ವೀರಾಜಪೇಟೆ, ಜು. ೧೫: ಮರ ಮತ್ತು ಕಬ್ಬಿಣ ಸಾಮಗ್ರಿಗಳಿಂದ ತಯಾರಿಸುವ ಪಿಠೋಪಕರಣಗಳ ಮಾಲೀಕರು ಮತ್ತು ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ನೂತನವಾಗಿ ಸಂಘ ರಚಿಸಲಾಗಿದೆ.

ಘಟಕ ಮಾಲೀಕರು ಮತ್ತು ಕಾರ್ಮಿಕರ ಸಂಘ ವೀರಾಜಪೇಟೆ ವತಿಯಿಂದ ವೀರಾಜಪೇಟೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯ ಸ್ವಾಗತ್ ಕಟ್ಟಡ ಸಭಾಂಗಣದಲ್ಲಿ ಪ್ರಥಮ ಸಭೆ ನಡೆಯಿತು.

ಪಿಠೋಪಕರಣ ತಯಾರಿಕಾ ಕ್ಷೇತ್ರದಲ್ಲಿ ಮಾಲೀಕರು ಮತ್ತು ಕಾರ್ಮಿಕರು ಹಲವಾರು ಜ್ವಲಂತ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸೂಕ್ತವಾದ ಮಾಹಿತಿಗಳ ಕೊರತೆಯಿದೆ. ಕಾರ್ಮಿಕರ - ಮಾಲೀಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಂಘದ ಅವಶ್ಯಕತೆಯಿದೆ. ಸಂಘಟಿತ ಹೋರಾಟ ಮತ್ತು ನೋಂದಾಯಿತ ಸಂಘಟನೆಯಿAದ ಮಾತ್ರ ಹಕ್ಕುಗಳನ್ನು ಪಡೆಯುವಂತಾಗುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಶಕ್ತವಾದ ಸಂಘ ರೂಪುಗೊಳ್ಳಲು ಸಂಘವನ್ನು ನೋಂದಾಯಿಸುವುದು, ಕಾನೂನು ಸಲಹೆಗಾರರನ್ನು ನೇಮಕಾತಿಗೊಳಿಸುವಂತೆ ತೀರ್ಮಾನಿಸಲಾಯಿತು.

ಅಧ್ಯಕ್ಷರಾಗಿ ಎನ್.ಸಿ. ವಿಜಯ ಕುಮಾರ್, ಉಪಾಧÀ್ಯಕ್ಷರಾಗಿ ಎಂ. ಸುರೇಶ್ ಕುಮಾರ್, ಪ್ರಧಾನ ಕಾರ್ಯದÀರ್ಶಿಯಾಗಿ ಎಂ.ಸಿ. ಉತ್ತಯ್ಯ, ಸಹ ಕಾರ್ಯದÀರ್ಶಿಯಾಗಿ ಮಹಾದೇವ, ಖಜಾಂಚಿಯಾಗಿ ಸಿದ್ದರಾಜು, ಆಯ್ಕೆಗೊಂಡರು. ಸದಸ್ಯರಾಗಿ ಪ್ರಭಾಕರ್ ಟಿ.ಸಿ., ದಾಮೋದರ್, ಹರಿದಾಸ್ ಕೆ., ಶಿಜ, ಕೆ.ಜೆ. ರವೀಂದ್ರ, ನಿತೀನ್, ಪ್ರವೀಣ್, ಶಶಿಧರ್ ಎಂ.ಎನ್, ಗಂಗಾಧರ, ಎಂ.ಎ. ಮೋಹನ್ ಆಯ್ಕೆಗೊಂಡರು. ಸಭೆಯಲ್ಲಿ ವೀರಾಜಪೇಟೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಿಂದ ಕಾರ್ಮಿಕರು ಮತ್ತು ಮಳಿಗೆ ಮಾಲೀಕರು ಹಾಜರಿದ್ದರು.