ಸೋಮವಾರಪೇಟೆ,ಜು.೧೫: ಸಮೀಪದ ಅರೆಯೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಗರ್ಭಗೃಹ ನಿರ್ಮಾಣದ ಗರ್ಭನ್ಯಾಸ ಕಾರ್ಯಕ್ರಮವು ಶುಭ ಮುಹೂರ್ತದಲ್ಲಿ ಭಕ್ತಿಭಾವದಿಂದ ನೆರವೇರಿತು.

ತಂತ್ರಿಗಳಾದ ವೇದಮೂರ್ತಿ ಕೆಮ್ಮಂಜೆ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಹಾಗೂ ವಾಸ್ತುಶಿಲ್ಪಿ ಪಿ.ಜೆ. ಜಗನ್ನಿವಾಸ ರಾವ್ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳಲ್ಲಿ ಗರ್ಭನ್ಯಾಸ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಅರೆಯೂರು ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಎನ್. ಪಾಪಯ್ಯ, ಉಪಾಧ್ಯಕ್ಷ ವೆಂಕಟೇಶ್, ಕಿರಣ್, ದರ್ಶನ್ ಕುಮಾರ್, ಯಶವಂತ್, ಉತ್ತಪ್ಪ, ವಿನೋದ್, ಹರೀಶ್ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.