ಮಡಿಕೇರಿ, ಜು.೧೪: ಒಂದೇ ಸಮನೆ ಏದುಸಿರು ಬಿಡುತ್ತಾ ಓಡುತ್ತಿದ್ದ ಮಂಕ್ಯಾನನ್ನು ತಡೆದ ಗುಂಡ ಕೇಳಿದ ‘ಇದ್ಯಾಕ್ಲಾ ಮಂಕ್ಯಾ ಹಿಂಗೆ ಓಡ್ತೀ., ಯಾರಾರ್ ಹೊಂಟೋದ್ರಾ..?’ ‘ಯೇ., ಇಲ್ಲ ಕನ್ಲಾ..,’ ಅಂದ ಗುಂಡ ಮತ್ತೆ ಓಡಲು ಶುರುವಿಟ್ಟುಕೊಂಡ. ‘ಅಲ್ಲ.., ಇದ್ಯಾಕ್ಲಾ.., ಹೆಂಡ್ರು ಏನಾರೆ ಓಡುಸ್ಬುಟ್ಲಾ..?’ ಮತ್ತೆ ಕೇಳಿದಕ್ಕೆ ‘ಯೇ., ಸುಮ್ಕರ‍್ಲಾ.., ಬುಡು ಸುಮ್ನೆ.,’ ಅಂತ ಮತ್ತೆ ಓಡೋಕೆ ಶುರು ಮಾಡಿದ. ಇದೀಗ ಕುತೂಹಲ ತಡೆಯೋಕಾಗದೆ ಅವನನ್ನು ಅಡ್ಡಗಟ್ಟಿದ ಗುಂಡ ‘ನೀ ನಿಜಾ ಹೇಳಿಲ್ಲಾಂದ್ರೆ ನಿನ್ನ ಬುಡಾಕ್ಕಿಲ್ಲ., ಹೇಳ್ಲಾ ಯಾಕಿಂಗ್ ಓಡ್ತಿಯೇ..?’ ಅಂತ ಪಟ್ಟು ಬಿಡದೆ ಕೇಳಿದ. ಏದುಸಿರು ಬಿಡುತ್ತಾ ಗುಂಡ ವಿಷಯ ಹೇಳತೊಡಗಿದ. ‘ಅಲ್ಲಾ ಕನ್ಲಾ., ನಿಂಗೆ ಇಸ್ಯಾ ಗೊತ್ತಿಲ್ವ..?’ ಅಂತ ಮಂಕ್ಯಾನನ್ನೇ ಪ್ರಶ್ನಿಸಿದ. ‘ತಗಾಳಪ್ಪ., ನೀ ಯಾಕ್ ಒಡ್ತೀ ಅಂತ ನಂಗೆ ಎಂಗ್ಲಾ ಗೊತ್ತಾಗ್ಬೇಕು., ಇದೊಳ್ಳೆ ಕತೆ ಆಯ್ತಲ್ಲ., ಅದು ಯೋನೂಂತ ಒಸಿ ಬುಡ್ಸಿ ಹೇಳ್ಲಾ.,’ ಅಂತ ಗುಂಡ ಹೇಳಿದ. ‘ಅಯ್ಯೋ., ನೀ ಪ್ಯಾಪರ್ ನೋಡಿಲ್ವೇನ್ಲಾ.,? ಅದ್ರಾಗೆ ಹಾಕ್ಯಾರಲ್ಲಾ.., ಏಟೊಂದು ದೊಡ್ಡ ಇಸ್ಯ ಐತೇ..,’ ಅಂತ ಮಂಕ್ಯ ರಾಗ ತೆಗೆದ. ‘ಏ ನಂಗೇನ್ಲಾ ಗೊತ್ತು., ನಾ ಎಲ್ಲಿ ಪ್ಯಾಪರ್ ನೋಡ್ತೀನಿ., ಅದೇನಂತ ಹೇಳ್ಲಾ..,’ ಅಂತ ಹೇಳಿದ. ‘ಯೇ., ಬ್ಯಾಡ ಬುಡು., ನಾ ಯೋಳ್ಬುಟ್ಟು ಮತ್ತೆ ಪ್ರೆöÊಜ್ ನೀ ವಡ್ಕಂಡ್ ಹೋಗ್ಬುಟ್ರೆ..?’ ಅಂತ ಹೇಳಿ ಮಂಕ್ಯ ಮತ್ತೆ ಓಡಲು ತಯಾರಾದ.
ಕುತೂಹಲ ತಡೆ ಯೋಕಾಗದೆ ಗುಂಡ ‘ಏನ್ಲಾ ಯೋಳ್ತಾ ಇದ್ದೀಯಾ., ಪ್ರೆöÊಜು-ಗ್ಯಿಜೂ ಅಂತ., ಸರಿ ಯೇಳ್ಲಾ’ ಎಂದು ಗೋಗರೆದ.
‘ಸರಿ ಬುಡು ಯೋಳ್ತೀನಿ., ನಮ್ ದಕ್ಷಿಣದ ಕಾಶ್ಮೀರ ಐತಲ್ವ., ಅದೇ ಕನ್ಲಾ ಕೊಡಗು ಜಿಲ್ಲೆ., ಅಲ್ಲಿ ಒಂದು ಸ್ಪರ್ಧೆ ಮಡ್ಗವ್ರೆ., ಅಲ್ಲಿಗೆ ವೋಯ್ತಾ ಇದ್ದೀನಿ’ ಅಂತ ಮಂಕ್ಯ ಹೇಳಿದ. ‘ಹೌದಾ., ಅದೆಂತದ್ಲಾ ಅಲ್ಲಿ ಸ್ಪರ್ಧೆ.,? ಹಾಕಿ ಆಟನಾ., ಅದು ನಿಂಗೆ ಬರಾಕಿಲ್ಲ ಬುಡು, ಕಾಯಿಗೆ ಗುಂಡು ಹೊಡ್ಯಾಕೂ ನಿಂಗಾಗವಲ್ದು., ಇನ್ನಾ ಡಾನ್ಸ್ ಮಾಡಕಂತೂ ನಿಂಗೆ ಗೊತ್ತೇ ಇಲ್ಲ ಬುಡು., ಅದು ಬುಟ್ರೆ ಬ್ಯಾರೆ ಎಂತದ್ಲಾ ಅದು.., ನಿಂಗಾಗ್ವAತದ್ದು..? ಎಂದು ಗುಂಡ ಪ್ರಶ್ನೆ ಮಾಡಿದ. ‘ಯೇ., ಅದೆಲ್ಲ ಅಲ್ಲ ಕನ್ಲಾ., ಅದ್ಕೆ ನಂಗೆ ವೋಗಾಕಾಯ್ತದಾ..? ಇದು
ಬೋ ಪಸಂ ದಾಗಯ್ತೆ ಕನ್ಲಾ..,’ ಅಂತ ಮಂಕ್ಯ ಕಣ್ಣರಳಿಸಿಕೊಂಡು ಹೇಳುವಾಗ ಗುಂಡನ ಕಿವಿ ನೆಟ್ಟ ಗಾಗಿ ಕುತೂಹಲ ಇನ್ನೂ ಹೆಚ್ಚಾಯ್ತು. ‘ಸರಿ., ಅದೇನಂತ ವಸಿ ಬೊಗ್ಳು’ ಅಂತ ಹೇಳಿದ.
‘ಕೇಳ್ಲಾ., ಕೊಡಗ್ನಲ್ಲಿ ಮಡಿಕೇರಿ ಐತಲ್ವಾ..? ಅದೇ ಕನ್ಲಾ ರಾಜಾಸೀಟು, ದೇವಸ್ಥಾನ, ಪಾಲ್ಸು ಎಲ್ಲ ಐತಲ್ವ., ಆ ಮಡಿಕೇರಿಲಿ ಯಾವ್ದೋ ಸಂಘದವ್ರು ‘ಗುಂಡಿಯಲ್ಲಿ ರಸ್ತೆ ಹುಡ್ಕೋ’ ಸ್ಪರ್ಧೆ ಮಡ್ಗವ್ರಂತೆ., ಅದ್ಕೆ ನಾ ವೋಯ್ತಿರೋದು ಕನ್ಲಾ.,’ ಅಂತ ಮಂಕ್ಯ ಕುಷಿಯಲ್ಲಿ ಹೇಳುತ್ತಿರೋವಾಗ ಗುಂಡ ತಲೆ ಕೆರೆದುಕೊಳ್ಳೋಕೆ ಶುರುವಿಟ್ಟುಕೊಂಡ.
‘ಅಯ್ಯೇ., ಅದೆಂತ ಸ್ಪರ್ಧೆಯಪ್ಪ., ಗುಂಡಿಲಿ ರಸ್ತೆ ಹುಡ್ಕೋದಾ.,? ವಿಚಿತ್ರ ಐತಲ್ವಾ..?’ ಎಂದು ಪ್ರಶ್ನಿಸಿದ. ‘ಹೌದೋ ಅಪ್ಪ., ಅಲ್ಲಿ ಆಡಳಿತ ಮಾಡ್ತಾ ಇರೋ ಮರ್ಕಟ ಸಭೆ., ಛೇ., ಅಲ್ಲಲ್ಲ., ಮುನಿಸಿಪಾಲ್ಟಿಯವ್ರು ಯಾವ್ದೇ ರಸ್ತೆನ ಸರಿ ಮಾಡಿಲ್ವಂತೆ, ಹಂಗಾಗಿ ರಸ್ತೆ ಹಳ್ಳ ಹತ್ತೋಗಿ ಶಾನೇ ಗುಂಡಿ ಬಿದ್ದವಂತೆ., ರಸ್ತೆನೇ ಇಲ್ದಂಗಾಗಿ ಬರೇ ಗುಂಡಿಯಾಗಿ ಮಳೆಗೆ ಎಲ್ಲ ಕೊಚ್ಕಂಡ್ ಹೊಂಟೋಗ್ತಿದ್ದಾವAತೆ., ಅದ್ಕೆ ಎಲ್ಲಾರೂ ಒಂಚೂರಾದ್ರು ರಸ್ತೆ ಕಾಣಕ್ಕೆ ಸಿಕ್ರೆ ಹುಡುಕಿ ಕೊಡಿ, ಪ್ರೆöÊಜ್ ಕೊಡ್ತೀವಂತ ಸಂಘದವ್ರು ಸ್ಪರ್ಧೆ ಮಡ್ಗೋವ್ರಂತೆ’ ಅಂತ ವಿವರವಾಗಿ ಹೇಳಿದ.
ಎಲ್ಲ ಕೇಳಿಸಿಕೊಂಡ ಗುಂಡನಿಗೆ ತಲೆಬಿಸಿಯಾಗತೊಡಗಿತು. ‘ ಅಲ್ಲ ಲೇ., ಹಿಂಗೂ ಒಂದು ಸ್ಪರ್ಧೆ ಮಡಗ್ತಾರೇನ್ಲಾ.,? ಎಂತ ವಿಚಿತ್ರನಪ್ಪಾ., ನಂಗೊAದೂ ತಿಳಿವಲ್ದು’ ಅಂತ ತಲೆ ಮೇಲೆ ಕೈ ಇಟ್ಟುಕೊಂಡ. ‘ಅದೇ ಕನ್ಲಾ., ನಂಗೂ ಅಂಗೇಯಾ ಅನ್ಸಿದು., ಆಮ್ಯಾಕೆ ಗೊತ್ತಾತು ಮೊಬೈಲ್‌ಲಿ ಮಡಿಕೇರಿ ರಸ್ತೆನ ನೋಡ್ದ ಮ್ಯಾಕೆ. ಸ್ಪರ್ಧೆ ಮಡ್ಗ್ಬ್ಯಾಕಾದ್ರೆ ಆ ರಸ್ತೆ ಏಟೊಂದು ಕರಾಬ್ ಆಗರ‍್ಬೋದೂಂತ. ಹಂಗಾಗಿ ಒಂದು ಕೈ ನೋಡೇಬುಡೋವಾಂತ ಹೊಂಟೀನಿ’ ಅಂತ ಹೇಳಿದ. ‘ಸರಿ ಕನ್ಲಾ., ಆದ್ರೆ ಮಡಿಕೇರಿಯವ್ರು ಸುಮ್ಕೆ ರ‍್ತಾರ., ಮುನಿಸಿಪಾಲ್ಟಿಯವ್ರö್ನ ಕೇಳಲ್ವಾ., ಸ್ಟೆçöÊಕ್- ಪೈಕ್ ಮಾಡಲ್ವಾ..? ಅವ್ರೆ ರಸ್ತೆ ಹುಡ್ಕಿ ಕೊಟ್ಟು ಪ್ರೆöÊಜ್ ತಕಳಾಕಿಲ್ವಾ..?’ ಅಂತ ಗುಂಡ ಮತ್ತೆ ಪ್ರಶ್ನೆ ಕೇಳಿದ. ‘ಅಯ್ಯೋ., ಬುಡಪ್ಪ, ಮಡ್ಕೇರಿಯವ್ರು ಆಟೊಂದು ಬುದ್ಧಿವಂತ್ರು, ಪ್ರಶ್ನೆ ಕೇಳೋರು, ಸ್ಟೆçöÊಕ್ ಮಾಡೋರಾಗಿದ್ದರೆ ಅವ್ರ ಪ್ಯಾಟೆ ರಸ್ತೆ ಆಟೊಂದು ಹಳ್ಳ ಹಿಡಿತ್ತಿತ್ತೇನ್ಲಾ,?’ ಅಂತ ಮಂಕ್ಯ ವಿಷಯ ತಿಳಿಸಿದ. ‘ಹಂಗಾ ಇಸ್ಯಾ., ಹೋಗ್ಲಿ ಬುಡ್ಲಾ., ನಾನೂ ಬತ್ತೀನಿ., ಹೋಗ್ಬುಟ್ಟು ಇಬ್ರೂ ಸೇರಿ ಹುಡುಕ್ಬುಟ್ಟು ಪ್ರೆöÊಜ್ ತಕಂಡ್ ಆ ದುಡ್ನಾಗೆ ಒಂಚೂರು ಎಣ್ಣೆ ಬುಟ್ಕಂಡ್ ಬರೋಮಂತೆ.,’ ಎಂದು ಗುಂಡ ಹೇಳಿದ.
ಸರಿ ಅಂದುಕೊAಡು ಇಬ್ಬರೂ ಮಡಿಕೇರಿಗೆ ಬಂದು ಇದೀಗ ರಸ್ತೆ ಹುಡುಕುತ್ತಾ ಇದ್ದಾರಂತೆ., ಆದ್ರೆ ಅವರಿಗೂ ಗುಂಡಿ ಯಾವದು., ರಸ್ತೆ ಯಾವದೂ ಅಂತಾನೇ
ಗೊತ್ತಾಗ್ತಿಲ್ಲವಂತೆ..!? -ಕುಡೆಕಲ್ ಸಂತೋಷ್