ಕೂಡಿಗೆ, ಜು. ೧೫: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಾಲೇಜು ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಶಿಥಿಲಗೊಂಡಿರುವ ಮೇಲ್ಛಾವಣಿಯ ದುರಸ್ತಿ ಕಾಮಗಾರಿ ಉದ್ಯಮಿ, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಹಾಗೂ ನಾಪಂಡ ಮುದ್ದಪ್ಪ ಅವರ ಸಹಕಾರದೊಂದಿಗೆ ರೂ. ೩೫ ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ.

ಕಾಲೇಜಿಗೆ ನೂತನ ಮೇಲ್ಛಾವಣಿ, ತಳಭಾಗದ ಸಂಪೂರ್ಣ ಕಾಂಕ್ರಿಟೀಕರಣ ಸೇರಿದಂತೆ ಕೊಠಡಿಗಳ ದುರಸ್ತಿ ಹಾಗೂ ವಿವಿಧ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯನ್ನು ಸಂಸ್ಥೆಯ ಕಾರ್ಯದರ್ಶಿ ರಾಜಶೇಖರ್, ಉದ್ಯಮಿಗಳಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ, ಸಂಸ್ಥೆಯ ನಿರ್ದೇಶಕ ಮಾಜಿ ಸೈನಿಕ ಪುಟ್ಟೇಗೌಡ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಪರಿಶೀಲಿಸಿದರು.