ಪೊನ್ನಂಪೇಟೆ, ಜು.೧೫: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ದ್ವಿತೀಯ ಎಂ.ಕಾA ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಕಾA ವಿಭಾಗದ ಮುಖ್ಯಸ್ಥೆ ಕೆ.ಕೆ.ಚಿತ್ರಾವತಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿತ ಜ್ಞಾನ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಪರಿಸ್ಥಿತಿಯನ್ನು ನಿಭಾಯಿಸುವ ಗುಣ ಇರಬೇಕು. ಶ್ರಮದೊಂದಿಗೆ ಯುಕ್ತಿಯಿಂದಲೂ ಕೆಲಸ ಮಾಡಬೇಕು. ಯಶಸ್ವಿಯಾಗಲು ಸುಲಭ ದಾರಿ ಇಲ್ಲ. ಅವಿರತ ಪರಿಶ್ರಮವೇ ಮುಖ್ಯ ಎಂದು ಹೇಳಿದರು.
ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ೨ ವರ್ಷದ ಕಾಲೇಜು ಅನುಭವಗಳನ್ನು ಹಂಚಿಕೊAಡರು. ಪ್ರಥಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭ ಉಪನ್ಯಾಸಕರಾದ ಎನ್.ಪಿ.ರೀತಾ, ಬಿ. ಎಸ್. ದೀಪ್ತಿ, ಕಾವೇರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ.ಸAತೋಷ್ ಉಪಸ್ಥಿತರಿದ್ದರು.