ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ, ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿ ನಿವಾಸಿ ಪಾರ್ವತಿ ಹರಿಹರ (೫೫) ತಾ. ೧೭ ರಂದು ನಿಧನರಾದರು. ೨೦೦೮ರ ಅವಧಿಯಲ್ಲಿ ಪಾರ್ವತಿ ಅವರು ಪ.ಪಂ. ಅಧ್ಯಕ್ಷರಾಗಿದ್ದರು. ಮೃತರು ಪತಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಸಂತಾಪ
ಪಾರ್ವತಿ ಅವರ ನಿಧನಕ್ಕೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
* ಮಕ್ಕಂದೂರು ಗ್ರಾಮದ, ಹೆಮ್ಮೆತ್ತಾಳು ನಿವಾಸಿ, ಕೊಂಬನ ಗುರುನಾಥ (ಗಿರಿ) ಅವರ ಪತ್ನಿ ಹೇಮಾವತಿ (ಗಂಗೆ- (೫೭) - ತವರುಮನೆ-ಕೂಡಕಂಡಿ) ತಾ. ೧೭ ರಂದು ನಿಧನರಾದರು. ಮೃತರು ಪತಿ, ಈರ್ವರು ಪುತ್ರರನ್ನು ಅಗಲಿದ್ದಾರೆ.
* ಆದಾಯ ತೆರಿಗೆ ಇಲಾಖೆಯ ನಿವೃತ್ತ ಸಿಬ್ಬಂದಿ, ಮಡಿಕೇರಿ ನಗರದ ಕುಂಬಳಗೇರಿ ಉಕ್ಕುಡದ ನಿವಾಸಿ ಹೆಚ್.ಬಿ. ಕೃಷ್ಣಪ್ಪ (೭೪) ತಾ. ೧೭ ರಂದು ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. ೧೮ ರಂದು (ಇಂದು) ಕುಂಬಳಗೇರಿ ಉಕ್ಕುಡದಲ್ಲಿ ನಡೆಯಲಿದೆ.
* ಮೂಲತಃ ಬೇಗೂರು ನಿವಾಸಿ, ಪ್ರಸ್ತುತ ಗೋಣಿಕೊಪ್ಪದಲ್ಲಿ ನೆಲೆಸಿದ್ದ ಮಲ್ಲಂಡ ಆಶ (೫೨) (ತವರುಮನೆ ಮಾಯಮುಡಿ ಬಲ್ಯಂಡ) ತಾ. ೧೭ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೮ರಂದು (ಇಂದು) ಹಗಲು ೧೧ ಗಂಟೆಯ ನಂತರ ಬೇಗೂರಿನಲ್ಲಿ ನಡೆಯಲಿದೆ.