ಹಾವು.., ಎಂದಾಕ್ಷಣ ಎಲ್ಲರೂ ಹೌಹಾರುವವರೇ., ಹಾವನ್ನು ಕಂಡರAತೂ ಎದ್ದೆನೋ ಬಿದ್ದೆನೋ ಅಂತ ಓಡುವವರೇ ಹೆಚ್ಚು., ಬಹುತೇಕ ಎಲ್ಲರಿಗೂ ಹಾವು ಅಂದರೆ ಭಯವೇ., ಕೆಲವರಿಗೆ ಅಸಹ್ಯ., ಇನ್ನೂ ಕೆಲವರಿಗೆ ಹಾವುಗಳೆಂದರೆ ಅಚ್ಚುಮೆಚ್ಚು. ಹಾವನ್ನು ಕಂಡರೆ ಸಾಕು ಹೊಡೆದು, ಬಡಿದು ಕೊಲ್ಲುವವರೇ ಹೆಚ್ಚು., ಆದರೆ ಕೆಲವರು ಅದನ್ನು ಹಿಡಿದು ರಕ್ಷಿಸಿದರೆ, ಹಾವುಗಳನ್ನು ಮುದ್ದಿನಿಂದ ಸಾಕಿ ಸಲಹುವ ಉರಗಪ್ರೇಮಿಗಳೂ ಇದ್ದಾರೆ..! ವಿಶಿಷ್ಟವಾದ ಸರಿಸೃಪಗಳಲ್ಲೊಂದಾದ ಹಾವುಗಳ ಬಗ್ಗೆ ತಿಳಿದುಕೊಳ್ಳಲು., ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾವುಗಳ ದಿನವೆಂದು ಕೂಡ ಆಚರಿಸಲಾಗುತ್ತದೆ ಎಂದರೆ ಅಚ್ಚರಿಯಾಗುತ್ತದಲ್ಲವೇ..!?
ಹಾವುಗಳು ಎಂದರೆ ಬಹುತೇಕ ಜನರಲ್ಲಿ ಅವುಗಳ ಬಗ್ಗೆ ತಪ್ಪು ಕಲ್ಪನೆಗಳಿವೆ. ಅವುಗಳು ಅಪಾಯಕಾರಿ, ಕಚ್ಚುತ್ತವೆ., ಕಚ್ಚಿದರೆ ಸಾವು ಸಂಭವಿಸುತ್ತದೆ ಎಂದೆಲ್ಲ ತಿಳಿದುಕೊಳ್ಳುವವರಿದ್ದಾರೆ. ಆದರೆ, ಹಾವುಗಳಲ್ಲಿ ಹಲವು ಪ್ರಬೇಧಗಳಿವೆ. ಕೆಲವೊಂದು ವಿಷಕಾರಿಯಾಗಿದ್ದರೆ, ಕೆಲವು ವಿಷಗಳಿಲ್ಲದೆ ಸಾಧುಜೀವಿಗಳಾಗಿವೆ. ದೈತ್ಯಾಕಾರದ ಅನಕೊಂಡ ಹಾಗೂ ಹೆಬ್ಬಾವುಗಳನ್ನು ಹೊರತುಪಡಿಸಿ ಇನ್ನುಳಿದ ಹಾವುಗಳೆಲ್ಲವೂ ಕಚ್ಚುತ್ತವೆಯಾದರೂ ಎಲ್ಲದರಲ್ಲೂ ವಿಷವಿರುವದಿಲ್ಲ. ಕೆಲವೊಂದು ಪರೋಪಕಾರಿ ಹಾವುಗಳೂ ಇವೆ. ಕೇರೆ, ಹಸಿರು ಹಾವು, ನೀರು ಹಾವುಗಳು ಮನುಜರಿಗೆ ಉಪಕಾರಿಯೂ ಆಗಿವೆ. ಹಿಂದೂ ಸಂಸ್ಕೃತಿಯಲ್ಲಿ ಹಾವುಗಳನ್ನು ಪೂಜಿಸುವದೂ ಇದೆ.
ಇಂದು ಹಾವು ದಿನ
ಹಾವುಗಳ ಬಗ್ಗೆ ಮಾಹಿತಿಯೊಂದಿಗೆ ಜಾಗೃತಿ ಮೂಡಿಸುವ ಸಲುವಾಗಿ ಜುಲೈ ೧೬ನ್ನು ವಿಶ್ವ ಹಾವು ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಹಾವು ದಿನವು ಹಾವುಗಳ ಬಗ್ಗೆ ತಿಳುವಳಿಕೆ, ಮೆಚ್ಚುಗೆ ಮತ್ತು ಸಂರಕ್ಷಣೆಗೆ ಮೀಸಲಾಗಿರುವ ದಿನವಾಗಿದೆ. ವೈವಿಧ್ಯಮಯ ಹಾವುಗಳು, ಅವುಗಳ ಆವಾಸಸ್ಥಾನಗಳು, ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರ ಮತ್ತು ಅವುಗಳನ್ನು ಹೇಗೆ ಸಂರಕ್ಷಿಸುವುದು ಎಂಬುದರ ಕುರಿತು ತಿಳಿದುಕೊಳ್ಳಲು ಇದು ಒಂದು ಅವಕಾಶವಾಗಿದೆ.
ಮೊದಲ ವಿಶ್ವ ಹಾವು ದಿನವನ್ನು ೨೦೦೯ರಲ್ಲಿ ಆಚರಿಸಲಾಯಿತು. ಪ್ರಪಂಚದಾದ್ಯAತ ೩,೦೦೦ ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಕೆಲವು ಜಾತಿಯ ಹಾವುಗಳು ೪೦ ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು. ಬಹುತೇಕ ಹಾವುಗಳ ಸಂತತಿ ಅಳಿದುಹೋಗಿವೆ. ಅನಕೊಂಡದAತಹ ದೈತ್ಯ ಹಾವುಗಳು ಈಗ ಕಾಣಸಿಗುವದಿಲ್ಲ. ಹೀಗೇ ಹಾವುಗಳ ಮಾಹಿತಿ ಅರಿಯಲು ಈ ದಿನ ಸಹಕಾರಿಯಾಗಲಿದೆ.
ಹಾವುಗಳನ್ನು ಕೊಲ್ಲದಿರಿ
ಬಹುತೇಕ ಜನರು ಹಾವುಗಳನ್ನು ಕಂಡೊಡನೆ ಕೊಲ್ಲಲು ಮುಂದಾಗುತ್ತಾರೆ. ಸಾಮಾನ್ಯವಾಗಿ ಹಾವುಗಳು ಅದಾಗಿಯೇ ಕಚ್ಚುವದಿಲ್ಲ, ಭಯ ಹಾಗೂ ಗಾಬರಿಯಿಂದ ತನ್ನ ಆತ್ಮ ರಕ್ಷಣೆಗೋಸ್ಕರ ಅವುಗಳು ಕಚ್ಚಲು ಮುಂದಾಗುತ್ತವೆ. ಹಾಗಾಗಿ ಹಾವುಗಳನ್ನು ಕಂಡರೆ ಗಾಬರಿಗೊಳ್ಳದೆ ಶಾಂತವಾಗಿದ್ದರೆ ತನ್ನ ಪಾಡಿಗೆ ಹೊರಟು ಹೋಗುತ್ತವೆ. ಮನೆ, ಕಚೇರಿ, ವಾಹನ ಇತ್ಯಾದಿ ಕಡೆಗಳಲ್ಲಿ ಕಂಡುಬAದರೆ ಹಾವು ಹಿಡಿಯುವವರನ್ನು ಸಂಪರ್ಕಿಸಿದರೆ ಅವರುಗಳು ಬಂದು ಸೆರೆಹಿಡಿದು ರಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ಸಮಾಜ ಜಾಗೃತವಾಗಿದ್ದು, ಅಲ್ಲಲ್ಲಿ ಹಾವುಗಳನ್ನು ಹಿಡಿದು ರಕ್ಷಿಸುತ್ತಿರುವದನ್ನು ಕಾಣಬಹುದಾಗಿದೆ. ಪರಿಸರ ಸಮತೋಲನದಲ್ಲಿ ಹಾವುಗಳು ಕೂಡ ಪ್ರಮುಖವಾಗಿದ್ದು, ಅವುಗಳ ರಕ್ಷಣೆ ಮಾಡುವದು ಕೂಡ ನಮ್ಮ ಕರ್ತವ್ಯವಾಗಿದೆ.
? ಕುಡೆಕಲ್ ಸಂತೋಷ್