಜೆ ೫ರವರೆಗೆ ಎರಡನೇ ಸ್ಲಾಟ್ (Sಟoಣ-೨) ಎಂದು ವಿಂಗಡಿಸಿ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.
ತಾ. ೨೪ರಂದು ಬೆಳಿಗ್ಗೆ ನಡೆಯುವ ಮೊದಲ ಸ್ಲಾಟ್ನಲ್ಲಿ (ಬೆಂಗಳೂರು ನಗರ ಜಿಲ್ಲಾ) ವ್ಯಾಪ್ತಿಯ ೨೧ ಸನ್ನದುಗಳು, ಬೀದರ್ನ ೧೧ ಸನ್ನದುಗಳು ಮತ್ತು ಹಾವೇರಿಯ ೧೪ ಸನ್ನದುಗಳು ಸೇರಿ ಒಟ್ಟು ೪೬ ಸನ್ನದುಗಳಿಗೆ ಹರಾಜು ನಡೆಯಲಿದೆ. ಅದೇ ದಿನ ಮಧ್ಯಾಹ್ನದ ಎರಡನೇ ಸ್ಲಾಟ್ನಲ್ಲಿ ಃUಆ-೦೫ ವ್ಯಾಪ್ತಿಯ ೧೮ ಸನ್ನದುಗಳು, ಚಿಕ್ಕಮಗಳೂರಿನ ೧೨ ಸನ್ನದುಗಳು ಹಾಗೂ ಕಲಬುರಗಿಯ ೧೫ ಸನ್ನದುಗಳು ಸೇರಿ ಒಟ್ಟು ೪೫ ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ.
ತಾ. ೨೭ರಂದು ಮೊದಲ ಸ್ಲಾಟ್ನಲ್ಲಿ ಬೆಂಗಳೂರಿನ ೨೮ ಸನ್ನದುಗಳು, ಹಾಸನದ ೧೩ ಸನ್ನದುಗಳು ಹಾಗೂ ರಾಯಚೂರಿನ ೯ ಸನ್ನದುಗಳು ಸೇರಿ ಒಟ್ಟು ೫೦ ಸನ್ನದುಗಳಿಗೆ ಹರಾಜು ನಡೆಯಲಿದೆ. ಎರಡನೇ ಸ್ಲಾಟ್ನಲ್ಲಿ ಬೆಂಗಳೂರಿನ ೨೬ ಸನ್ನದುಗಳು, ಶಿವಮೊಗ್ಗದ ೧೭ ಸನ್ನದುಗಳು ಮತ್ತು ಯಾದಗಿರಿಯ ೬ ಸನ್ನದುಗಳು ಸೇರಿ ಒಟ್ಟು ೪೯ ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ.
ತಾ.೨೮ರಂದು ಮೊದಲ ಸ್ಲಾಟ್ನಲಿ ಬೆಂಗಳೂರಿನ ೨೫ ಸನ್ನದುಗಳು, ಬೆಳಗಾವಿ ಉತ್ತರದ ೧೦ ಸನ್ನದುಗಳು ಮತ್ತು ಉತ್ತರ ಕನ್ನಡದ ೧೪ ಸನ್ನದುಗಳು ಸೇರಿದಂತೆ ಒಟ್ಟು ೪೯ ಸನ್ನದುಗಳಿಗೆ ಹರಾಜು ನಿಗದಿಯಾಗಿದೆ. ಎರಡನೇ ಸ್ಲಾಟ್ನಲ್ಲಿ ಬೆಂಗಳೂರಿನ ೨೨ ಸನ್ನದುಗಳು, ಬಳ್ಳಾರಿಯ ೧೨ ಸನ್ನದುಗಳು ಮತ್ತು ಬಾಗಲಕೋಟೆಯ ೮ ಸನ್ನದುಗಳು ಸೇರಿ ಒಟ್ಟು ೪೨ ಸನ್ನದುಗಳಿಗೆ ಬಿಡ್ಡಿಂಗ್ ಜರುಗಲಿದೆ.
ತಾ. ೨೯ರಂದು ಮೊದಲ ಸ್ಲಾಟ್ನಲ್ಲಿ ಬೆಂಗಳೂರಿನ ೧೩ ಸನ್ನದುಗಳು, ತುಮಕೂರಿನ ೨೬ ಸನ್ನದುಗಳು ಮತ್ತು ಕೊಪ್ಪಳದ ೬ ಸನ್ನದುಗಳು ಸೇರಿ ಒಟ್ಟು ೪೫ ಸನ್ನದುಗಳಿಗೆ ಹರಾಜು ನಡೆಯಲಿದೆ. ಎರಡನೇ ಸ್ಲಾಟ್ನಲ್ಲಿ ಬೆಂಗಳೂರಿನ ೩೩ ಸನ್ನದುಗಳು, ಚಿಕ್ಕಬಳ್ಳಾಪುರದ ೧೧ ಸನ್ನದುಗಳು ಮತ್ತು ಮೈಸೂರು ಗ್ರಾಮಾಂತರದ ೧೪ ಸನ್ನದುಗಳು ಸೇರಿ ಒಟ್ಟು ೫೮ ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ.
ತಾ. ೩೦ರಂದು ಮೊದಲ ಸ್ಲಾಟ್ನಲ್ಲಿ ದಾವಣಗೆರೆಯ ೧೨ ಸನ್ನದುಗಳು, ವಿಜಯನಗರದ ೧೦ ಸನ್ನದುಗಳು, ಚಿತ್ರದುರ್ಗದ ೧೨ ಸನ್ನದುಗಳು ಹಾಗೂ ಮಂಡ್ಯದ ೧೫ ಸನ್ನದುಗಳು ಸೇರಿ ಒಟ್ಟು ೪೯ ಸನ್ನದುಗಳ ಹರಾಜು ನಡೆಯಲಿದೆ. ಎರಡನೇ ಸ್ಲಾಟ್ನಲ್ಲಿ ವಿಜಯಪುರದ ೯ ಸನ್ನದುಗಳು, ಚಾಮರಾಜನಗರದ ೭ ಸನ್ನದುಗಳು, ದಕ್ಷಿಣ ಕನ್ನಡದ ೩೧ ಸನ್ನದುಗಳು ಮತ್ತು ಗದಗ ಜಿಲ್ಲೆಯ ೮ ಸನ್ನದುಗಳು ಸೇರಿ ಒಟ್ಟು ೫೫ ಸನ್ನದುಗಳಿಗೆ ಬಿಡ್ಡಿಂಗ್ ಜರುಗಲಿದೆ.
ತಾ. ೩೧ರಂದು ಕೊನೆಯ ದಿನದ ಮೊದಲ ಸ್ಲಾಟ್ನಲ್ಲಿ ಕೋಲಾರದ ೧೫ ಸನ್ನದುಗಳು, ಧಾರವಾಡದ ೧೯ ಸನ್ನದುಗಳು, ಕೊಡಗಿನ ೩ ಸನ್ನದುಗಳು ಮತ್ತು ಬೆಳಗಾವಿ ದಕ್ಷಿಣದ ೧೧ ಸನ್ನದುಗಳು ಸೇರಿ ಒಟ್ಟು ೪೮ ಸನ್ನದುಗಳಿಗೆ ಹರಾಜು ನಡೆಯಲಿದೆ. ಎರಡನೇ ಸ್ಲಾಟ್ನಲ್ಲಿ ಬೆಂಗಳೂರು ಗ್ರಾಮಾಂತರದ ೧೧ ಸನ್ನದುಗಳು, ಮೈಸೂರು ನಗರದ ೧೩ ಸನ್ನದುಗಳು, ಬೆಂಗಳೂರು ದಕ್ಷಿಣದ ೧೧ ಸನ್ನದುಗಳು ಮತ್ತು ಉಡುಪಿಯ ೮ ಸನ್ನದುಗಳು ಸೇರಿ ಒಟ್ಟು ೪೩ ಸನ್ನದುಗಳೊಂದಿಗೆ ಇ-ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಹೆಚ್ಚಿನ ಮಾಹಿತಿ ಹಾಗೂ ನೆರವು: ಇ-ಹರಾಜಿನ ಅಧಿಸೂಚನೆ, ಬಿಡ್ಡಿಂಗ್ಗಾಗಿ ಹೆಸರು ನೋಂದಾಯಿಸಿಕೊಳ್ಳುವ ವಿಧಾನ, ಯೂಸರ್ ಮ್ಯಾನುವಲ್ (Useಡಿ ಒಚಿಟಿuಚಿಟ), ಸಾಮಾನ್ಯ ಪ್ರಶ್ನೋತ್ತರಗಳು (ಈಂಕಿs) ಮತ್ತು ಸಂಪೂರ್ಣ ಮಾಹಿತಿ ನೀಡುವ ವಿಡಿಯೋ ಟ್ಯುಟೋರಿಯಲ್ಗಳು ಅಬಕಾರಿ ಇಲಾಖೆಯ ಅಧಿಕೃತ ವೆಬ್ಸೈಟ್ hಣಣಠಿs://sಣಚಿಣeexಛಿise.ಞಚಿಡಿಟಿಚಿಣಚಿಞಚಿ.gov.iಟಿ ಹಾಗೂ ಒSಖಿಅ ಪೋರ್ಟಲ್ hಣಣಠಿs://ತಿತಿತಿ.msಣಛಿeಛಿommeಡಿಛಿe.ಛಿomನಲ್ಲಿ ಲಭ್ಯವಿರುತ್ತವೆ ಎಂದು ರಾಜ್ಯ ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.